ವೈಲ್ಡ್ ಕಾರ್ಡ್ ಸ್ಪರ್ಧಿಗಳು ಅಶ್ವಿನಿ ಗೌಡ ಅವರನ್ನು ಬಲಿಷ್ಠ ಸ್ಪರ್ಧಿ ಎಂದು ಪರಿಗಣಿಸಿ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಟ್ಟಿದ್ದಾರೆ. ಈ ಅನಿರೀಕ್ಷಿತ ನಿರ್ಧಾರದಿಂದ ತೀವ್ರ ನೋವುಂಡ ಅಶ್ವಿನಿ ಕಣ್ಣೀರು ಹಾಕಿದ್ದು, ಗೆಳತಿ ಜಾನ್ವಿ ಅವರಿಗೆ ಸಮಾಧಾನ ಹೇಳಿ ಆಟದ ತಂತ್ರಗಾರಿಕೆಯನ್ನು ವಿವರಿಸಿದ್ದಾರೆ.
ಈ ಬಾರಿಯ ಬಿಗ್‌ಬಾಸ್ ಸೀಸನ್ 12ರ ಮನೆಗೆ ಅಶ್ವಿನಿ ಗೌಡ ಮತ್ತು ಜಾನ್ವಿ ಒಂಟಿಯಾಗಿ ಬಂದ್ರೂ ಜಂಟಿಯಾಗಿಯೇ ಗುರುತಿಸಿಕೊಂಡಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿರುವ ಸೂರಜ್ ಸಿಂಗ್, ರಘು ಮತ್ತು ರಾಶಿ ಅವರ ಇಚ್ಛೆಯಂತೆ ಅಶ್ವಿನಿ ಗೌಡ ಅವರನ್ನು ಕ್ಯಾಪ್ಟನ್ಸಿ ಟಾಸ್ಕ್‌ಗಳಿಂದ ಹೊರಗೆ ಇರಿಸಲಾಗಿದೆ. ಇದರಿಂದ ತೀವ್ರ ನೋವಿಗೆ ಒಳಗಾಗಿರುವ ಅಶ್ವಿನಿ ಗೌಡ ಕಣ್ಣೀರು ಹಾಕಿದ್ದಾರೆ.
25
ಮೂವರು ಸ್ಪರ್ಧಿಗಳ ತೀರ್ಮಾನ
ಈಗಾಗಲೇ ಅಶ್ವಿನಿ ಗೌಡ ಮನೆಯಲ್ಲಿ ರಾಜಮಾತೆಯಾಗಿ ಆಟವಾಡಿರೋದನ್ನು ನೋಡಿದ್ದೇವೆ. ಅಶ್ವಿನಿ ಗೌಡ ಸ್ಟ್ರಾಂಗ್ ಆಗಿರುವ ಕಾರಣ ಅವರನ್ನು ಟಾಸ್ಕ್‌ಗಳಿಂದ ಹೊರಗೆ ಇರಿಸಲು ಮೂವರು ನಿರ್ಧರಿಸಿದ್ದೇವೆ ಎಂದು ರಿಷಾ ಹೇಳಿದ್ದರು. ರಿಷಾ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿದ ರಘು, ನಮ್ಮ ನಡುವೆ ಆಗಿರುವ ಚರ್ಚೆಯೇ ಬೇರೆ. ಇಲ್ಲಿ ಎಲ್ಲರ ಮುಂದೆ ಹೇಳುತ್ತಿರುವ ಕಾರಣ ಬೇರೆಯಾಗಿದೆ ಎಂದರು. ಹಾಗಾಗಿ ರಿಷಾ ಮತ್ತೊಮ್ಮೆ ಎಲ್ಲಾ ಸದಸ್ಯರನ್ನು ಒಂದೆಡೆ ಕರೆದು ಸ್ಪಷ್ಟ ಕಾರಣ ತಿಳಿಸಿದರು.
35
ಆಟದಿಂದ ಹೊರಗುಳಿದ ಅಶ್ವಿನಿ ಗೌಡ, ಕಾಕ್ರೋಚ್ ಸುಧಿ
ಅಶ್ವಿನಿ ಗೌಡ ಅವರು ಎಲ್ಲಾ ಕಡೆ ನಾನು, ನಾನು ಎಂದು ಹೇಳಿಕೊಳ್ಳುತ್ತಿರುತ್ತಾರೆ. ಫಸ್ಟ್ ಟೈಮ್ ಏನಾದ್ರು ಅಶ್ವಿನಿ ಗೌಡ ಕ್ಯಾಪ್ಟನ್ ಆದ್ರೆ ತುಂಬಾನೇ ಡಾಮಿನೇಟ್ ಆಗುತ್ತಾರೆ ಎಂದು ರಘು ಕಾರಣ ಹೇಳುತ್ತಾರೆ. ನಾವೇ ಅಶ್ವಿನಿ ಅವರನ್ನು ಸ್ಟಾರ್ ಮಾಡಿದ್ದು, ಮತ್ತೆ ಅವರನ್ನು ಸ್ಟಾರ್ ಮಾಡೋದು ಬೇಡ ಎಂಬ ಮಾತನ್ನು ಚರ್ಚೆ ವೇಳೆ ರಿಷಾ ಹೇಳಿದ್ದರು. ಮೂವರ ಒಮ್ಮತದ ತೀರ್ಮಾನದ ಪ್ರಕಾರ, ಟಾಸ್ಕ್‌ಗಳಿಂದ ಅಶ್ವಿನಿ ಗೌಡ ಜೊತೆಯಲ್ಲಿ ಕಾಕ್ರೋಚ್ ಸುಧಿ ಸಹ ಹೊರಗೆ ಉಳಿದಿದ್ದಾರೆ.
ಮೂರು ವಾರಗಳಿಂದ ಕಷ್ಟಪಟ್ಟು ಆಡಿಕೊಂಡು ಬಂದಿದ್ದೇನೆ. ಈ ಸ್ಟ್ರಾಂಗ್ ಅಂತ ಆಟದಿಂದ ಹೊರಗಿಟ್ಟರೆ ಹೇಗೆ? ಕುದುರೆಯನ್ನು ರೇಸ್‌ಗೆ ಬಿಡದೇ ಹೇಗೆ ಬಲಿಷ್ಠ ಎಂದು ನಿರ್ಧಾರ ಮಾಡ್ತಾರೆ. ಬಿಗ್‌ಬಾಸ್ ಮನೆಯಲ್ಲಿ ಅವಮಾನಗಳಾದಾಗ ಅದನ್ನು ಮರೆಯೋಕೆ ಆಗಲ್ಲ. ಮರೆತು ಮುಂದೆ ಹೋಗೋಕು ಸಾಧ್ಯವಿಲ್ಲ ಎಂದು ಜಾನ್ವಿ ಮುಂದೆ ಅಶ್ವಿನಿ ಗೌಡ ಹೇಳಿದ್ದಾರೆ.
ದುಃಖದಲ್ಲಿರುವ ಅಶ್ವಿನಿ ಗೌಡ ಅವರಿಗೆ ಹಿತೈಷಿಯಾಗಿರುವ ಜಾನ್ವಿಯೇ ಸಮಾಧಾನ ಮಾಡಿದ್ದಾರೆ. ಈ ಹಿಂದಿನ ಟಾಸ್ಕ್‌ನಲ್ಲಿ ಧನುಷ್ ನಮಗೆ ಬಲಿಷ್ಠ ಎದುರಾಳಿ ಎಂಬ ಕಾರಣಕ್ಕೆ ಎಲ್ಲಾ ಭಾರವನ್ನು ಆತನ ತಕ್ಕಡಿಗೆ ಹಾಕಿ ಆಟದಿಂದ ಹೊರಗುಳಿಯುವಂತೆ ಮಾಡಲಾಯ್ತು. ಈಗ ಅದೇ ರೀತಿಯಲ್ಲಿಯೇ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮಾಡಿದ್ದಾರೆ ಎಂದು ಹೇಳಿ ಅಶ್ವಿನಿ ಗೌಡ ಅವರಿಗೆ ಸತ್ಯ ದರ್ಶನ ಮಾಡಿಸಿದ್ದಾರೆ. ಇದಾದ ಬಳಿಕ ಜಾನ್ವಿ ಮಾತುಗಳಿಂದ ಅಶ್ವಿನಿ ಗೌಡ ಸಮಾಧಾನಾ ಆಗಿದ್ದಾರೆ.