Bigg Boss Kannada contestants life: ಬಹುತೇಕರು ತಮ್ಮ ಜವಾಬ್ದಾರಿಗಳನ್ನು ಬೇರೆಯವರ ಹೆಗಲಿಗೆ ವರ್ಗಾಯಿಸಿ ಬರುತ್ತಾರೆ. ತಮ್ಮ ಅನುಪಸ್ಥಿತಿಯಲ್ಲಿ ಕುಟುಂಬದ ಜವಾಬ್ದಾರಿಯನ್ನು ನಂಬಿಕಸ್ಥರಿಗೆ ನೀಡಿರುತ್ತಾರೆ.
ಬಿಗ್‌ಬಾಸ್ ಮನೆಗೂ ಬರುವ ಮೊದಲು ಸ್ಪರ್ಧಿಗಳು ಅಗತ್ಯ ಕೆಲಸಗಳನ್ನು ಪೂರ್ಣಗೊಳಿಸಿ ಬರುತ್ತಾರೆ. ಬಹುತೇಕರು ತಮ್ಮ ಜವಾಬ್ದಾರಿಗಳನ್ನು ಬೇರೆಯವರ ಹೆಗಲಿಗೆ ವರ್ಗಾಯಿಸಿ ಬರುತ್ತಾರೆ. ತಮ್ಮ ಅನುಪಸ್ಥಿತಿಯಲ್ಲಿ ಕುಟುಂಬದ ಜವಾಬ್ದಾರಿಯನ್ನು ನಂಬಿಕಸ್ಥರಿಗೆ ನೀಡಿರುತ್ತಾರೆ. ಈ ಬಾರಿಯ ಸ್ಪರ್ಧಿಯೊಬ್ಬರು ಬಿಗ್‌ಬಾಸ್ ಮನೆಗೆ ಬರುವ ಹಿಂದಿನ ದಿನ ತಾವು ಮಾಡಿದ್ದೇನು ಎಂಬುದನ್ನು ಹೇಳಿಕೊಂಡಿದ್ದಾರೆ.
25
ಜೀವನದ ಬಗ್ಗೆ ಮಂಜು ಭಾಷಿಣಿ ಮಾತು
ಕಿಚನ್‌ನಲ್ಲಿ ಮಂಜು ಭಾಷಿಣಿ ಟೀ ಮಾಡುತ್ತಿರುತ್ತಾರೆ. ಜಂಟಿಗಳಿಗೆ ಟೀ ಸಿಕ್ಕಿದ್ದರಿಂದ ಅನಿವಾರ್ಯವಾಗಿ ಇದೇ ಪಾನೀಯ ಕುಡಿಯಬೇಕಾಗುತ್ತದೆ. ಒಂಟಿಗಳು ಟೀ ಬದಲಾಗಿ ಕಾಫಿ ಆಯ್ಕೆ ಮಾಡಿಕೊಂಡಿದ್ದರು. ನಾನು ಮನೆ ಅಥವಾ ಶೂಟಿಂಗ್‌ನಲ್ಲಿರಲಿ ಪದೇ ಪದೇ ಕಾಫಿ ಕುಡಿಯುತ್ತಿರುತ್ತೇನೆ. ಮನೆಯಲ್ಲಿಯೂ ನನಗೆ ಕಾಫಿ ಕೊಡುತ್ತಿರುತ್ತಾರೆ. ಊಟ ಇರದಿದ್ರೂ ನಡೆಯುತ್ತದೆ ಎಂದು ಮಂಜು ಭಾಷಿಣಿ ಹೇಳುತ್ತಾರೆ.
35
ಕಾಫಿ ಅಂದ್ರೆ ತುಂಬಾ ಇಷ್ಟ
ಈ ವೇಳೆ ಅಲ್ಲಿಯೇ ನಿಂತಿದ್ದ ಅಶ್ವಿನಿ ಎಸ್‌ಎನ್, ನನಗೂ ಕಾಫಿ ಅಂದ್ರೆ ತುಂಬಾ ಇಷ್ಟ. ಇಡೀ ದಿನ ಕೊಟ್ಟರೂ ಕಾಫಿ ಕುಡಿಯುತ್ತೇನೆ. ಬಿಗ್‌ಬಾಸ್ ಬರುವ ಹಿಂದಿನ 5 ಗ್ಲಾಸ್ ಕಾಫಿ ಕುಡಿದು ಬಂದಿದ್ದೇನೆ. ಬಿಗ್‌ಬಾಸ್ ಮನೆಯಲ್ಲಿ ಕಾಫಿ ಸಿಗುತ್ತೋ ಅಥವಾ ಇಲ್ಲವೋ ಎಂಬುವುದು ಗೊತ್ತಿರಲಿಲ್ಲ ಎಂದು ಹೇಳಿದರು. ಇಲ್ಲಿ ಜಂಟಿಯಾಗಿರುವ ಕಾರಣ ಮೊದಲ ವಾರವೇ ಅಶ್ವಿನಿ ಕಾಫಿಯಿಂದ ವಂಚಿತರಾಗಿದ್ದಾರೆ.
ಕಿಚನ್‌ನಲ್ಲಿ ಟೀ ಮಾಡುವಾಗ ಮಂಜು ಭಾಷಿಣಿ, ನಮಗೆ ಜೀವನವೇ ಎಲ್ಲವನ್ನು ಕಲಿಸಿದೆ. ಇಂದು ಎಲ್ಲವೂ ಇದೆ. ಆದ್ರೆ ಕೆಲವೊಮ್ಮೆ ಏನೂ ಇರಲ್ಲ. ಹಾಗಾಗಿ ಯಾವುದು ಶಾಶ್ವತ ಇಲ್ಲ ಅನ್ನೋದು ನನ್ನ ಅಭಿಪ್ರಾಯ. ಇಂದಿನ ಮಕ್ಕಳು ದುಬಾರಿ ಬೆಲೆಯ ಆಟಿಕೆ ಬೇಕೆಂದು ಕೇಳುತ್ತಾರೆ. ನಮಗೆ ಬೇಕೆಂದು ಕೇಳಲು ಗೊತ್ತಿರಲಿಲ್ಲ ಎಂದು ಹೇಳಿದರು.
ಅಶ್ವಿನಿ ಎಸ್‌ಎನ್, ನಮ್ಮ ಬಾಲ್ಯದಲ್ಲಿಯೂ ಕಷ್ಟವಿತ್ತು. ಪೋಷಕರು ಆರ್ಥಿಕ ಸಮಸ್ಯೆಗಳು ನಮಗೆ ಗೊತ್ತಾಗುತ್ತಿತ್ತು. ಹಾಗಾಗಿ ಇಂತಹ ವಸ್ತುಗಳು ಬೇಕು ಅಂತ ಹಠ ಮಾಡಿರಲಿಲ್ಲ. ನಮ್ಮದು ಮಧ್ಯಮ ವರ್ಗದ ಕುಟುಂಬ ಎಂದು ಹೇಳಿದರು.