BBK 12: ಮನೆಗೆ ಬಂದಿರೋ ಅಕ್ಕನ ಮುಂದೆ ನಡೆಯಿತು ಸ್ವಯಂವರ: ರಘುನಲ್ಲಿ ಮಗು ಕಂಡ ಅಶ್ವಿನಿ ಗೌಡ

Published : Dec 28, 2025, 07:29 AM IST

ಬಿಗ್‌ಬಾಸ್ ಕನ್ನಡ ಸೀಸನ್ 12ರ ಮನೆಗೆ ನಟಿ ಅನುಪಮಾ ಗೌಡ ಅತಿಥಿಯಾಗಿ ಆಗಮಿಸಿದ್ದಾರೆ. ಈ ವೇಳೆ, ಸ್ಪರ್ಧಿ ಅಶ್ವಿನಿ ಗೌಡ ಅವರು ರಘು ಬಗ್ಗೆ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದು, ಇದನ್ನು ಗಿಲ್ಲಿ ನಟ 'ಸ್ವಯಂವರ' ಎಂದು ತಮಾಷೆ ಮಾಡಿದ್ದಾರೆ.

PREV
15
ವಿಶೇಷ ಅತಿಥಿಗಳು

ವೀಕೆಂಡ್ ಸಂಚಿಕೆಯಲ್ಲಿ ನಟ ಸುದೀಪ್ ಗೈರು ಹಿನ್ನೆಲೆ ಮನೆಗೆ ವಿಶೇಷ ಅತಿಥಿಗಳು ಆಗಮಿಸುತ್ತಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ತಾಂಡವ್ ಮತ್ತು ಭಾಗ್ಯ ಮೊದಲು ಆಗಮಿಸಿದ್ದರು. ನಂತರ ನಿರ್ದೇಶಕ ಪ್ರೇಮ್ ಮತ್ತು ನಟಿ ರೀಷ್ಮಾ ನಾಣಯ್ಯ ಆಗಮಿಸಿದ್ದರು. ಭಾನುವಾರದ ಸಂಚಿಕೆಗೆ ವಿಶೇಷ ಅತಿಥಿಯಾಗಿ ಅಕ್ಕ ಸೀರಿಯಲ್ ಖ್ಯಾತಿಯ ನಟಿ ಬಂದಿದ್ದಾರೆ.

25
ಅನುಪಮಾ ಗೌಡ

ನಿರೂಪಕಿ ಮತ್ತು ನಟಿಯಾಗಿರುವ ಅನುಪಮಾ ಗೌಡ ಬಿಗ್‌ಬಾಸ್ ಕನ್ನಡ ಸೀಸನ್ 12ರ ಮನೆಗೆ ಬಂದಿದ್ದಾರೆ. ಅನುಪಮಾ ಗೌಡ ಅವರು ಬಿಗ್‌ಬಾಸ್ ಸೀಸನ್ 5ರ ಸ್ಪರ್ಧಿಯಾಗಿದ್ದರು. ತಮ್ಮದೇ ಮನೆಗೆ ಅತಿಥಿಯಾಗಿ ಆಗಮಿಸಿರೋದಕ್ಕೆ ಅನುಪಮಾ ಗೌಡ ಸಂತೋಷ ವ್ಯಕ್ತಪಡಿಸಿದ್ದಾರೆ.

35
ಅಂದು ರಘು ಕಂಡೆ, ಇಂದು ಮಗು ಕಂಡೆ

ಮನೆಗೆ ಬಂದಿರುವ ಅನುಪಮಾ ಗೌಡ, ಸ್ಪರ್ಧಿಗಳು ಒಬ್ಬರನ್ನೊಬ್ಬರನ್ನು ಪರಿಚಯ ಮಾಡಿಸಿಕೊಡುವಂತೆ ಕೇಳುತ್ತಾರೆ. ರಘು ಅವರನ್ನು ಪರಿಚಯ ಮಾಡಿಸಿಕೊಡಲು ಅಶ್ವಿನಿ ಗೌಡ ಮುಂದಾಗುತ್ತಾರೆ. ಇಂದು ನಾವು 14ನೇ ವಾರದಲ್ಲಿದ್ದು, ಆವತ್ತು ರಘು ಕಂಡೆ, ಇಂದು ಮಗುವನ್ನು ಕಂಡಿದ್ದೇನೆ ಎಂದು ಅಶ್ವಿನಿ ಗೌಡ ಹೇಳುತ್ತಿದ್ದಂತೆ ಇನ್ನುಳಿದ ಎಲ್ಲಾ ಸ್ಪರ್ಧಿಗಳು ಓ.. ಎಂದು ಕೂಗುತ್ತಾರೆ.

45
ಆದ್ರೆ..

ಈ ಮನೆಯಲ್ಲಿ ಎಲ್ಲರೂ ಅವರನ್ನು ರಘು ಅಣ್ಣಾ ಎಂದು ಕರೆಯುತ್ತಾರೆ. ನನಗೂ ರಘು ಅಣ್ಣಾ ಎಂದು ಕರೀಬೇಕು ಅನ್ನಿಸುತ್ತೆ. ಆದ್ರೆ.. ಎಂದು ಅಶ್ವಿನಿ ಗೌಡ ಮಾತು ನಿಲ್ಲಿಸುತ್ತಾರೆ. ಈ ವೇಳೆ ಧ್ರುವಂತ್, ರಘು ಅಣ್ಣಾ ಅಂತ ಕರೆಯಲು ಆಗಲ್ಲವಾ ಎಂದು ತಮಾಷೆ ಮಾಡುತ್ತಾರೆ.

ಇದನ್ನೂ ಓದಿ: BBK 12: ಕ್ಯಾಪ್ಟನ್ ಆಗ್ತಿದ್ದಂತೆ ಎಡವಟ್ಟು ಮಾಡಿಕೊಂಡ ಗಿಲ್ಲಿ ನಟ ; ಶುರುವಲ್ಲೇ ಎದುರಾದ ಮೊದಲ ವಿಘ್ನ!

55
ಸ್ವಯಂವರ

ನಾನು ಮತ್ತು ರಘು ಪರಸ್ಪರ ಅರ್ಥ ಮಾಡಿಕೊಂಡು ಈ ಮನೆಯಲ್ಲಿ ಆಟವಾಡುತ್ತಿದ್ದೇವೆ ಎಂದು ಹೇಳುತ್ತಾರೆ. ಅಶ್ವಿನಿ ಗೌಡ ಬಳಿಕ ಬರುವ ರಘು, ಒಬ್ಬ ವ್ಯಕ್ತಿಯಾಗಿ ನನಗೆ ಇಷ್ಟವಾಗುತ್ತಾರೆ ಎಂದು ಹೇಳುತ್ತಾರೆ. ಇದನ್ನೆಲ್ಲಾ ನೋಡಿದ ಗಿಲ್ಲಿ ನಟ, ಇದು ಪರಿಚಯ ಅಲ್ಲ, ಸ್ವಯಂವರ ರೀತಿಯಲ್ಲಿ ಕಾಣಿಸುತ್ತಿದೆ ಎಂದು ಹೇಳಿ ಎಲ್ಲರನ್ನು ನಗಿಸುತ್ತಾರೆ.

ಇದನ್ನೂ ಓದಿ: BBK 12: ಗಿಲ್ಲಿ ಮಾತು ಕೇಳಿ ಮನೆಯೊಳಗೆ ಬರಲ್ಲ ಎಂದ ಪ್ರೇಮ್; ಶನಿವಾರದ ಸಂಚಿಕೆಯಲ್ಲಿಯೇ ಸ್ಪರ್ಧಿಗಳಿಗೆ ಶಾಕ್

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories