ದೃಷ್ಟಿಬೊಟ್ಟು ಸೀರಿಯಲ್ ನಲ್ಲಿ ದೃಷ್ಟಿಯಾಗಿ ಕನ್ನಡಿಗರ ಮನಗೆದ್ದಿದ್ದ ನಟಿ ಅರ್ಪಿತಾ ಮೋಹಿತೆ, ಕನ್ನಡ ಸೀರಿಯಲ್ ಮುಗಿದ ಮೇಲೆ ಕಾಣೆಯಾಗಿದ್ರು, ಇದೀಗ ತೆಲುಗಿನ ‘ವಾರಾಸುರಾಲು’ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ‘ದೃಷ್ಟಿಬೊಟ್ಟು’. ಈ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ದೃಷ್ಟಿಯಾಗಿ ಮೋಡಿ ಮಾಡಿದ ನಟಿ ಅರ್ಪಿತಾ ಮೋಹಿತೆ. ಇವರು ಎರಡು ಶೇಡ್ ಗಳಲ್ಲಿ ಜನರನ್ನು ರಂಜಿಸಿದ್ದರು.
25
ದೃಷ್ಟಿಬೊಟ್ಟು ಸೀರಿಯಲ್
ದೃಷ್ಟಿಬೊಟ್ಟು ಧಾರಾವಾಹಿಯಲ್ಲಿ ಸಮಾಜದ ಕೆಟ್ಟ ಕಣ್ಣುಗಳಿಗೆ ಹೆದರಿ ಸುಂದರ ಹೆಣ್ಣುಮಗಳಿಗೆ ತಾಯಿ ಕಪ್ಪು ಬಣ್ಣವನ್ನು ಮೆತ್ತಿ, ಅದೇ ಆಕೆಯ ನಿಜ ರೂಪ ಎಂದು ಬಿಂಬಿಸುತ್ತಾಳೆ. ನಂತರ ಆಕೆಯ ಜೀವನದಲ್ಲಿ ದತ್ತನ ಆಗಮನ, ಬಿಳಿ ಬಣ್ಣದ ಅನಾವರಣ, ಶತ್ರುತ್ವ ಎಲ್ಲವೂ ಅದ್ಭುತವಾಗಿ ಮೂಡಿ ಬಂದಿತ್ತು.
35
ದಿಢೀರ್ ಆಗಿ ಮುಕ್ತಾಯಗೊಂಡ ಸೀರಿಯಲ್
ದತ್ತಾ ಭಾಯ್ ಮತ್ತು ದೃಷ್ಟಿ ಕಾಂಬಿನೇಶನ್ ನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು,ಆದರೆ ಧಾರಾವಾಹಿ ಇಂಟ್ರೆಸ್ಟಿಂಗ್ ಆಗಿ ಸಾಗುತ್ತಿರುವ ಹೊತ್ತಿಗೆ, ದಿಢೀರ್ ಆಗಿ ಇದ್ದಕ್ಕಿದ್ದಂತೆ ಸೀರಿಯಲ್ ನಿಲ್ಲಿಸಿದ್ದರು. ಇದರಿಂದ ವೀಕ್ಷಕರು ಬೇಸರ ಹೊರ ಹಾಕಿದ್ದರು.
ಇದೀಗ ಕೆಲವು ತಿಂಗಳ ಬ್ರೇಕ್ ಬಳಿಕ ಅರ್ಪಿತಾ ಮೋಹಿತೆ ತೆಲುಗು ಸೀರಿಯಲ್ ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ತೆಲುಗಿನ ಸ್ಟಾರ್ ಮಾ ವಾಹಿನಿಯ ‘ವಾರಸುರಾಲು’ ಧಾರಾವಾಹಿಗೆ ಅರ್ಪಿತಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
55
ಏನ್ ಮಾಡ್ತಿದ್ದಾರೆ ಅರ್ಪಿತಾ
ಅರ್ಪಿತಾ ಮೋಹಿತೆ ಕನಕಪುರದ ಹುಡುಗಿ. ಬೆಂಗಳೂರಿನಲ್ಲೇ ವಾಸವಾಗಿದ್ದಾರೆ. ಬಿಕಾಂ ಮುಗಿಸಿರುವ ಅರ್ಪಿತಾ ಈ ಹಿಂದೆ ಕೆಲವು ಧಾರಾವಾಹಿಗಳಲ್ಲಿ ಕೂಡ ನಟಿಸಿದಾರೆ. ಆದರೆ ಅವರಿಗೆ ಹೆಚ್ಚು ಜನಪ್ರಿಯತೆ ನೀಡಿದ ಧಾರಾವಾಹಿ ಅಂದ್ರೆ ಅದು ದೃಷ್ಟಿ ಬೊಟ್ಟು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.