BBK 12: ಕಾವ್ಯಾಶೈವಗೆ ಸಿಕ್ಕ ಹಣವೆಷ್ಟು? ಅಶ್ವಿನಿ ಗೌಡಗೆ ಟಾಂಟ್​ ಕೊಟ್ಟು ಗಿಲ್ಲಿ ಬಗ್ಗೆ ಶಾಕಿಂಗ್​ ಸ್ಟೇಟ್​ಮೆಂಟ್!

Published : Jan 18, 2026, 10:22 PM IST

ಬಿಗ್​ಬಾಸ್​ ಸೀಸನ್​ 12ರ 4ನೇ ರನ್ನರ್​ ಅಪ್​ ಆಗಿ ಹೊರಬಂದ ಕಾವ್ಯಾ ಶೈವ, ಬಹುಮಾನದ ಜೊತೆಗೆ 'ಗಿಲ್ಲಿ ನಟ'ನ ಕುರಿತು ಮತ್ತು ಅಶ್ವಿನಿ ಗೌಡ ಅವರಿಗೆ ತಿರುಗೇಟು ನೀಡುವ ಮೂಲಕ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ.

PREV
16
4ನೇ ರನ್ನರ್​ ಅಪ್​ ಆದ ಕಾವ್ಯಾ

ಬಿಗ್​ಬಾಸ್​ ಸೀಸನ್​ 12ರಿಂದ (Bigg Boss 12) ಇದಾಗಲೇ ನಾಲ್ಕನೆಯ ರನ್ನರ್ಸ್​ ಅಪ್​ ಆಗಿ ಕಾವ್ಯಾ ಶೈವ ಹೊರಕ್ಕೆ ಬಂದಿದ್ದಾರೆ. ಈ ಹಂತದಲ್ಲಿ ಹೊರಕ್ಕೆ ಬರುವುದು ಎಂದರೆ, ಅದು ತುಂಬಾ ಕಷ್ಟದ ಮಾತೇ. ಆದರೂ ಅಷ್ಟೂ ಸ್ಪರ್ಧಿಗಳನ್ನು ಮೀರಿ ಇಲ್ಲಿಯವರೆಗೆ ಬಂದಿದ್ದರು ಕಾವ್ಯಾ.

26
ಸಿಕ್ಕಿದ್ದು ಎಷ್ಟು?

ಇವರಿಗೆ ಬಿಗ್​ಬಾಸ್​​ ಎಷ್ಟು ಸಂಭಾವನೆ ನೀಡಿದೆ ಎನ್ನುವುದು ರಿವೀಲ್​ ಆಗುವುದಿಲ್ಲ. ಆದರೆ ಮನೆಯಿಂದ ಹೊರಕ್ಕೆ ಬರುವ ವೇಳೆ ಇವರಿಗೆ ಬಿಗ್​ಬಾಸ್​ ಕಡೆಯಿಂದ 5 ಲಕ್ಷ ರೂಪಾಯಿ ಮತ್ತು ಪ್ರಾಯೋಜಕರ ಕಡೆಯಿಂದ 10 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ಇದರ ಜೊತೆಗೆ ಕೆಲವೊಂದು ಉಡುಗೊರೆಗಳು ಕೂಡ ಸಿಕ್ಕಿವೆ.

36
ಬಿಗ್​ ಸ್ಟೇಟ್​ಮೆಂಟ್​

ಹೊರಬರುವಾಗ ಕಾವ್ಯಾ ಶೈವ ಸುಮ್ಮನೇ ಬರಲಿಲ್ಲ. ಬಿಗ್​ ಸ್ಟೇಟ್​ಮೆಂಟ್​ ಕೊಟ್ಟೇ ಬಂದಿದ್ದಾರೆ. ಅದು ಗಿಲ್ಲಿ ನಟನ (Bigg Boss Gilli Nata) ಕುರಿತಾಗಿ.

46
ಗಿಲ್ಲಿ ಕೃಪೆ

ಕಾವ್ಯಾ ಅವರು ಇಲ್ಲಿಯವರೆಗೂ ಬಂದಿರೋದು ಗಿಲ್ಲಿ ನಟನ ಕೃಪೆಯಿಂದ ಎನ್ನುವ ಮಾತಿತ್ತು. ಅವರ ಸಹೋದರ ಒಳಗೆ ಹೋದಾಗಲೂ ನೀನು ಗಿಲ್ಲಿ ಪರ ಇರು, ಹೊರಗಡೆ ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ ಎನ್ನುವ ಮೂಲಕ ವಿವಾದವನ್ನೂ ಸೃಷ್ಟಿಸಿದ್ದರು.

56
ಅಶ್ವಿನಿ ಗೌಡಗೆ ಟಾಂಟ್​

ಇದೇ ವೇಳೆ ಬಿಗ್​ಬಾಸ್​​ ಮನೆಯಿಂದ ಹೊರಕ್ಕೆ ಬರುವ ವೇಳೆ, ಕಾವ್ಯಾ ಅವರು, ತಮ್ಮ ವಿಶೇಷ ಪ್ರಯಾಣದ ವಿಡಿಯೋ ನೋಡುತ್ತಾ ಭಾವುಕರಾದರು. ಆ ಸಮಯದಲ್ಲಿ ಗಿಲ್ಲಿಯೊಂದಿಗೆ ಮಾತ್ರ ಕಾಣಿಸಿಕೊಂಡಿರುವ ಬಗ್ಗೆ ಅಶ್ವಿನಿ ಗೌಡ ಅವರು ಹೇಳಿದ್ದ ಮಾತನ್ನು ಈ ವಿಡಿಯೋದಲ್ಲಿ ನೋಡಿದರು.

66
ಇದು ಕಪಿಲ್​ ಷೋ ಅಲ್ಲ

ಇದಕ್ಕೆ ಬೇಸರ ವ್ಯಕ್ತಪಡಿಸುವ ಮೂಲಕ ಅಶ್ವಿನಿ ಗೌಡ ಅವರಿಗೆ ಟಾಂಟ್​ ಕೊಟ್ಟ ಕಾವ್ಯಾ, "ನನ್ನ ಪಕ್ಕದಲ್ಲಿ ಗಿಲ್ಲಿ ಮಾತ್ರ ಇದ್ದು ನಾನು ಇಷ್ಟು ದೂರ ಬರಲು, ಇದು ಕಪಿಲ್ ಷೋ ಅಲ್ಲ. ಇದು ಬಿಗ್ ಬಾಸ್ ಕನ್ನಡ" ಎಂದರು. ಅವರ ಈ ಮಾತಿಗೆ ಪ್ರೇಕ್ಷಕರು ಹರ್ಷೋದ್ಗಾರದಿಂದ ಚಪ್ಪಾಳೆ ಸುರಿಮಳೆ ಸುರಿಸಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories