Annayya Serial: ಶಿವಣ್ಣನ ಮುಂದೆ ಅಪ್ಪನ ಮುಖವಾಡ ಕಳಚಿದ ಪಾರ್ವತಿ; ತಂಗಿಗೆ ರಕ್ಷಣೆ ಕೊಡ್ತಾನಾ ಅಣ್ಣಯ್ಯ?

Published : Jul 20, 2026, 11:20 AM IST

ಅಣ್ಣಯ್ಯ ಧಾರಾವಾಹಿಯಲ್ಲಿ, ಪಾರ್ವತಿಯು ತನ್ನ ತಂದೆ ವೀರಭದ್ರಯ್ಯನ ಕುತಂತ್ರವನ್ನು ಪತಿ ಶಿವುನ ಮುಂದೆ ಬಯಲು ಮಾಡುತ್ತಾಳೆ. ತನ್ನ ತಂಗಿ ರತ್ನಾಗೆ ಆಗುತ್ತಿರುವ ಅನ್ಯಾಯವನ್ನು ಕೇಳಿ ಕೋಪಗೊಂಡ ಶಿವು, ಮಾವನ ಮನೆಗೆ ತೆರಳಿ ಸತ್ಯಾಸತ್ಯತೆ ತಿಳಿಯಲು ಮುಂದಾಗುತ್ತಾನೆ.

PREV
16

Annayya Kannada Serial Episode: ಅಣ್ಣಯ್ಯ ಧಾರಾವಾಹಿಯಲ್ಲಿ ಪಾರ್ವತಿ ಅವರ ಅಪ್ಪ ವೀರಭಧ್ರಯ್ಯ, ಶಿವುಗೆ ಯಾಮಾರಿಸಿ ಊಸರವಳ್ಳಿಯಂತೆ ಬಣ್ಣ ಬದಲಾಯಿಸುತ್ತಾ ಮೋಸ ಮಾಡುತ್ತಲೇ ಬಂದಿದ್ದಾನೆ. ಆದರೆ, ಶಿವಣ್ಣನ ವಂಶವನ್ನೇ ಸರ್ವನಾಶ ಮಾಡಲು ಮುಂದಾಗಿರುವ ವೀರಭದ್ರನ ಕುತಂತ್ರವನ್ನ ಸ್ವತಃ ಮಗಳೇ ಶಿವಣ್ಣನ ಮುಂದೆ ಬಿಚ್ಚಿಟ್ಟಿದ್ದಾಳೆ.

26

ಹೌದು, ನಾಲ್ವರು ತಂಗಿಯರ ಪ್ರೀತಿಯ ಅಣ್ಣನಾಗಿರುವ ಶಿವುಗೆ ಮಾವನ ಮೇಲೆ ಅಪಾರವಾದ ನಂಬಿಕೆಯಿದೆ. ಶಿವುಗೆ ಪ್ರತಿ ಹೆಜ್ಜೆಯಲ್ಲೂ ಮೋಸ ಮಾಡುತ್ತಲೇ ಬಂದಿರುವ ವೀರಭದ್ರಯ್ಯನ ಕುತಂತ್ರ ಹಾಗೂ ಮೋಸದ ಮುಖವಾಡವನ್ನು ಪಾರ್ವತಿ ಬಿಚ್ಚಿಟ್ಟಿದ್ದಾಳೆ.

36

ವೀರಭದ್ರಯ್ಯನನ್ನ ದೇವರೆಂದು ನಂಬಿಕೊಂಡಿರುವ ಶಿವು ತನ್ನ ಹೆಂಡತಿ ಪಾರ್ವತಿಗೆ ನೀನ್ಯಾಕೆ ಮಾವನ ಬಗ್ಗೆ ಅಷ್ಟೊಂದು ಕೆಟ್ಟದಾಗಿ ಮಾತನಾಡುತ್ತೀಯ ಎಂದು ಕೇಳಿದ್ದಾನೆ. ಮಾವ ನಿಂಗೆ ಅಂಥಹ ದ್ರೋವನ್ನಾದರೂ ಏನು ಮಾಡಿದ್ದಾರೆ ನಿನಗೆ? ಎಂದು ಸಿಟ್ಟಿನಿಂದಲೇ ಪ್ರಶ್ನೆ ಮಾಡಿದ್ದಾನೆ.

46

ನಿನ್ನ ಮುಂದೆ ಹರಸುವ ದೇವರಂತೆ ನಿಂತುಕೊಳ್ಳುವ ನಮ್ಮ ಅಪ್ಪ, ನಿನ್ನ ಹಿಂದೆ ನಿನ್ನನ್ನ ಹರಕೆ ಕುರಿಯಂತೆ ಬಳಸಿಕೊಳ್ಳುತ್ತಿದ್ದಾರೆ. ಇದೀಗ ನಿಮ್ಮ ತಂಗಿ ಜೀವನಕ್ಕೂ ಕೈ ಹಾಕೋದಕ್ಕೂ ಬಂದರು. ಆದರೆ, ಅವರ ಮನೆಗೆ ಸೊಸೆಯಾಗಿ ಹೋಗಿರುವುದು ನಮ್ಮ ರತ್ನ. ಪ್ರತೀ ಕ್ಷಣ ಕ್ಷಣಕ್ಕೂ ಕಾಟ ಕೊಡುತ್ತಾ ಬರ್ತಿದ್ದಾರೆ ನಮ್ಮಪ್ಪ ಎಂದು ಪಾರು ಹೇಳಿದ್ದಾರೆ.

56

ಇದರಿಂದ ಕೋಪಗೊಂಡ ಶಿವು ಅಲ್ಲಿಂದ ಸೀದಾ ಮಾವನ ಮನೆಗೆ ಹೋಗಿ ತಂಗಿ ರತ್ನಾಳನ್ನು ವಿಚಾರಿಸೋದಕ್ಕೆ ಹೋಗುತ್ತಾರೆ. ತಂಗಿಗೆ ಮಾವನ ಮನೆಯಲ್ಲಾಗುತ್ತಿರುವ ಹಿಂಸೆಗೆ ಸಿಡಿದೆದ್ದು ತಕ್ಕ ಶಾಸ್ತಿ ಮಾಡ್ತಾನಾ ಅಣ್ಣಯ್ಯ ಎಂಬುದನ್ನು ಕಾದು ನೋಡಬೇಕಿದೆ.

66

ಇನ್ನು ಧಾರಾವಾಹಿ ಪ್ರೊಮೋ ನೋಡಿದ ವೀಕ್ಷಕರು, ಇದನ್ನು ಶಿವಣ್ಣ ನಂಬೋದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. 

ಇನ್ನೊಬ್ಬರು 'ಈಗ ಶಿವಣ್ಣನ ಅಸಲಿ ಆಟ ಶುರುವಾಗುತ್ತದೆ' ಎಂದಿದ್ದಾರೆ.

ಮತ್ತೊಬ್ಬರು, ಶಿವು ಹೋಗಿ ತಂಗಿಯನ್ನು ವಿಚಾರಿಸಿದಾಗ 'ತಂಗಿ ನಾನು ಚೆನ್ನಾಗಿದ್ದೀನಿ ಎಂದು ಹೇಳುತ್ತಾಳೆ. ಅಷ್ಟೇ... ಮಾವನ ಕ್ಷಮೆ ಕೇಳಿ ಬರುತ್ತಾನೆ' ಎಂದು ಕಾಮೆಂಟ್ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories