ಬಿಗ್ಬಾಸ್ ಸೀಸನ್ 12 ಅನ್ನು ಗಿಲ್ಲಿ ಗೆದ್ದಿದ್ದಾರೆ. ಈ ಹಿಂದೆ ಗಿಲ್ಲಿ ಗೆದ್ದರೆ ಅವರ ಕಾಲ ಕೆಳಗೆ ನುಸುಳುವುದಾಗಿ ಹೇಳಿದ್ದ ಡಾಗ್ ಸತೀಶ್‌ಗೆ, ಇದೀಗ ಗಿಲ್ಲಿ ಅಭಿಮಾನಿಗಳು ಕೊಟ್ಟ ಮಾತು ಉಳಿಸಿಕೊಳ್ಳುವಂತೆ ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯಿಸುತ್ತಿದ್ದಾರೆ.
ಬಿಗ್ಬಾಸ್ ಸೀಸನ್ 12 (Bigg Boss Season 12) ಅನ್ನು ಗಿಲ್ಲಿ ನಟ ಗೆದ್ದು ಬೀಗಿ ಆಗಿದೆ. ಕೋಟ್ಯಂತರ ಮಂದಿಯ ಹಾರೈಕೆ ಈಡೇರಿದೆ. 50 ಲಕ್ಷ ರೂಪಾಯಿ ನಗದು ಬಹುಮಾನ ಸೇರಿದಂತೆ ಹಲವಾರು ಉಡುಗೊರೆ, ಬಹುಮಾನಗಳನ್ನು ಪಡೆದುಕೊಂಡಿದ್ದಾರೆ ಗಿಲ್ಲಿ.
26
ಡಾಗ್ ಸತೀಶ್ ಮೇಲೆ ಕಣ್ಣು!
ಇದರ ನಡುವೆಯೇ ಇದೀಗ ಬಿಗ್ಬಾಸ್ನ ಸ್ಪರ್ಧಿಯಾಗಿದ್ದ ಡಾಗ್ ಸತೀಶ್ ಅವರ ಮೇಲೆ ಗಿಲ್ಲಿ ನಟನ ಅಭಿಮಾನಿಗಳ ಕಣ್ಣು ನೆಟ್ಟಿದೆ. ಅಷ್ಟಕ್ಕೂ ಮೊದಲಿನಿಂದಲೂ ಗಿಲ್ಲಿಯ ಮೇಲೆ ಕೆಂಡಕಾರುತ್ತಲೇ ಬಂದಿದ್ದಾರೆ ಡಾಗ್ ಸತೀಶ್ (Dog Satish). ಗಿಲ್ಲಿ ನಟ ವಿನ್ ಆಗುವುದಿಲ್ಲ ಎನ್ನುತ್ತಲೇ ಬಂದವರು ಇವರು.
36
ಕಾಲ ಕೆಳಗೆ ನುಸುಳುವೆ
ಮಾಧ್ಯಮಗಳ ಮುಂದೆ ಸಂದರ್ಶನ ನೀಡುವ ಸಮಯದಲ್ಲಿ, ನಾನು ಭವಿಷ್ಯ ನುಡಿದು ಆಗಿದೆ. ಗಿಲ್ಲಿ ನಟ ಈ ಬಾರಿ ಗೆಲ್ಲುವುದಿಲ್ಲ. ಒಂದು ವೇಳೆ ಗೆದ್ದರೆ ಅವರ ಕಾಲಿನ ಕೆಳಗೆ ನುಸುಳುತ್ತೇನೆ ಎಂದಿದ್ದರು.
ಕಾಲಿನ ಕೆಳಗೆ ನುಸುಳಬೇಕು ಎಂದರೆ ಮೊದಲಿಗೆ ಕಾಲು ಬೀಳಬೇಕು. ಆದ್ದರಿಂದ ಕೊಟ್ಟ ಮಾತಿನಂತೆ ಯಾವಾಗ ಈ ಕೆಲಸ ಮಾಡುತ್ತೀರಿ ಎಂದು ಗಿಲ್ಲಿನಟನ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಡಾಗ್ ಸತೀಶ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
56
ಪಾರ್ಟಿ ಅರೇಂಜ್
ಇದಾಗಲೇ ಗಿಲ್ಲಿ ನಟ ಹೊರಕ್ಕೆ ಬಂದ ಎಂದು ಹೇಳಿ ಸತೀಶ್ ಪಾರ್ಟಿ ಕೂಡ ಅರೇಂಜ್ ಮಾಡಿದ್ದರು. ಆದರೆ ಇದೀಗ ಗಿಲ್ಲಿ ಗೆದ್ದಿರೋ ಹಿನ್ನೆಲೆಯಲ್ಲಿ ಅವರ ಕಾಲಿಗೆ ಬೀಳಲು ತಾವೇ ಮುಹೂರ್ತ ಫಿಕ್ಸ್ ಮಾಡುವುದಾಗಿ ಫ್ಯಾನ್ಸ್ ಹೇಳುತ್ತಿದ್ದಾರೆ.
66
ಎಷ್ಟು ಲಕ್ಷದ ಡ್ರೆಸ್?
ಬಾಯಿ ಬಿಟ್ಟರೆ ತಮ್ಮ ಬಳಿ ಇರುವುದು ಲಕ್ಷ ಲಕ್ಷ ಬೆಲೆಬಾಳುವ ಡ್ರೆಸ್ ಎಂದು ಹೇಳುತ್ತಲೇ ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ಸ್ ಬಾಯಿಗೆ ಆಹಾರವಾಗಿರುವ ಡಾಗ್ ಸತೀಶ್, ಗಿಲ್ಲಿ ನಟನ ಕಾಲಿಗೆ ಬೀಳುವಾಗ ಎಷ್ಟು ಲಕ್ಷ ಬೆಲೆ ಬಾಳುವ ಷರ್ಟ್ ಧರಿಸಿ ಬರುತ್ತಾರೆ ಎಂದು ಪ್ರಶ್ನಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.