ವರುಣ್ ಆರಾಧ್ಯ ಅಕ್ಕ-ಅಮ್ಮನಿಗೂ ಬ್ಯಾಡ್ ಕಮೆಂಟ್ಸ್; ಟ್ರೋಲರ್‌ಗಳ ಕಾಟಕ್ಕೆ ಕಣ್ಣೀರು ಹಾಕಿದ ನಟ!

Published : Jul 20, 2026, 12:08 PM IST

'ಬೃಂದಾವನ' ಧಾರಾವಾಹಿ ನಟ ವರುಣ್ ಆರಾಧ್ಯ, ತಮ್ಮ ಕುಟುಂಬದವರ ಮೇಲಿನ ಕೆಟ್ಟ ಕಾಮೆಂಟ್‌ಗಳಿಂದ ಬೇಸರಗೊಂಡು ಕಣ್ಣೀರಿಟ್ಟಿದ್ದಾರೆ. ತಮ್ಮ ಬ್ರೇಕಪ್ ನಂತರದ ಟ್ರೋಲ್‌ಗಳ ನೋವನ್ನು ಹಂಚಿಕೊಂಡಿರುವ ಅವರು, 'ಬೃಂದಾವನ' ಸೀರಿಯಲ್ ಆಫರ್ ತಮ್ಮ ವೃತ್ತಿಜೀವನಕ್ಕೆ ಹೇಗೆ ತಿರುವಿನ ಬಗ್ಗೆ ವಿವರಿಸಿದ್ದಾರೆ.

PREV
16

ಬೃಂದಾವನ ಧಾರಾವಾಹಿ ನಟ ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ (Social Media Influencer) ವರುಣ್ ಆರಾಧ್ಯ (Varun Aradhya) ನೆಟ್ಟಿಗರು ಮಾಡುತ್ತಿರುವ ಕೆಟ್ಟ ಕಾಮೆಂಟ್‌ಗಳಿಂದ ರೋಸಿ ಹೋಗಿದ್ದಾರೆ. ವರುಣ್‌ನ ನಟನೆ ಮತ್ತು ರೀಲ್ಸ್‌ ಬಗ್ಗೆ ನೇರವಾಗಿ ಕಾಮೆಂಟ್ ಮಾಡಿದರೆ ಸಮಸ್ಯೆಯೇನಿಲ್ಲ, ಆದರೆ ಅಕ್ಕ ಮತ್ತು ಅಮ್ಮನಿಗೆ ಕೆಟ್ಟದಾಗಿ ಕಾಮೆಂಟ್ ಮಾಡುವುದಕ್ಕೆ ಬೇಸರ ಮಾಡಿಕೊಂಡಿದ್ದಾಗಿ ಅಳಲು ತೋಡಿಕೊಂಡಿದ್ದಾರೆ.

26

'ಬೃಂದಾವನ' (Brindavana) ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ವರುಣ್, ನಟನಾಗಿ ಗುರುತಿಸಿಕೊಳ್ಳುವ ಮೊದಲೇ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಜೀವನದ ಅತ್ಯಂತ ಕಷ್ಟದ ದಿನಗಳನ್ನು ನೆನೆದು ವರುಣ್ ಭಾವುಕರಾಗಿದ್ದಾರೆ. ಜೊತೆಗೆ, ತಮ್ಮ ಕುಟುಂಬ ಸದಸ್ಯರಿಗೆ ಬರುತ್ತಿರುವ ಕೆಟ್ಟ ಕಾಮೆಂಟ್‌ಗಳನ್ನು ಮಾಡುವವರ ವಿರುದ್ಧ ಕೆಂಡ ಕಾರಿದ್ದಾರೆ.

36

ವರುಣ್ ಆರಾಧ್ಯ ಹಾಗೂ ವರ್ಷ ಕಾವೇರಿ (Varsha Kaveri) ಜೋಡಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗವೇ ಇತ್ತು. ಆದರೆ, ಇವರಿಬ್ಬರ ಬ್ರೇಕಪ್ (Breakup) ಸುದ್ದಿಯಾದ ನಂತರ ವರುಣ್ ವಿರುದ್ಧ ಸರಣಿ ಟ್ರೋಲ್‌ಗಳು ಮತ್ತು ನೆಗೆಟಿವ್ ಕಾಮೆಂಟ್‌ಗಳು (Negative Comments) ಹರಿದುಬಂದಿದ್ದವು. ಈ ಬಗ್ಗೆ ಮಾತನಾಡಿರುವ ಅವರು, 'ನನ್ನ ಮೇಲೆ ಕಾಮೆಂಟ್ ಮಾಡಿದರೆ ನಾನು ಸಹಿಸಿಕೊಳ್ಳುತ್ತೇನೆ, ಆದರೆ ನನ್ನ ಅಮ್ಮ, ಅಕ್ಕ ಮತ್ತು ಅವರ ಪುಟ್ಟ ಮಗಳನ್ನು ಜನರು ಟ್ರೋಲ್ ಮಾಡಿದಾಗ ನನಗೆ ತೀವ್ರ ನೋವಾಯಿತು' ಎಂದು ಕಣ್ಣೀರಿಟ್ಟಿದ್ದಾರೆ.

46

'ನಾನೇನಾದರೂ ತಪ್ಪು ಮಾಡಿದ್ದರೆ ನನಗೆ ಬೈಯಲಿ, ಅದನ್ನು ನಾನು ಸ್ವೀಕರಿಸುತ್ತೇನೆ. ಆದರೆ ಇದರಲ್ಲಿ ನನ್ನ ಕುಟುಂಬದವರ ತಪ್ಪು ಏನಿತ್ತು? ಜನ ಯಾಕೆ ಇಷ್ಟೊಂದು ಇನ್ವಾಲ್ವ್ ಆಗಿ ಕಾಮೆಂಟ್ ಮಾಡುತ್ತಾರೆ ಎಂದು ಅನಿಸಿತು. ನನ್ನಿಂದಾಗಿ ನನ್ನ ಕುಟುಂಬಕ್ಕೆ ಅವಮಾನ ಆಗುತ್ತಿದೆ ಎಂದು ತಿಳಿದಾಗ ಅವರಿಗೆ ಹೋಗಿ ಸಾರಿ (Sorry) ಕೇಳಿದ್ದೆ' ಎಂದು ವರುಣ್ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

56

'ಬೃಂದಾವನ' ಆಫರ್ ಬಂದಿದ್ದು ಹೇಗೆ?:

ವರುಣ್ ಆರಾಧ್ಯ ಅವರಿಗೆ 'ಬೃಂದಾವನ' ಸೀರಿಯಲ್ ಆಫರ್ ಬಂದ ಕಥೆಯೇ ಒಂದು ವಿಚಿತ್ರ ಅನುಭವ. ರೀಲ್ಸ್ ಮತ್ತು ಡಬ್ಬಿಂಗ್ ಮಾಡುತ್ತಿದ್ದ ಅವರಿಗೆ ಒಂದು ದಿನ ಮಧ್ಯರಾತ್ರಿ 1 ಗಂಟೆಗೆ (Midnight 1 AM) ಪ್ರಸಿದ್ಧ ನಿರ್ದೇಶಕ ರಾಮ್‌ಜಿ ಅವರ ಪ್ರೊಡಕ್ಷನ್‌ನಿಂದ ಕರೆ ಬಂದಿತ್ತು. 'ಅಷ್ಟು ರಾತ್ರಿಯಲ್ಲಿ ಯಾರೋ ಕಾಲ್ ಮಾಡಿ ನಟಿಸುವ ಅವಕಾಶ ಇದೆ ಅಂದಾಗ, ಅದು ಪ್ರ್ಯಾಂಕ್ (Prank) ಅಥವಾ ಫೇಕ್ ಇರಬಹುದು ಎಂದು ಅಂದುಕೊಂಡಿದ್ದೆ. ಆದರೆ ಅದು ನಿಜವಾದ ಆಫರ್ ಆಗಿತ್ತು' ಎಂದಿದ್ದಾರೆ.

66

ತಕ್ಷಣವೇ ಆಡಿಷನ್‌ಗೆ (Audition) ಹೋದ ವರುಣ್, ಅಲ್ಲಿ ನೀಡಲಾದ ಸ್ಕ್ರಿಪ್ಟ್ (Script) ಓದಿ ನಟಿಸಿ ತೋರಿಸಿದರು. ಅವರ ನಟನೆಯನ್ನು ಮೆಚ್ಚಿದ ತಂಡ ತಕ್ಷಣವೇ ಅವರನ್ನು ಸರಣಿಗೆ ಆಯ್ಕೆ ಮಾಡಿಕೊಂಡಿತು. ದುರದೃಷ್ಟವಶಾತ್ ಈ ಧಾರಾವಾಹಿ ಕೆಲವೇ ತಿಂಗಳುಗಳಲ್ಲಿ ಅಂತ್ಯವಾಯಿತಾದರೂ, ವರುಣ್ ಅವರಿಗೆ ಇದು ದೊಡ್ಡ ಮಟ್ಟದ ಬ್ರೇಕ್ ನೀಡಿತ್ತು. ಸದ್ಯ ಟ್ರೋಲ್‌ಗಳ ಸಂಕಷ್ಟದಿಂದ ಹೊರಬಂದಿರುವ ವರುಣ್ ಆರಾಧ್ಯ, ತಮ್ಮ ಕರಿಯರ್ (Career) ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಅವರು, ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories