ಬಿಗ್‌ಬಾಸ್ ಸೀಸನ್ 12ರ ಮಾಜಿ ಸ್ಪರ್ಧಿ ಮಂಜುಭಾಷಿಣಿ ಅವರು ಫೈನಲ್‌ನಲ್ಲಿ ತಾವು ಯಾರಿಗೆ ಮತ ಹಾಕಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ತಮ್ಮ 99 ಮತಗಳನ್ನು ಮೂವರು ಸ್ಪರ್ಧಿಗಳಿಗೆ ಸಮಾನವಾಗಿ ಹಂಚಿದ್ದು, ಇವರಲ್ಲಿ ಯಾರು ಗೆದ್ದರೂ ಸಂತೋಷ ಎಂದಿದ್ದಾರೆ.
ಬಿಗ್‌ಬಾಸ್ ಸೀಸನ್ 12ರ ವಿನ್ನರ್ ಯಾರು ಆಗಬೇಕು ಮತ್ತು ತಾವು ಯಾರಿಗೆ ವೋಟ್ ಮಾಡಿದ್ದೇನೆ ಎಂಬ ಮಾಹಿತಿಯನ್ನು ನಟಿ ಮಂಜುಭಾಷಿಣಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಂಜುಭಾಷಿಣಿ ಸಹ ಈ ಸೀಸನ್ ಸ್ಪರ್ಧಿಯಾಗಿದ್ದರು.
25
ಮೂವರಿಗೆ ಮತ ಹಂಚಿದ ಮಂಜುಭಾಷಿಣಿ
ಮಂಜುಭಾಷಿಣಿ ಮೂರು ಸ್ಪರ್ಧಿಗಳಿಗೆ ಸಮಾನವಾಗಿ ತಮ್ಮ 99 ಮತಗಳನ್ನು ಹಂಚಿಕೆ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿಯೇ ಈ ಮೂವರಲ್ಲಿ ಯಾರಾದ್ರೂ ಗೆದ್ದರು ಖುಷಿ ಎಂದು ಬರೆದುಕೊಂಡಿದ್ದಾರೆ. ಮಂಜುಭಾಷಿಣಿ ಯಾರಿಗೆಲ್ಲಾ ಮತ ನೀಡಿದ್ದಾರೆ ಎಂದು ನೋಡೋಣ ಬನ್ನಿ.
35
ಮಂಜು ಭಾಷಿಣಿ ಪೋಸ್ಟ್ ಹೀಗಿದೆ.
ನನ್ನ ಅಮೂಲ್ಯವಾದ 99 ಮತಗಳು ಈ ಮೂವರಿಗೆ ಸಮವಾಗಿ ನೀಡಿದ್ದೇನೆ. ಇದ್ದ ಮೂರು ವಾರಗಳಲ್ಲಿ ನನಗೆ ಅತ್ಯಂತ ಪ್ರೀತಿ ಪಾತ್ರರಾಗಿದ್ದವರಲ್ಲಿ ಈ ಮೂವರು ಈಗ ಬಿಗ್ ಬಾಸ್ 12 ರ ಫೈನಲ್ ಸ್ಪರ್ಧಿಗಳು. ಇವರಲ್ಲಿ ಯಾರೇ ಗೆದ್ದರೂ ಸಂತೋಷ ಎಂದು ಮಂಜುಭಾಷಿಣಿ ತಿಳಿಸಿದ್ದಾರೆ.
ಈ ಹಿಂದಿನ ಎಲ್ಲಾ ಸೀಸನ್‌ಗಳಿಗಿಂತಲೂ 12ನೇ ಆವೃತ್ತಿ ಹೆಚ್ಚು ಜನಪ್ರಿಯವಾಗಿದೆ. ಶನಿವಾರದ ಸಂಚಿಕೆಯಲ್ಲಿ ಅಲ್ಲಿಯವರೆಗೆ 37 ಕೋಟಿ ಮತಗಳು ಬಂದಿವೆ. ವಿನ್ನರ್ ಮತ್ತು ರನ್ನರ್ ನಡುವಿನ ಅಂತರ ತುಂಬಾ ಕಡಿಮೆ ಇದೆ ಎಂದು ಸುದೀಪ್ ಮಾಹಿತಿ ನೀಡಿದ್ದಾರೆ. ಇಂದು ಸಂಜೆ 6 ಗಂಟೆಯಿಂದ ಬಿಗ್‌ಬಾಸ್ ಫಿನಾಲೆ ಪ್ರಸಾರವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.