ಬಿಗ್‌ಬಾಸ್ ಕನ್ನಡ ಸೀಸನ್ 12ರ ಸರ್ಪೈಸ್ ಪ್ಯಾಕೇಜ್ ಆಗಿದ್ದ ರಕ್ಷಿತಾ ಶೆಟ್ಟಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಆರಂಭದಲ್ಲಿ ತಮ್ಮ ಕನ್ನಡದ ಬಗ್ಗೆ ಟೀಕೆ ಎದುರಿಸಿದ್ದರೂ, ಮನೆಯಲ್ಲಿ ಅವರು ಆಡಿದ ಹಲವು ಮಾತುಗಳು ಅಚ್ಚರಿಯ ರೀತಿಯಲ್ಲಿ ಸತ್ಯವಾಗಿದ್ದು ವೀಕ್ಷಕರಲ್ಲಿ ಕುತೂಹಲ ಮೂಡಿಸಿತ್ತು.
ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ರಕ್ಷಿತಾ ಶೆಟ್ಟಿ ಸರ್ಪೈಸ್ ಪ್ಯಾಕೇಜ್ ಆಗಿದ್ದರು. ಕರಾವಳಿಯ ಯಾವುದೋ ಮೂಲೆಯಲ್ಲಿ ವ್ಲಾಗ್ ಮಾಡಿಕೊಂಡಿದ್ದ ರಕ್ಷಿತಾ ಶೆಟ್ಟಿ ಬಿಗ್‌ಬಾಸ್‌ಗೆ ಬಂದಾಗ ಆಕೆ ಕನ್ನಡತಿ ಅಲ್ಲ. ಮಾತನಾಡಲು ಕನ್ನಡ ಬರಲ್ಲ ಹೀಗೆ ಹಲವು ನೆಗೆಟಿವ್ ಮಾತುಗಳು ಕೇಳಿ ಬಂದಿದ್ದವು. ನಂತರದ ದಿನಗಳಲ್ಲಿ ರಕ್ಷಿತಾ ಶೆಟ್ಟಿ ಎಲ್ಲರಿಗೂ ಇಷ್ಟವಾಗಲು ಆರಂಭಿಸಿದರು.
25
ತುಳು, ಹಿಂದಿ ಮಿಶ್ರಿತ ಕನ್ನಡ ಮಾತನಾಡುವ ರಕ್ಷಿತಾ ಶೆಟ್ಟಿ
ಬಿಗ್‌ಬಾಸ್‌ಗೆ ಬಂದ ಮೊದಲ ದಿನವೇ ರಕ್ಷಿತಾ ಶೆಟ್ಟಿ ಮನೆಯಿಂದ ಹೊರಗೆ ನಡೆದಿದ್ದರು. ನಂತರ ಬಂದ ತುಳು, ಹಿಂದಿ ಮಿಶ್ರಿತ ಕನ್ನಡ ಮಾತನಾಡುವ ರಕ್ಷಿತಾ ಶೆಟ್ಟಿ ಇದೀಗ ಮೊದಲ ರನ್ನರ್ ಅಪ್ ಆಗಿದ್ದಾರೆ. ವೀಕೆಂಡ್ ಸಂಚಿಕೆಯಲ್ಲೊಮ್ಮೆ ರಕ್ಷಿತಾಗೆ ನೀವು ಯಾರನ್ನು ಮನೆಯಿಂದ ಹೊರಗೆ ಹಾಕಲು ಇಷ್ಟಪಡುತ್ತೀರಿ ಎಂದು ಸುದಿಪ್ ಕೇಳಿದ್ದರು.
35
ರೆಸಾರ್ಟ್‌ಗೆ ಶಿಫ್ಟ್
ಸುದೀಪ್ ಅವರ ಪ್ರಶ್ನೆಗೆ ಯಾವುದೇ ಫಿಲ್ಟರ್ ಇಲ್ಲದೇ ಉತ್ತರಿಸಿದ್ದ ರಕ್ಷಿತಾ ಶೆಟ್ಟಿ, ಎಲ್ಲರನ್ನೂ ಎಂದು ಹೇಳಿದ್ದರು. ಇದಾದ ಕೆಲವೇ ದಿನಗಳಲ್ಲಿ ಕೆಲವು ಕಾರಣಗಳಿಂದ ಬಿಗ್‌ಬಾಸ್ ಮನೆಗೆ ಬೀಗ ಬಂದಿತ್ತು. ಎಲ್ಲಾ ಸ್ಪರ್ಧಿಗಳು ಸುಮಾರು 48 ಗಂಟೆಗಳ ಕಾಲ ರೆಸಾರ್ಟ್‌ಗೆ ಶಿಫ್ಟ್ ಆಗಿದ್ದರು. ಇದನ್ನು ನೋಡಿದ ವೀಕ್ಷಕರು ರಕ್ಷಿತಾ ಮಾತು ಸತ್ಯವಾಗಿದೆ ಎಂದಿದ್ದರು.
ಇದೇ ರೀತಿಯಾಗಿ ಸಹ ಸ್ಪರ್ಧಿ ಸ್ಪಂದನಾ ಸೋಮಣ್ಣ ಜೊತೆ ರಕ್ಷಿತಾ ಜೊತೆ ಮಾತನಾಡುವ ಸಂದರ್ಭದಲ್ಲಿ, ನನ್ನದು ಸೀರಿಯಲ್‌ನಲ್ಲಿ ಅಳುಮುಂಜಿ ಪಾತ್ರ. ನಾನು ಧಾರಾವಾಹಿಯಲ್ಲಿ ತುಂಬಾ ಅಳುತ್ತೀನಿ ಎಂದಿದ್ದರು. ಇದನ್ನು ಕೇಳಿ ಕುತೂಹಲಗೊಂಡ ರಕ್ಷಿತಾ, ಒಮ್ಮೆ ಹೇಗೆ ಅಳುತ್ತೀರಿ ಎಂದು ತೋರಿಸಿ ಎಂದು ಕೇಳಿಕೊಂಡಿದ್ದರು. ಈ ಮಾತು ಹೇಳಿದ ಮುಂದಿನ ವಾರವೇ ಸ್ಪಂದನಾ ಸೋಮಣ್ಣ-ಧನುಷ್ ನಟಿಸುವ ಸನ್ನಿವೇಶ ಸೃಷ್ಟಿಯಾಗಿತ್ತು. ಇಲ್ಲಿ ಸ್ಪಂದನಾ ಕಣ್ಣೀರು ಹಾಕುತ್ತಾ ನಟಿಸಿದ್ದರು. ಇಲ್ಲಿಯೂ ರಕ್ಷಿತಾ ಆಸೆ ಈಡೇರಿತ್ತು.
ಇದಾದ ಬಳಿಕ ಮುಖಕ್ಕೆ ಮಸಿ ಬಳಿದು ನಾಮಿನೇಟ್ ಮಾಡುವ ಸಂದರ್ಭದಲ್ಲಿ ನಿಮ್ಮನ್ನು ಹೊರ ಹಾಕಿದ್ಮೇಲೆಯೇ ನಾನು ಈ ಮನೆಯಿಂದ ಹೊರಗೆ ಹೋಗುತ್ತೇನೆ ಎಂದು ಅಶ್ವಿನಿ ಗೌಡ ಅವರಿಗೆ ರಕ್ಷಿತಾ ಸವಾಲು ಹಾಕಿದ್ದರು. ಇದೀಗ ಈ ಮಾತು ಸತ್ಯ ಆಗಿದೆ. ಮನೆಯಿಂದ ಜೊತೆಯಾಗಿ ಬಂದ್ರೂ ಅಶ್ವಿನಿ ಗೌಡ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನದಲ್ಲಿ ರಕ್ಷಿತಾ ಶೆಟ್ಟಿ ನಿಂತುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.