BBK 12 ಫಿನಾಲೆಗೆ ಕೆಲವೇ ದಿನಗಳು ಬಾಕಿ; ವೀಕ್ಷಕರ ಇಚ್ಛೆಯಂತೆ ಟಾಪ್‌ 3 ರಲ್ಲಿ ಗೆಲ್ಲೋರು ಯಾರು?

Published : Dec 27, 2025, 06:54 PM IST

BBK 12: ಇನ್ನು 20 ದಿನಗಳಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗ್ರ್ಯಾಂಡ್‌ ಫಿನಾಲೆ ನಡೆಯಲಿದೆ. ಈ ಬಾರಿ ಯಾರು ಬಿಗ್‌ ಬಾಸ್‌ ಶೋ ಗೆಲ್ಲುತ್ತಾರೆ ಎಂದು ಚರ್ಚೆ ಶುರುವಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿಗೆ ಮತ ಹಾಕ್ತೀವಿ ಎಂದು ಹೇಳುವವರ ಸಂಖ್ಯೆ ಜಾಸ್ತಿ ಇದೆ. 

PREV
15
ಸೌಂಡ್‌ ಮಾಡಿದ ಸ್ಪರ್ಧಿಗಳಿವರು

ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ಮತ್ತು ಗಿಲ್ಲಿ ನಟ ಅವರು ದೊಡ್ಮನೆಯಲ್ಲಿ ದೊಡ್ಡ ಮಟ್ಟದ ಸೌಂಡ್‌ ಮಾಡಿದ್ದಾರೆ. ಇವರ ಸುತ್ತವೇ ಒಂದಿಷ್ಟು ಘಟನೆಗಳು ನಡೆದಿದೆ. ನಾಮಿನೇಶನ್‌ನಿಂದ ಹಿಡಿದು ಮನೆ ಕೆಲಸದವರೆಗೆ ಇವರ ಹೆಸರು ಕೇಳಿ ಬರುತ್ತಿತ್ತು.

25
ರಕ್ಷಿತಾ ಶೆಟ್ಟಿ

ಈ ಸೀಸನ್‌ನ ಕಿರಿಯ ಸ್ಪರ್ಧಿ ಆಗಿರುವ ರಕ್ಷಿತಾ ಶೆಟ್ಟಿ ಅವರು ಸೈಲೆಂಟ್ ಆಗಿ ಆಟ ಶುರು ಮಾಡಿದ್ದು, ದೊಡ್ಡ ಜನಪ್ರಿಯತೆಯನ್ನು ಪಡೆದಿದ್ದಾರೆ. ಇವರ ಅಭಿಮಾನಿಗಳ ಸಂಖ್ಯೆ ಬಗ್ಗೆ ದೊಡ್ಮನೆಯಲ್ಲಿದ್ದವರಿಗೆ ಮಾಹಿತಿಯಾಗಲೀ, ಸುಳಿವು ಇದ್ದಂತಿಲ್ಲ. ಮನೆಯ ಇತರ ಸದಸ್ಯರು ಟಾರ್ಗೆಟ್ ಮಾಡಿದರೂ ಕೂಡ ಅವರು, ಎಲ್ಲರ ಎದುರು ನೇರವಾಗಿ ಅಭಿಪ್ರಾಯಗಳನ್ನು ಹೇಳಿಕೊಂಡು ಇಲ್ಲಿಯವರೆಗೆ ಬಂದಿದ್ದಾರೆ.

35
ಗಿಲ್ಲಿ ನಟ: ಮನರಂಜನೆಯ ಕಿಂಗ್

ಈ ಸೀಸನ್‌ನ ಬಿಗ್ ಬಾಸ್ ಮನೆಯಲ್ಲಿ ಅತ್ಯಂತ ಎಂಟರ್‌ಟೇನಿಂಗ್ ಸ್ಪರ್ಧಿಯಾಗಿರುವ ಗಿಲ್ಲಿ ನಟ ಅವರು ಮನೆ ಕೆಲಸ ಮಾಡೋದಿಲ್ಲ, ಬೇರೆಯವರನ್ನು ಕೆಳಗಡೆ ಹಾಕಿ ಕಾಮಿಡಿ ಮಾಡ್ತಾರೆ ಎಂಬ ಆರೋಪವಿದೆ. ಇದನ್ನು ಬಿಟ್ಟರೆ, ಅವರು ಗಂಭೀರ ಜಗಳಗಳ ನಡುವೆಯೂ ಕಾಮಿಡಿ ಮೂಲಕ ವೀಕ್ಷಕರನ್ನು ಹಾಗೂ ಮನೆಯಲ್ಲಿದ್ದವರನ್ನು ನಗಿಸುತ್ತಾರೆ ಎನ್ನಲಾಗಿದೆ.

45
ಅಶ್ವಿನಿ ಗೌಡ

ಈ ಸೀಸನ್‌ನ ಅತ್ಯಂತ ಚರ್ಚಿತ ಸ್ಪರ್ಧಿ ಎಂದರೆ ಅದು ಅಶ್ವಿನಿ ಗೌಡ ಎನ್ನಬಹುದು. ಆರಂಭದಿಂದಲೂ ಅಶ್ವಿನಿ ಗೌಡ ಅವರು ಸಾಕಷ್ಟು ಸ್ಪರ್ಧಿಗಳ ಜೊತೆ ಮಾತನಾಡಿ, ವಾದ-ವಿವಾದವನ್ನು ಸೃಷ್ಟಿ ಮಾಡಿದರು. ಟಾಸ್ಕ್‌ಗಳಲ್ಲಿ ಕೂಡ ಅಶ್ವಿನಿ ಗೌಡ ಚೆನ್ನಾಗಿ ಆಡಿದ್ದರು. ನೇರವಾಗಿ ಅಭಿಪ್ರಾಯಗಳನ್ನು ಹೇಳಿದ್ದರು. ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ಕಾವ್ಯ ಶೈವ, ಜಾಹ್ನವಿ, ರಘು ಜೊತೆಗೆ ಅಶ್ವಿನಿ ಗೌಡ ಅವರಿಗೆ ಜಗಳ ಆಗಿತ್ತು. ಆ ವೇಳೆ ಅವರು ನಡೆದುಕೊಂಡ ನಡೆ, ಮಾತುಗಳು ದೊಡ್ಡ ಮಟ್ಟದಲ್ಲಿ ಸೌಂಡ್‌ ಮಾಡಿದ್ದವು.

55
ಟಾಪ್ 3 ರಲ್ಲಿ ಯಾರಿಗೆ ಹೆಚ್ಚು ಲಾಭ?

ಸೋಶಿಯಲ್ ಮೀಡಿಯಾ ಹಾಗೂ ವೀಕ್ಷಕರ ಪ್ರಕಾರ, ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ನಡುವೆ ರಕ್ಷಿತಾ ಅವರನ್ನು ಇಷ್ಟಪಡುವವರೇ ಜಾಸ್ತಿ ಜನರಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಗಿಲ್ಲಿ ನಟ ಅವರನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories