Bigg Boss Dhruvanth new look : ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಧ್ರುವಂತ್ ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಉದ್ದದ ಕೂದಲಿಗೆ ಅವರು ಕತ್ತರಿ ಹಾಕಿದ್ದಾರೆ. ಅವ್ರ ಹೊಸ ಲುಕ್ ಹೇಗಿದೆ ಗೊತ್ತಾ?
ಬಿಗ್ ಬಾಸ್ ಮಾಜಿ ಸ್ಪರ್ಧಿ ಧ್ರುವಂತ್ ಹೇರ್ ಸ್ಟೈಲ್ ಬದಲಾಗಿದೆ. ಉದ್ದದ ತಲೆಕೂದಲು ಬಿಟ್ಕೊಂಡು, ಆಗಾಗ ಜುಟ್ಟು ಕಟ್ಕೊಂಡು ಬಿಗ್ ಬಾಸ್ ಮನೆಯಲ್ಲಿ ಓಡಾಡ್ತಿದ್ದ ಧ್ರುವಂತ್, ಈಗ ತಮ್ಮ ಸ್ಟೈಲ್ ಬದಲಿಸಿಕೊಂಡಿದ್ದಾರೆ. ಹೊಸ ಗೆಟಪ್ ನಲ್ಲಿ ಫೋಟೋಕ್ಕೆ ಫೋಸ್ ನೀಡಿದ್ದಾರೆ.
26
ಕೂದಲಿಗೆ ಕತ್ತರಿ
ಮನೆಯಿಂದ ಹೊರಗೆ ಬರ್ತಿದ್ದಂತೆ ಧ್ರುವಂತ್ ಮಾಡಿದ ಮೊದಲ ಕೆಲ್ಸ ಇದು. ಬಿಗ್ ಬಾಸ್ ಫಿನಾಲೆ ವೇಳೆ ಹೇರ್ ಕಟ್ ಮಾಡ್ಕೊಳ್ಬೇಕು ಎನ್ನುವ ಪ್ಲಾನ್ ನಲ್ಲಿ ಧ್ರುವಂತ್ ಇದ್ದಂತಿತ್ತು. ಆದ್ರೆ ಫಿನಾಲೆ ಮಿಡ್ ವೀಕ್ ನಲ್ಲಿ ಧ್ರುವಂತ್ ಮನೆಯಿಂದ ಹೊರಗೆ ಬಂದಿದ್ದು, ಮನೆಯಿಂದ ಹೊರಗೆ ಬಂದ್ಮೇಲೆ ಧ್ರುವಂತ್ ಹೇರ್ ಗೆ ಕತ್ತರಿ ಬಿದ್ದಿದೆ.
36
ಮಿಡ್ ವೀಕ್ ಎಲಿಮಿನೇಶನ್
ಬಿಗ್ ಬಾಸ್ 12ರಲ್ಲಿ ಧ್ರುವಂತ್ ಉತ್ತಮ ಆಟ ಪ್ರದರ್ಶನ ಮಾಡಿದ್ದರು. ಒಂದು ವಾರಗಳ ಕಾಲ ಸಿಕ್ರೇಟ್ ರೂಮು ಸೇರಿದ್ದ ಧ್ರುವಂತ್, ಸಿಕ್ರೇಟ್ ರೂಮಿನಿಂದ ಹೊರಗೆ ಬರ್ತಿದ್ದಂತೆ ತಮ್ಮ ವ್ಯಕ್ತಿತ್ವದಲ್ಲಿ ಸ್ವಲ್ಪ ಬದಲಾವಣೆ ಮಾಡ್ಕೊಂಡಿದ್ರು. ಆದ್ರೆ ಉಳಿದ ಸ್ಪರ್ಧಿಗಳ ಜೊತೆ ಅವರಿಗೆ ಸ್ಪರ್ಧೆ ಸಾಧ್ಯವಾಗ್ಲಿಲ್ಲ. ಹಾಗಾಗಿ ಫಿನಾಲೆ ವೀಕ್ ಗೆ ಎಂಟ್ರಿಯಾದ್ರೂ ಫಿನಾಲೆ ವೀಕ್ ಮಿಡಲ್ ನಲ್ಲಿ ಬಿಗ್ ಬಾಸ್ ಮನೆಯಿಂದ ಹೊರಗೆ ಬರಬೇಕಾಯ್ತು.
ಬಿಗ್ ಬಾಸ್ ಫಿನಾಲೆ ತಲುಪಲು ಧ್ರುವಂತ್ ಗೆ ಸಾಧ್ಯವಾಗ್ಲಿಲ್ಲ. ಆದ್ರೆ ಧ್ರುವಂತ್ ಆಸೆ ಈಡೇರಿದೆ. ಕಿಚ್ಚನ ಚಪ್ಪಾಳೆ ಸಿಕ್ಕಿಲ್ಲ ಅಂತ ಧ್ರುವಂತ್ 15ನೇ ವಾರದಲ್ಲಿ ತುಂಬಾ ನೊಂದುಕೊಂಡಿದ್ದರು. ಕ್ಯಾಪ್ಟನ್ ಹಾಗೂ ಕಿಚ್ಚನ ಚಪ್ಪಾಳೆಗೆ ಅವರು ಆಸೆಪಟ್ಟಿದ್ದರು. ಅವರ ಆಸೆ ಕೊನೆಗೂ ಈಡೇರಿತ್ತು. ಕಿಚ್ಚ ಸುದೀಪ್, ಧ್ರುವಂತ್ ಅವರಿಗೆ ಬಿಗ್ ಸರ್ಪ್ರೈಸ್ ನೀಡಿದ್ದರು. ಇಡೀ ಸೀಸನ್ ನಲ್ಲಿ ಅತ್ಯುತ್ತಮ ಆಟ ಪ್ರದರ್ಶನ ಮಾಡಿದ ಸ್ಪರ್ಧಿ ಎಂದು ಧ್ರುವಂತ್ ಅವರನ್ನು ಹೊಗಳಿದ್ದ ಕಿಚ್ಚ ಸುದೀಪ್, ಅವರಿಗೆ ಸೀಸನ್ ಕಿಚ್ಚನ ಚಪ್ಪಾಳೆ ನೀಡಿದ್ದಲ್ಲದೆ, ಗಿಫ್ಟ್ ಕೂಡ ನೀಡಿದ್ದರು.
56
ಧ್ರುವಂತ್ ಆಟ
ಬಿಗ್ ಬಾಸ್ ಮನೆಗೆ ಒಂಟಿಯಾಗಿ ಎಂಟ್ರಿ ನೀಡಿದ್ದ ಧ್ರುವಂತ್ ಒಂಟಿಯಾಗಿಯೇ ಆಟ ಆಡಿದ್ದರು. ಆರಂಭದಿಂದಲೂ ಸಾಕಷ್ಟು ಜಗಳ, ಹೋರಾಟದ ಜೊತೆ ಫಿನಾಲೆ ವೀಕ್ ವರೆಗೆ ಬಂದಿದ್ದ ಧ್ರುವಂತ್ ಗೆ ಕಿಚ್ಚನ ಚಪ್ಪಾಳೆ ಡಬಲ್ ಕಾನ್ಫಿಡೆನ್ಸ್ ನೀಡಿತ್ತು. ಆರಂಭದಲ್ಲಿ ಮಲ್ಲಮ್ಮ ಜೊತೆ ಹೆಚ್ಚು ಕಾಣಿಸಿಕೊಂಡಿದ್ದ ಧ್ರುವಂತ್, ರಕ್ಷಿತಾಗೆ ಹತ್ತಿರವಾದ್ರೂ ನಂತ್ರ ಇಬ್ಬರು ಹಾವು – ಮುಂಗುಸಿಯಂತೆ ಜಗಳವಾಡಿದ್ದರು. ಕೊನೆಯ ವಾರಗಳಲ್ಲಿ ಧ್ರುವಂತ್ ಹಾಗೂ ಅಶ್ವಿನಿ ಒಟ್ಟಿಗೆ ಕಾಲ ಕಳೆದಿದ್ದರು.
66
ಇದು ಅಂತ್ಯ ಅಲ್ಲ ಆರಂಭ
ಬಿಗ್ ಬಾಸ್ ಮನೆಯಿಂದ ಬಂದ ಧ್ರುವಂತ್ ಸಲೂನ್ ನಲ್ಲಿ ಫೋಟೋಕ್ಕೆ ಫೋಸ್ ನೀಡಿದ್ದಾರೆ. ನಂತ್ರ ಹೇರ್ ಕಟ್ ಮಾಡಿಸಿಕೊಂಡಿದ್ದಾರೆ. ಇದ್ರ ವಿಡಿಯೋವನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿರುವ ಅವರು ಇದು ಅಂತ್ಯವಲ್ಲ ಆರಂಭ ಅಂತ ಬರೆದುಕೊಂಡಿದ್ದಾರೆ. ಅವರ ಅಭಿಮಾನಿಗಳು ಧ್ರುವಂತ್ ಸ್ಟೈಲ್ ನೋಡಿ ಖುಷಿಯಾಗಿದ್ದಾರೆ. ಬಿಗ್ ಬಾಸ್ ಮನೆಗೆ ಇದೇ ಹೇರ್ ಸ್ಟೈಲ್ ನಲ್ಲಿ ಎಂಟ್ರಿ ನೀಡ್ಬೇಕಿತ್ತು ಅಂತ ಕಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.