ಕರ್ಣ-ನಿತ್ಯಾ ಮದುವೆಯಾಯ್ತು, ನಿಂಗೇನ್‌ ಕೆಲಸ?, Karna Serial ಬಿಡು ಎಂದ್ರು: ನಟಿ ಭವ್ಯಾ ಗೌಡ

Published : Oct 23, 2025, 03:14 PM IST

ಕರ್ಣ ಧಾರಾವಾಹಿಯಲ್ಲಿ ನಿಧಿ ಪಾತ್ರ ಕಂಡರೆ ಈಗ ಎಲ್ಲರಿಗೂ ಇಷ್ಟ ಆಗುವ ಹಾಗೆ ಆಗಿದೆ. ನಿಧಿ, ಕರ್ಣ ಒಂದಾಗಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ, ಆದರೆ ಈಗ ನಿತ್ಯಾ, ಕರ್ಣನ ಹೆಂಡ್ತಿ ಎಂದು ನಾಟಕ ಮಾಡೋ ಹಾಗೆ ಆಗಿದೆ. ಈ ಬಗ್ಗೆ ನಟಿ ಭವ್ಯಾ ಗೌಡ ಅವರು ಮಾತನಾಡಿದ್ದಾರೆ.

PREV
15
ಭವ್ಯಾ ಗೌಡ ಸಂದರ್ಶನ

ನಿಧಿ ಪಾತ್ರಕ್ಕೆ ಜೀವ ತುಂಬಿರುವ ನಟಿ ಭವ್ಯಾ ಗೌಡ ಅವರು Asianet Suvarna News ಜೊತೆಗೆ ಮಾತನಾಡಿದ್ದು, ಸೀರಿಯಲ್‌ಗೆ ಸಿಗುತ್ತಿರುವ ಪ್ರತಿಕ್ರಿಯೆ, ಮನೆಯವರ ಪ್ರೋತ್ಸಾಹದ ಬಗ್ಗೆಯೂ ಮಾತನಾಡಿದ್ದಾರೆ.

25
ಕಣ್ಣೀರು ಹಾಕಿದ ಭವ್ಯಾ ಗೌಡ

“ಈ ಸೀರಿಯಲ್‌ ಆಫರ್‌ ಬಂದಾಗ ತುಂಬ ಕಷ್ಟ ಆಗಿತ್ತು. ಆಮೇಲೆ ರಮೇಶ್‌ ಇಂದಿರಾ ಅವರು ಧೈರ್ಯ ತುಂಬಿದಮೇಲೆ ನನಗೆ ಧೈರ್ಯ ಬಂತು. ಮೊನ್ನೆ ಕರ್ಣ ಕಣ್ಣೀರು ಹಾಕಿದ್ದು ನೋಡಿ ನನ್ನ ತಾಯಿ ಫೋನ್‌ ಮಾಡಿ ಅತ್ತಿದ್ದರು. ಆಮೇಲೆ ನಮ್ರತಾ ಅವರು ಕೂಡ ಫೋನ್‌ ಮಾಡಿ ಮಾತನಾಡಿದರು” ಎಂದು ಭವ್ಯಾ ಗೌಡ ಹೇಳಿದ್ದಾರೆ.

35
ಒಂದು ಹುಡುಗಿಗೆ ಹೀಗೆ ಆಗಿತ್ತು

“ನಾವೆಲ್ಲ ಕಲಾವಿದರು, ಇದೆಲ್ಲ ಸ್ಕ್ರಿಪ್ಟ್‌ ಅಂತ ಗೊತ್ತಾದಮೇಲೂ ಕೂಡ ನನ್ನ ತಾಯಿ ಇಷ್ಟು ಕನೆಕ್ಟ್‌ ಆಗಿದ್ದಾರೆ ಅಂದರೆ ವೀಕ್ಷಕರಿಗೆ ಹೇಗೆ ಆಗಿರಬೇಕು. ನನ್ನ ಲೈಫ್‌ನಲ್ಲಿಯೂ ಹೀಗೆ ಆಗಿದೆ ಎಂದು ಒಂದು ಹುಡುಗಿ ನನಗೆ ಮೆಸೇಜ್‌ ಮಾಡಿದ್ದಳು” ಎಂದು ಭವ್ಯಾ ಗೌಡ ಹೇಳಿದ್ದಾರೆ.

45
ಲವ್‌ ಬಗ್ಗೆ ಗೊತ್ತಿಲ್ಲ

“ಲವ್‌ ಎಂದರೇನು ಎಂದು ನನಗೆ ವ್ಯಾಖ್ಯಾನ ಮಾಡೋಕೆ ಆಗೋದಿಲ್ಲ” ಎಂದು ಭವ್ಯಾ ಗೌಡ ಅವರು ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಎಷಿಯಾನೆಟ್‌ ಸುವರ್ಣ ನ್ಯೂಸ್‌ ಜೊತೆಗೆ ಮಾತನಾಡುವಾಗ ಅವರು, “ನನಗೆ ಐದು ವರ್ಷಗಳಿಂದ ಒಬ್ಬರ ಮೇಲೆ ಕ್ರಶ್‌ ಇದೆ, ಆದಷ್ಟು ಬೇಗ ರಿವೀಲ್‌ ಮಾಡ್ತೀನಿ” ಎಂದು ಹೇಳಿದ್ದರು.

55
ಸೀರಿಯಲ್‌ ಬಿಡು ಎಂದಿದ್ಯಾಕೆ?

“ಈಗ ಕರ್ಣ ಹಾಗೂ ನಿತ್ಯಾಗೆ ಮದುವೆ ಆಗಿದೆ, ನೀನು ಅಲ್ಲಿದ್ದು ಏನು ಮಾಡ್ತೀಯಾ, ಸೀರಿಯಲ್‌ ಬಿಡು ಅಂತ ಕೆಲವರು ಹೇಳಿದ್ದುಂಟು. ಮುಂದೆ ಈ ಧಾರಾವಾಹಿಯಲ್ಲಿ ವೀಕ್ಷಕರು ಸಖತ್‌ ಟ್ವಿಸ್ಟ್‌ ನೋಡಬಹುದು, ತಾಳ್ಮೆಯಿಂದ ಇರಿ” ಎಂದು ಭವ್ಯಾ ಗೌಡ ಹೇಳಿದ್ದಾರೆ.

Read more Photos on
click me!

Recommended Stories