ಆ ಕಾರಣಕ್ಕೆ Karna Serial ಬಿಟ್ಟುಬಿಡು ಅಂತ ತುಂಬ ಜನ ಹೇಳಿದ್ರು: ನಟಿ ನಮ್ರತಾ ಗೌಡ

Published : Oct 23, 2025, 02:53 PM IST

ಕರ್ಣ ಧಾರಾವಾಹಿಯಲ್ಲಿ ನಿತ್ಯಾಳನ್ನು ಮದುವೆಯಾಗದೆ, ತೇಜಸ್‌ ಓಡಿ ಹೋಗಿದ್ದಾನೆ. ನಿತ್ಯಾ ಪ್ರಗ್ನೆಂಟ್.‌ ಎರಡೂ ಮನೆಯ ಅಜ್ಜಿಯಂದಿರಿಗೋಸ್ಕರ ಕರ್ಣ ಹಾಗೂ ನಿತ್ಯಾ ಮದುವೆ ಆಗಿರುವ ನಾಟಕ ಮಾಡಿದ್ದಾರೆ. ಈಗ ಈ ಪಾತ್ರದ ಬಗ್ಗೆ Asianet Suvarna News ಜೊತೆ ನಮ್ರತಾ ಗೌಡ ಮಾತನಾಡಿದ್ದಾರೆ. 

PREV
15
ನಿತ್ಯಾ ಪಾತ್ರ ಏನು?

“ಆರಂಭದಲ್ಲಿ ನನಗೆ ಈ ಸೀರಿಯಲ್‌ ಮಾಡುವಾಗ ಅಷ್ಟು ವರ್ಕ್‌ನಲ್ಲಿ ತೃಪ್ತಿ ಇರಲಿಲ್ಲ. ಈಗ ಕರ್ಣನ ಜೀವನದಲ್ಲಿ ನಿತ್ಯಾ ಪಾತ್ರ ಏನು ಎನ್ನೋದು ರಿವೀಲ್‌ ಆಗ್ತಿದೆ. ಇತ್ತೀಚೆಗೆ ಬರುತ್ತಿರುವ ಎಪಿಸೋಡ್‌ಗಳು ನಿಜಕ್ಕೂ ಖುಷಿ ಕೊಡ್ತಿದೆ, ತೃಪ್ತಿ ಕೊಡ್ತಿದೆ” ಎಂದು ನಮ್ರತಾ ಗೌಡ ಅವರು ಹೇಳಿದ್ದಾರೆ.‌

25
ಪ್ರಪೋಸಲ್ಸ್‌ ಎಷ್ಟು ಬಂದಿವೆ?

“ಪ್ರಪೋಸಲ್‌ಗಳು ಅಷ್ಟು ಎಕ್ಸೈಟ್‌ ಆಗೋದಿಲ್ಲ, ಆದರೆ ನಾನು ಬಡ ಹುಡುಗಿ, ನಾನು ಮನೆಗೆ ಹಿರಿಯ ಮಗಳು, ಎಷ್ಟೇ ಕಷ್ಟ ಆದರೂ ಕೂಡ ಕುಗ್ಗಬಾರದು ಅಂತ ನಿಮ್ಮನ್ನು ನೋಡಿ ಕಲಿಯುತ್ತಿದ್ದೇನೆ ಎಂದು ಹೇಳಿದರು. ನಿತ್ಯಾ ಪಾತ್ರ ಇಷ್ಟು ವೀಕ್ಷಕರಿಗೆ ಹತ್ತಿರ ಆಗಿರೋದು ಖುಷಿ ಕೊಡ್ತಿದೆ” ಎಂದು ನಮ್ರತಾ ಗೌಡ ಹೇಳಿದ್ದಾರೆ.

35
ಪ್ರೀತಿ ಎಂದರೇನು?

“ಜೀವನದಲ್ಲಿ ತುಂಬ ಸುತ್ತಾಡುತ್ತೇವೆ, ಎಲ್ಲ ಪರಿಸ್ಥಿತಿಯನ್ನು ಎದುರಿಸುತ್ತೇವೆ. ಈ ಮಧ್ಯೆ ಮನೆಗೆ ಬಂದಾಗ ಒಂದು ಶಾಂತಿ ಕಾಣಿಸಬೇಕು. ಪ್ರೀತಿ ಅಂದರೆ ಮನೆ ಎನಿಸಬೇಕು” ಎಂದು ನಮ್ರತಾ ಗೌಡ ಹೇಳಿದ್ದಾರೆ.

45
ಪಟಾಕಿ ಹೊಡೆಯೋದು ಇಷ್ಟ

“ನಮ್ಮ ಮನೆಯಲ್ಲಿರುವ ವಾತಾವರಣದಲ್ಲಿ ಪಟಾಕಿ ಹೊಡೆಯಲು ಭಯ ಆಗತ್ತೆ. ನನಗೆ ಪಟಾಕಿ ಅಂದರೆ ತುಂಬ ಇಷ್ಟ. ಈಗ ಪಟಾಕಿ ಹೊಡೆಯುವಾಗ ಮಾಲಿನ್ಯ ಬರುತ್ತದೆ ಎಂದು ಎಲ್ಲರೂ ಕೂಗುತ್ತಾರೆ” ಎಂದು ನಮ್ರತಾ ಗೌಡ ಅವರು ಹೇಳಿದ್ದಾರೆ.

55
ಸೀರಿಯಲ್‌ ಬಿಡು ಎಂದಿದ್ಯಾಕೆ?

“ನನಗೆ ತುಂಬ ಜನರು ಕರ್ಣ ಧಾರಾವಾಹಿಯಲ್ಲಿನ ನಿತ್ಯಾ ಪಾತ್ರಕ್ಕೆ ಬೈದರು, ನನ್ನ ವೈಯಕ್ತಿಕ ವಿಚಾರಗಳನ್ನು ಇಟ್ಟುಕೊಂಡು ನಿಂದಿಸಿದರು. ಹೀಗಾಗಿ ಸೀರಿಯಲ್‌ ಬಿಡು ಅಂತ ಕೆಲವರು ಹೇಳಿದ್ದುಂಟು” ಎಂದು ನಮ್ರತಾ ಗೌಡ ಹೇಳಿದ್ದಾರೆ.

Read more Photos on
click me!

Recommended Stories