ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಹೊಸ ಪ್ರೋಮೊ ನೋಡಿದ ವೀಕ್ಷಕರು ಗರಂ ಆಗಿದ್ದಾರೆ. ಇನ್ನೆಷ್ಟು ಜನ ಸ್ನೇಹಾರನ್ನು ಸಾಯಿಸುವ ಪ್ಲ್ಯಾನ್ ಇದೆ. ಅದಕ್ಕಿಂತ ಮೊದಲು ಸೀರಿಯಲ್ ಮುಗಿಸಿಬಿಡಿ ಅದೇ ಬೆಸ್ಟ್ ಎನ್ನುತ್ತಿದ್ದಾರೆ. ಅಷ್ಟಕ್ಕೂ ಪ್ರೊಮೋದಲ್ಲಿ ಏನಿದೆ? ಹೊಸ ಸ್ನೇಹಾ ಕೂಡ ಸಾಯುತ್ತಾಳ?
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಹೊಸದೊಂದು ತಿರುವು ಸಿಕ್ಕಿದೆ. ಡಿಸಿ ಸ್ನೇಹಾ ಸಾವನ್ನಪ್ಪಿದ ಮೇಲೆ ಕಥೆಯ ಹಾದಿ ಕೂಡ ತಪ್ಪಿತ್ತು. ಕಥೆ ಅಲ್ಲಿಂದಲ್ಲಿಗೆ ಕುಂಟುತ್ತಾ ಸಾಗುತ್ತಿತ್ತು, ಸೀರಿಯಲ್ ಮುಗಿಯಬಹುದು ಎಂದು ಜನ ಹಲವು ಬಾರಿ ಅಂದುಕೊಂಡಿದ್ದರು, ಆದರೆ ಕಥೆ ಹೊಸ ಹೊಸ ತಿರುವುಗಳನ್ನು ಪಡೆದುಕೊಂಡು ಸಾಗುತ್ತಿತ್ತು.
26
ಹೊಸ ಸ್ನೇಹಾ ಎಂಟ್ರಿ
ಡಿಸಿ ಸ್ನೇಹಾ ಸಾವಿನ ಬಳಿಕ ಕಂಠಿ ಪೂರ್ತಿಯಾಗಿ ಬದಲಾಗಿದ್ದ. ಮತ್ತೆ ರೌಡಿಯಾಗಿ ತನ್ನ ಹೊಸ ಮುಖ ತೋರಿಸಿದ್ದ. ನಂತರ ಯಾವಾಗ ಸ್ನೇಹಾಗೆ ತನ್ನ ಪ್ರೀತಿಯ ಮೆಸ್ಸು ಹೃದಯ ಇಟ್ಟಿದ್ದಾರೆ ಅನ್ನೋದು ಗೊತ್ತಾಯ್ತು, ಆವಾಗಿಂದ ಅವಳ ಹಿಂದೆ ಬಿದ್ದು, ಮದುವೆ ಕೂಡ ಆಗಿದೆ. ಆದರೆ ಇವತ್ತಿಗೂ ಕಂಠಿಗೆ ಹಳೆ ಸ್ನೇಹಾಳ ಮೇಲೆಯೇ ಒಲವು.
36
ಈ ಸ್ನೇಹಾನು ಸಾಯ್ತಳ?
ಇದೀಗ ಪ್ರಸಾರವಾದ ಹೊಸ ಪ್ರೊಮೋದಲ್ಲಿ ಸ್ನೇಹಾಳನ್ನು ಕಿಡ್ನಾಪ್ ಮಾಡಿಕೊಂಡು ಹೋಗುತ್ತಿದ್ದಾಗ, ಅದನ್ನು ತಡೆದು, ಕಂಠಿ ತಂಗಿ ಗಂಡ, ಆಸ್ಪತ್ರೆಗೆ ಸೇರಿಸಿದ್ದ, ಅಲ್ಲಿ ಸ್ನೇಹಾ ಹೃದಯ ಇನ್ನು ಹೆಚ್ಚು ಸಮಯ ಕೆಲಸ ಮಾಡೋದಿಲ್ಲ. ಆಕೆ ತುಂಬಾ ದಿನ ಬದುಕಿ ಉಳಿಯೋದು ಡೌಟ್ ಎಂದಿದ್ದಾರೆ ಡಾಕ್ಟರ್.
ಮೊದಲ ಸ್ನೇಹಾ ಹೋದಾಗ, ಇನ್ನೊಬ್ಬ ಸ್ನೇಹಾ ಕಂಠಿ ಬಾಳಲ್ಲಿ ಬಂದಾಯ್ತು. ಇದೀಗ ಈ ಸ್ನೇಹಾ ಕೂಡ ಸಾವನ್ನಪ್ಪಿದ್ರೆ, ಮತ್ತೊಬ್ಬ ಸ್ನೇಹಾಳ ಎಂಟ್ರಿಯಾಗುತ್ತಾ ಎಂದು ಕೇಳುತ್ತಿದ್ದಾರೆ ವೀಕ್ಷಕರು. ಹೀಗೆ ಒಬ್ಬರ ನಂತರ ಒಬ್ಬರಂತೆ ಎಲ್ಲರನ್ನು ಸಾಯಿಸುವ ಬದಲು ಈ ಸೀರಿಯಲ್ ಆದಷ್ಟು ಬೇಗ ಮುಗಿಸಿ ಎಂದು ಸಹ ಕೇಳಿಕೊಂಡಿದ್ದಾರೆ.
56
ಕಂಠಿ ಜಾತಕ ತೋರಿಸೋಕೆ ವೀಕ್ಷಕರ ಸಲಹೆ
ಅಯ್ಯೋ ನಮ್ ಮೆಸ್ಸು ಹೃದಯ, ಅದು ಜೋಪಾನ. ಇವಳು ಸತ್ರು ಪರವಾಗಿಲ್ಲ. ಯಾಕೋ ಕಂಠಿ ನ ಮದುವೆ ಆದವರು ಸಾಯಿತಾ ಇದ್ದಾರೆ. ಏನೋ ಕಂಠಿ ಜಾತಕದಲ್ಲಿ ದೋಷ ಇರ್ಬೇಕು. ಡೈರೆಕ್ಟ್ ರೆ ಮೊದ್ಲು ಕಂಠಿಗೆ ದೋಷ ನಿವಾರಣೆ ಮಾಡ್ಕೊಳ್ಳಿ. ಆಮೇಲೆ ಧಾರಾವಾಹಿ ಮುಂದುವರಿಸಿ ಅಂತಾನೂ ತಮಾಷೆ ಮಾಡಿದ್ದಾರೆ ವೀಕ್ಷಕರು.
66
ಮುಂದೆ ಕಥೆ ಏನಾಗುತ್ತೆ?
ನಿಜವಾಗ್ಲೂ ಸ್ನೇಹಾ ಸಾಯ್ತಳ ಅಂದ್ರೆ ಅದು ಗೊತ್ತಿಲ್ಲ. ಈಗಾಗಲೇ ಬಂಗಾರಮ್ಮ ಪಾತ್ರಧಾರಿ ಮಂಜುಭಾಷಿಣಿ ಬಿಗ್ ಬಾಸ್ ಗೆ ಹೋಗಿರೋದರಿಂದ, ಆ ಪಾತ್ರವನ್ನು ಮುಗಿಸುವ ಅಥವಾ ಹೊಸ ಪಾತ್ರಧಾರಿ ಎಂಟ್ರಿ ಕೊಡುವ ಸಾಧ್ಯತೆಯೂ ಇದೆ. ಎಲ್ಲಾದಕ್ಕೂ ಮುಂದೇನು ಆಗುತ್ತೆ ಅನ್ನೋದನ್ನು ಮುಂದಿನ ಎಪಿಸೋಡ್ ನೋಡಿಯೇ ತಿಳಿಯಬೇಕು. ಅಲ್ಲಿವರೆಗೂ ಕಾಯಬೇಕು.