ಕಂಟೆಂಟ್​ ಕ್ರಿಯೇಟರ್ಸ್​ಗೆ Bigg Boss ಭರ್ಜರಿ ಆಫರ್​! ಟಿವಿಯಲ್ಲಿ ಮಿಂಚಲು ನಿಮಗೂ ಅವಕಾಶ

Published : Oct 04, 2025, 02:44 PM IST

ಬಿಗ್​ಬಾಸ್​ ಕನ್ನಡ ಸೀಸನ್​ 12 ರ ಕುರಿತು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡುವ ಕಂಟೆಂಟ್​ ಕ್ರಿಯೇಟರ್ಸ್​ಗಳ ಪ್ರತಿಭೆಯನ್ನು ಕಲರ್ಸ್​ ಕನ್ನಡ ವಾಹಿನಿ ಗುರುತಿಸಿದೆ. ಅವರ ವಿಡಿಯೋಗಳನ್ನು ತಮ್ಮ ಪೇಜ್​ನಲ್ಲಿ ಶೇರ್​ ಮಾಡುವ ಕೊಲ್ಯಾಬೋರೇಷನ್​ ಆಫರ್​ ನೀಡಿದೆ. ಡಿಟೇಲ್ಸ್​ ಇಲ್ಲಿದೆ… 

PREV
16
ಹಲವಾರು ವಿಶೇಷತೆಗಳ ಬಿಗ್​ಬಾಸ್​

ಬಿಗ್​ ಬಾಸ್​ ಸೀಸನ್​ 12 (Bigg Boss Season 12) ಹಲವಾರು ವಿಶೇಷತೆಗಳೊಂದಿಗೆ ವೀಕ್ಷಕರ ಮುಂದೆ ಬಂದಿದೆ. ಇದಾಗಲೇ ಶುರುವಾಗಿ ನಾಲ್ಕೈದು ದಿನಗಳಲ್ಲಿಯೇ ಓರ್ವ ಸ್ಪರ್ಧಿ ಮನೆಯಿಂದ ಹೊರಕ್ಕೆ ಹೋಗಿದ್ದಾರೆ. ಇಲ್ಲಿಂದ ಹಿಡಿದು ದಿನದಿಂದ ದಿನಕ್ಕೆ ಈ ಸೀಸನ್​ ಸಕತ್​ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ. ಇದಾಗಲೇ ಕೆಲವು ಸ್ಪರ್ಧಿಗಳು ನಾಮಿನೇಟ್​ ಕೂಡ ಆಗಿದ್ದಾರೆ.

26
ಸ್ಪರ್ಧಿಗಳು ಮಾಡುವುದೇನು?

ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ನೆಚ್ಚಿನ ಸ್ಪರ್ಧಿಗಳ ಬಗ್ಗೆ ಅಭಿಮಾನಿಗಳು ಪ್ರಚಾರ ಮಾಡುತ್ತಲೇ ಇರುತ್ತಾರೆ. ಬಿಗ್​ಬಾಸ್​ ಒಳಗೆ ಹೋಗುವಾಗ ತಮ್ಮ ಪರವಾಗಿ ಪ್ರಚಾರ ಮಾಡಲು ಸ್ಪರ್ಧಿಗಳು ತಮ್ಮ ಅಧಿಕೃತ ಸೋಷಿಯಲ್​​ ಮೀಡಿಯಾವನ್ನು ಬೇರೆಯವರಿಗೆ ಕೊಟ್ಟು ಹೋಗಬೇಕು. ಅವರು ಸ್ಪರ್ಧಿಗಳೇ ಪ್ರಚಾರ ಮಾಡಿದಂತೆ ಪ್ರಚಾರ ಮಾಡುತ್ತಾರೆ. ಮತ್ತೆ ಕೆಲವರು ತಮ್ಮ ನೆಚ್ಚಿನ ಸ್ಪರ್ಧಿಗಳ ಪರವಾಗಿ ತಾವೇ ಸ್ವಂತ ಆಸಕ್ತಿಯಿಂದ ಪ್ರಚಾರ ಮಾಡುವುದು ಇದೆ.

36
ಬಿಗ್​ಬಾಸ್​ ನಕಲಿ ರೂಪ

ಇನ್ನೂ ಕೆಲವು ಕ್ರಿಯೇಟಿವ್​ ಟ್ಯಾಲೆಂಟ್​ ಇರುವವರು ತಾವೇ ಬಿಗ್​ಬಾಸ್​​ ಅನ್ನು ಸೃಷ್ಟಿ ಮಾಡಿ ಅದನ್ನು ವಿಡಿಯೋ ಮಾಡಿ ಹರಿಬಿಡುತ್ತಿದ್ದಾರೆ. ತಾವೇ ಬಿಗ್​ಬಾಸ್​​ ಮನೆಯ ರೀತಿ ಕ್ರಿಯೇಟ್​ ಮಾಡಿಕೊಂಡು, ಬಿಗ್​ಬಾಸ್​​ ದನಿ ನೀಡುವ ಮೂಲಕ, ತಮ್ಮದೇ ಆದ ರೀತಿಯಲ್ಲಿ ಕಾಮಿಡಿ ಮಾಡಿ ಕಂಟೆಂಟ್​ ಕ್ರಿಯೇಟ್​ ಮಾಡುತ್ತಿದ್ದಾರೆ. ಇದು ಅವರ ಫಾಲೋವರ್ಸ್​ಗೆ ಮಾತ್ರ ಕಾಣಿಸುತ್ತಿದೆ.

46
ಟ್ಯಾಲೆಂಟ್​ಗಳಿಗೆ ಅದ್ಭುತ ಅವಕಾಶ

ಇದನ್ನು ನೋಡಿರುವ ಕಲರ್ಸ್​ ಕನ್ನಡ ವಾಹಿನಿ, ಇಂದು ಟ್ಯಾಲೆಂಟ್​ಗಳಿಗೆ ಅದ್ಭುತ ಅವಕಾಶವನ್ನು ನೀಡಿದೆ. ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಒಂದನ್ನು ಶೇರ್​ ಮಾಡಲಾಗಿದೆ.

56
ಕಲರ್ಸ್​ ವಾಹಿನಿ ಆಫರ್​

ಅದರಲ್ಲಿ ಕ್ರಿಯೇಟಿವ್​ ಮನಸ್ಸುಗಳೇ ಇಲ್ಲಿ ಕೇಳಿ. ನೀವು ಬಿಗ್​ಬಾಸ್​ ಕನ್ನಡ ಸೀಸನ್​ 12ರ ಬಗ್ಗೆ ಅದ್ಭುತ ಕಂಟೆಂಟ್​ ಮಾಡ್ತಿದ್ದೀರಾ ಎನ್ನುವುದು ನಮಗೆ ಗೊತ್ತು. ಕೇವಲ ನಿಮ್ಮ ಪೇಜ್​ನಲ್ಲೇ ಯಾಕೆ? ನಮಗೂ ಕೊಲ್ಯಾಬೋರೇಷನ್​ ರಿಕ್ವೆಸ್ಟ್​ ಕಳುಹಿಸಿ. ನಿಮ್ಮ ವಿಡಿಯೋ ಇಷ್ಟವಾದ್ರೆ ಶೇರ್​​ ಮಾಡ್ತೀವಿ ಎಂದಿದ್ದಾರೆ.

66
ಕಂಟೆಂಟ್​ ಕ್ರಿಯೇಟರ್ಸ್​ ಮನವಿ

ಇದನ್ನು ಕೇಳಿ ಕಂಟೆಂಟ್​ ಕ್ರಿಯೇಟರ್ಸ್​ಗೆ ಖುಷಿಯಾದರೂ ಕಾಪಿ ರೈಟ್​ ಮಾತ್ರ ಹಾಕಬೇಡಿ, ನಮಗೆ ಕಷ್ಟವಾಗುತ್ತದೆ ಎಂದು ಹೆಚ್ಚಿನವರು ಕಮೆಂಟ್​ನಲ್ಲಿ ತಿಳಿಸಿದ್ದಾರೆ. ಏಕೆಂದರೆ ವಾಹಿನಿಯವರು ಕಾಪಿರೈಟ್​ ಹಾಕಿಬಿಟ್ಟರೆ, ಅದು ವಾಹಿನಿಯ ಅಧಿಕೃತ ಸ್ವತ್ತಾಗುವ ಕಾರಣ, ಮೂಲ ಕಂಟೆಂಟ್​ ಕ್ರಿಯೇಟರ್ಸ್​ಗೆ ಅದರ ಹಕ್ಕು ಇರುವುದಿಲ್ಲ.ಮಾನಿಟೈಸೇಷನ್​ ಎಲ್ಲಾ ಸಮಸ್ಯೆಯಾಗುವ ಕಾರಣ, ಈ ಮನವಿ ಮಾಡಿಕೊಂಡಿದ್ದಾರೆ.

Read more Photos on
click me!

Recommended Stories