Amruthadhaare Serial: ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಅಮೃತಧಾರೆಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಬರುತ್ತಿದೆ. ಮನೆಗೆ ಮತ್ತೆ ವಾಪಾಸ್ ಬಂದಿರುವ ಮಲ್ಲಿ ಮುಂದೆ ಶಾಕುಂತಲಾ ಮತ್ತು ಜೈದೇವ್ ಹೈ ಡ್ರಾಮಾ ಬಯಲಾಗೋ ಸಮಯ ಬಂದಿದೆ. ಪರ್ಮನೆಂಟ್ ಆಗಿ ಜೈಲಲ್ಲಿ ಕಂಬಿ ಎಣಿಸೋ ದಿನ ಸದ್ಯದಲ್ಲೇ ಬರಲಿದೆ.
‘ಅಮೃತಧಾರೆ’ ಧಾರಾವಾಹಿಯಲ್ಲಿ(Amruthadhaare Serial) ಮಹಾ ತಿರುವುಗಳನ್ನು ಒಳಗೊಂದ ಎಪಿಸೋಡ್ ಗಳು ಪ್ರಸಾರವಾಗುತ್ತಿದೆ. ಒಂದೆಡೆ ಭೂಮಿಕಾ ಜೀವನದ ಕೊನೆಕ್ಷಣಗಳನ್ನು ಎಣಿಸುತ್ತಿದ್ದರೆ, ಆಕೆಗೆ ಜೀವನ ಪೂರ್ತಿ ಸಂತೋಷ ಕೊಡುವ ಹುಮ್ಮಸ್ಸಿನಲ್ಲಿದ್ದಾರೆ ಗೌತಮ್. ಮತ್ತೊಂದು ಕಡೆ, ಜೈದೇವ್ ಮತ್ತು ಶಾಕುಂತಲಾ ಡ್ರಾಮಾ ಜೋರಾಗಿಯೇ ನಡೆಯುತ್ತಿದೆ.
26
ಪೊಲೀಸ್ ಟ್ರೈನಿಂಗ್ ಮುಗಿಸಿ ಮಲ್ಲಿ ವಾಪಾಸ್
ಇನ್ನೊಂದೆಡೆ ಪೊಲೀಸ್ ಟ್ರೈನಿಂಗ್ ಮಾಡುತ್ತಿರುವ ಮಲ್ಲಿ ಇದೀಗ ಮನೆಗೆ ವಾಪಾಸ್ ಬಂದಿದ್ದಾಳೆ. ಮಲ್ಲಿಗೆಯ ಮೊಗ್ಗಿನಂತೆ ಮೃದುವಾಗಿದ್ದ ಮಲ್ಲಿ, ಇದೀಗ ಖಡಕ್ ಮಲ್ಲಿಯಾಗಿ ಬದಲಾಗಿದ್ದಾಳೆ. ಬಂದವಳೇ ಶಾಕುಂತಲಾ ಮುಂದೆ ತಾನು ಏನು ಮಾಡಬಲ್ಲೇ ಅನ್ನೋದನ್ನೆಲ್ಲಾ ತೋರಿಸಿದ್ದಾರೆ. ಮಲ್ಲಿ ವರಸೆಗೆ ಭಯ ಬಿದ್ದರೂ ಸಹ ಎದುರಿನಿಂದ ಭೇಷ್ ಮಲ್ಲಿ ಎಂದು ಬೆನ್ನು ತಟ್ಟಿದ್ದಾಳೆ ಶಾಕುಂತಲಾ.
36
ಮಕ್ಕಳಿಂದ ರಿವೀಲ್ ಆಯ್ತು ಆ ಘಟನೆ
ಮಿಂಚು ಮತ್ತು ಆಕಾಶ್ ಇಬ್ಬರೂ ಚಿಕ್ಕಿಯನ್ನು ಜೊತೆಗೆ ಕೂರಿಸಿಕೊಂಡು, ಹುಟ್ಟುಹಬ್ಬದ ದಿನ ಮನೆಯಲ್ಲಿ ಏನೆಲ್ಲಾ ಆಯ್ತು ಎನ್ನುವುದನ್ನು ತಿಳಿಸಿದ್ದಾರೆ. ಕೇಕ್ ನಲ್ಲಿ ಬಾಂಬ್, ಮನೆಗೆ ಬಂದಿದ್ದ ಜೈದೇವ್, ಶಾಕುಂತಲಾ ಜೈ ದೇವನ್ನು ಪೊಲೀಸರಿಗೆ ಹಿಡಿದು ಕೊಟ್ಟಿದ್ದು, ಬಳಿಕ ಜೈ ಬೇಲ್ ಮೇಲೆ ಹೊರ ಬಂದಿದ್ದು ಎಲ್ಲವನ್ನೂ ಮಕ್ಕಳು ಮಲ್ಲಿಗೆ ತಿಳಿಸಿದ್ದಾರೆ.
ಶಾಕುಂತಲಾ ಮುಂದೆ ಮಲ್ಲಿ ಖಡಕ್ ಆಗಿ, ನಾನು ಹಿಂದಿನ ಎಲ್ಲಾ ತಪ್ಪುಗಳನ್ನು ಸರಿ ಮಾಡೋದಕ್ಕೆ ಈಗ ಬಂದಿದ್ದೇನೆ. ಕರ್ನಾಟಕದಲ್ಲೇ ಪೋಸ್ಟಿಂಗ್ ಕೇಳಿದ್ದೀನಿ, ಇನ್ನು ತುಂಬಾ ಜನಕ್ಕೆ ನ್ಯಾಯ ಸಿಗೋದು ಬಾಕಿ ಇದೆ. ತುಂಬಾ ಲೆಕ್ಕ ಮುಗಿಸೋದು ಬಾಕಿ ಇದೆ ಅತ್ತೆ. ಅನ್ಯಾಯ ಆಗ್ತಿದ್ರೂ ನೋಡ್ಕೊಂಡು ಸುಮ್ನೆ ಇದ್ದ ಮಲ್ಲಿನೇ ಬೇರೆ, ನಾನೇ ಬೇರೆ, ಪೆಂಡಿಂಗ್ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ ಎನ್ನುತ್ತಾ, ತಾನೆ ಶಾಕುಂತಲಾ ಮುಖವಾಡ ಬಯಲು ಮಾಡುವಂತೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾಳೆ.
56
ಮಲ್ಲಿ ಕೈಯಲ್ಲೇ ಸಿಕ್ಕಿ ಬೀಳ್ತಾನ ಜೈದೇವ್
ಇಷ್ಟು ದಿನ ಏನೆ ಮೋಸ, ವಂಚನೆ, ಕೊಲೆ ಮಾಡಿದ್ರೂ ತಪ್ಪಿಸಿಕೊಂಡಿದ್ದ ಜೈದೇವ್ ಶೀಘ್ರದಲ್ಲಿ ಮಲ್ಲಿ ಪೊಲೀಸ್ ಆದ ತಕ್ಷಣ ಆಕೆಯ ಕೈಯಲ್ಲೇ ಸಿಕ್ಕಿ ಬೀಳುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಜೈದೇವ್ ಗೆ ಶಾಕುಂತಲಾ ಎಚ್ಚರಿಕೆ ಕೊಟ್ಟು ಆಗಿದೆ. ಮುಂದೆ ಏನಾಗಬಹುದು? ಮಲ್ಲಿ ಜೆಡಿ ಮತ್ತು ಶಕ್ಕು ಆಟಕ್ಕೆ ಫುಲ್ ಸ್ಟಾಪ್ ಆಗ್ತಾಳ? ಕಾದು ನೋಡಬೇಕು.
66
ಮುಂದೇನಾಗಬಹುದು ಧಾರಾವಾಹಿಯಲ್ಲಿ?
ಸದ್ಯ ಧಾರಾವಾಹಿಯಲ್ಲಿ ಭೂಮಿಕಾ ಕ್ಯಾನ್ಸರ್ ನಿಂದ ಪಾರಾಗಿ ಬರುತ್ತಾಳೆಯೇ? ಎಂದು ಕಾದು ನೋಡಬೇಕು. ಗೌತಮ್ ಗೆ ವಿಷ್ಯ ಗೊತ್ತಾದರೆ, ಗಂಡನ ಬೆಂಬಲದಿಂದ ಭೂಮಿಕಾ ಖಂಡಿತವಾಗಿಯೂ ಆರೋಗ್ಯವಾಗಿ ಮರಳಿ ಬರುತ್ತಾಳೆ ಎನ್ನುವುದು ವೀಕ್ಷಕರ ನಂಬಿಕೆ. ಇನ್ನು ಶಾಕುಂತಲಾ ಮತ್ತು ಜೆಡಿಗೂ ಇನ್ನೂ ಹೆಚ್ಚು ಕಾಲ ಉಳಿಗಾಲವಿಲ್ಲ, ಮಲ್ಲಿಯಿಂದನೇ ಅಧೋಗತಿ ಕಾಣುತ್ತಾರೆ ಎನ್ನುತ್ತಿದ್ದಾರೆ ವೀಕ್ಷಕರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.