BBK 12: ಮನೆಗೆ ಬಂದ್ರು ರಾಶಿಕಾ, ಸೂರಜ್ ಕುಟುಂಬಸ್ಥರು; ಇಲ್ಲಿಯೂ ಮುಂದುವರಿದ ಗಿಲ್ಲಿ ತರಲೆ!

Published : Dec 23, 2025, 07:29 AM IST

ಈ ವಾರ ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬಸ್ಥರು ಆಗಮಿಸಿದ್ದು, ಭಾವನಾತ್ಮಕ ವಾತಾವರಣ ನಿರ್ಮಾಣವಾಗಿದೆ. ರಾಶಿಕಾ ಅವರ ತಾಯಿ ಮತ್ತು ಸೋದರ ಎಂಟ್ರಿ ಕೊಟ್ಟರೆ, ಅನಿರೀಕ್ಷಿತವಾಗಿ ತನ್ನ ತಾಯಿಯನ್ನು ಕಂಡು ಸೂರಜ್ ಭಾವುಕರಾಗಿದ್ದಾರೆ. ಈ ಕ್ಷಣಗಳು ಸ್ಪರ್ಧಿಗಳಲ್ಲಿ ಹೊಸ ಹುರುಪು ತಂದಿದೆ.

PREV
15
ಕುಟುಂಬಸ್ಥರ ಆಗಮನ

ಈ ವಾರ ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬಸ್ಥರು ಆಗಮಿಸುತ್ತಿದ್ದಾರೆ. ಮೊದಲನೇಯದ್ದಾಗಿ ರಾಶಿಕಾ ಅವರ ಸೋದರ ಮತ್ತು ತಾಯಿ ಆಗಮಿಸಿದ್ದಾರೆ. ಎರಡನೇಯದ್ದಾಗಿ ಸೂರಜ್ ತಾಯಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

25
ರಾಶಿಕಾ ಸೋದರ

ಇಂದಿನ ಪ್ರೋಮೋದಲ್ಲಿ ಕುಟುಂಬಸ್ಥರ ಆಗಮನದ ಭಾವನಾತ್ಮಕ ದೃಶ್ಯಗಳನ್ನು ತೋರಿಸಲಾಗಿದೆ. ಮೊದಲಿಗೆ ರಾಶಿಕಾ ಸೋದರ ಹೆಲ್ಮೆಟ್ ಧರಿಸಿಕೊಂಡು ಮನೆಯೊಳಗೆ ಬಂದಿದ್ದಾರೆ. ಸ್ಪರ್ಧಿಗಳೆಲ್ಲರೂ ಹಿಡಿದು ಹೆಲ್ಮೆಟ್ ಕಳಚಿದಾಗ ಬಂದಂತಹ ವ್ಯಕ್ತಿ ರಾಶಿಕಾ ಸೋದರ ಅಂತ ಗೊತ್ತಾಗಿದೆ. ನಂತರ ಮುಖ್ಯದ್ವಾರದ ಬಳಿಕ ರಾಶಿಕಾ ತಾಯಿ ಆಗಮಿಸಿದ್ದಾರೆ.

35
ಗಿಲ್ಲಿ ತರಲೆ

ರಾಶಿಕಾ ತಾಯಿ ಬರುತ್ತಿದ್ದಂತೆ ಗಿಲ್ಲಿ ಇಲ್ಲಿಯೂ ತರಲೆ ಮಾಡಿದ್ದಾರೆ. ಮನೆಯಲ್ಲಿರುವ ಐವರು ಪುರುಷ ಸ್ಪರ್ಧಿಗಳಲ್ಲಿ ನಿಮಗ್ಯಾರು ಇಷ್ಟ ಅಂತ ಕೇಳಿದ್ದಾರೆ. ಈ ಪ್ರಶ್ನೆಗೆ ರಾಶಿಕಾ ತಾಯಿ ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟವಾಗಿಲ್ಲ. ಆದ್ರೆ ಪ್ರೋಮೋದಲ್ಲಿ ಗಿಲ್ಲಿ ಎಲ್ಲಾ ಸ್ಪರ್ಧಿಗಳಿಗೆ ಬೇಸರ ಮಾಡಿಸಿದ್ದಾನೆ ಎಂಬರ್ಥದಲ್ಲಿಯೇ ರಾಶಿಕಾ ತಾಯಿ ಹೇಳಿದಂತೆ ತೋರಿಸಲಾಗಿದೆ.

45
ರಾಶಿಕಾ ಮತ್ತು ಸೂರಜ್

ಬಿಗ್‌ಬಾಸ್ ಮನೆಯಲ್ಲಿ ರಾಶಿಕಾ ಮತ್ತು ಸೂರಜ್ ಜೊತೆಯಾಗಿ ಹೆಚ್ಚು ಸಮಯ ಕಳೆಯುತ್ತಾರೆ ಎಂಬುವುದು ಸ್ಪರ್ಧಿಗಳ ಮಾತಾಗಿದೆ. ಇತ್ತ ಸೂರಜ್ ತಾಯಿ ಆಗಮನಕ್ಕೂ ಮೊದಲು ಕ್ಯಾರಿಯರ್ ಬಾಕ್ಸ್ ಜೊತೆ ಪತ್ರವೊಂದನ್ನು ಕಳುಹಿಸಲಾಗುತ್ತದೆ. ನೀನು ಇಲ್ಲದೇ ಅಡುಗೆ ಮಾಡಲು ಮನಸ್ಸು ಬರುತ್ತಿಲ್ಲ. ನನಗಾಗಿ ಏನಾದ್ರು ಅಡುಗೆ ಮಾಡಿ ಕಳಿಸು ಸಂದೇಶವುಳ್ಳ ಪತ್ರ ಬರುತ್ತದೆ.

ಇದನ್ನೂ ಓದಿ: ಕಿಚ್ಚನ ವೀರಾವೇಶ ದರ್ಶನ್ ವಿರುದ್ಧ ಅಲ್ಲ, ಪೈರಸಿ ಬಗ್ಗೆ!

55
ಭಾವುಕರಾದ ಸೂರಜ್

ಪತ್ರ ನೋಡ್ತಿದ್ದಂತೆ ಭಾವುಕರಾದ ಸೂರಜ್, ಮರುಕ್ಷಣವೇ ತಾಯಿಗಾಗಿ ಅಡುಗೆ ತಯಾರಿಸಲು ಸಿದ್ಧರಾಗುತ್ತಾರೆ. ಅಡುಗೆಯನ್ನು ಬಾಕ್ಸ್‌ನಲ್ಲಿ ತುಂಬಿಸಿ ಕನ್ಫೆಷನ್ ರೂಮ್‌ನಲ್ಲಿರಿಸಲು ಹೋದಾಗ ತಾಯಿಯನ್ನ ನೋಡಿ ಆಶ್ಚರ್ಯಚಕಿತರಾದ ಸೂರಜ್ ಕಣ್ಣೀರು ಹಾಕುತ್ತಾ ಅಮ್ಮನನ್ನು ಅಪ್ಪಿಕೊಳ್ಳುತ್ತಾರೆ.

ಇದನ್ನೂ ಓದಿ: Bigg Bossನಲ್ಲಿ 10 ಪಟ್ಟು ಹೆಚ್ಚು ಸಂಭಾವನೆ ಸಿಕ್ಕಿದ್ದು ನಿಜ: ರಜತ್, ಚೈತ್ರಾ​ ಕುಂದಾಪುರ ರಿವೀಲ್​ ಮಾಡಿದ್ದೇನು?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories