Amruthadhaare Serial: ಅಯ್ಯೋ.. ಗೌತಮ್‌ ನಿಜವಾದ ಮಗಳಿಗೆ ಇಂಥ ದುಸ್ಥಿತಿ ಬಂತಾ? ಎಷ್ಟು ಕಷ್ಟ ಕೊಡ್ತೀರಾ ನಿರ್ದೇಶಕರೇ?

Published : Oct 09, 2025, 09:16 PM IST

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ಗೆ ಮಗಳು ಸಿಕ್ಕಿದ್ದಾಳೆ. ತನ್ನ ಜೊತೆಗೆ ಇರೋದು ನನ್ನ ಮಗಳು ಅಂತ ಅವನಿಗೆ ಗೊತ್ತಾಗಿಲ್ಲ, ಆದರೆ ಅವನು ಸ್ವಂತ ಮಗಳು ಎಲ್ಲಿದ್ದಾಳೆ ಎಂದು ಹುಡುಕುತ್ತಿದ್ದಾನೆ. ಈ ಮಧ್ಯೆ ವೀಕ್ಷಕರಿಗೆ ಅತಿಯಾದ ಬೇಸರದ ವಿಷಯವೊಂದಿದೆ. 

PREV
15
ಮಗು ಬಿಟ್ಟು ಹೋದರು

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ಗೆ ಒಂದು ಬಾಲಕಿ ಸಿಕ್ಕಿದ್ದಾಳೆ. ಏರ್‌ಪೋರ್ಟ್‌ಗೆ ಒಂದು ದಂಪತಿಯನ್ನು ಡ್ರಾಪ್‌ ಮಾಡಿದ್ದನು. ಆಗ ಅವರು ಮನೆಯಲ್ಲಿ ಮಗುವನ್ನು ಬಿಟ್ಟು ಹೋಗಿದ್ದರು. ತನ್ನ ಕ್ಯಾಬ್‌ನಲ್ಲಿ ಅವರು ಬ್ಯಾಗ್‌ ಬಿಟ್ಟು ಹೋಗಿದ್ದರು ಅಂತ ಅವನು ಆ ಮನೆಗೆ ಹೋಗಿದ್ದನು. ಆಗ ಆ ಮಗು ಅಳುತ್ತಿತ್ತು.

25
ಅನಾಥಾಶ್ರಮಕ್ಕೆ ಬಿಡಬೇಕಿತ್ತು

ಆ ಮಗುವನ್ನು ಅವನು ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಪೊಲೀಸರು ಒಂದಿಷ್ಟು ತನಿಖೆ ಮಾಡಿ, ದೂರು ದಾಖಲಿಕೊಂಡಿದ್ದಾರೆ. ಆದಷ್ಟು ಬೇಗ ಅವರು ಆ ಮಗುವಿನ ಪಾಲಕರನ್ನು ಹುಡುಕಿಕೊಡೋದಾಗಿ ಹೇಳಿದ್ದಾರೆ. ಹೀಗಾಗಿ ಆ ಮಗುವನ್ನು ಅನಾಥಾಶ್ರಮಕ್ಕೆ ಬಿಡುವಂತೆ ಹೇಳಲಾಗಿತ್ತು.

35
ಗೌತಮ್‌ ಜೊತೆ ಬಾಲಕಿ

ಅನಾಥಾಶ್ರಮಕ್ಕೆ ಹೋಗಿ ಆ ಮಗುವನ್ನು ಬಿಡಬೇಕು ಅಂತ ಗೌತಮ್‌ ಅಂದುಕೊಂಡಿದ್ದನು. ಆದರೆ ಆ ಮಗು ಅನಾಥಾಶ್ರಮದಲ್ಲಿ ಇರಲು ಒಪ್ಪಲೇ ಇಲ್ಲ. ಯಾರ ಜೊತೆಯೂ ಹೋಗದ ಆ ಮಗು ಗೌತಮ್‌ ಜೊತೆ ಇರಲು ಬಯಸಿತ್ತು. ಅನಾಥಾಶ್ರಮದಲ್ಲೂ ಕೂಡ ಆ ಮಗು ಅವನ ಜೊತೆ ಇರಲಿ ಎಂದು ಹೇಳಿದ್ದರು.

45
ಮಾತನಾಡದ ಹುಡುಗಿ

ತನಗೆ ಅಟ್ಯಾಚ್‌ ಆಗಿದೆ ಎಂದು ಗೌತಮ್‌ ಬೇರೆ ದಾರಿಯಿಲ್ಲದೆ ತನ್ನ ಮನೆಗೆ ಮಗುವನ್ನು ಕರೆದುಕೊಂಡು ಬಂದಿದ್ದನು. ಆದರೆ ಅವಳು ಮಾತನಾಡುತ್ತಲೇ ಇಲ್ಲ. ಎಲ್ಲದಕ್ಕೂ ಅವಳು ಸನ್ನೆಯಿಂದ ಉತ್ತರ ಕೊಡುತ್ತಿದ್ದಾಳೆ. ಇದು ವೀಕ್ಷಕರಿಗೆ ಬೇಸರ ತಂದಿದೆ.

55
ವೀಕ್ಷಕರಿಗೆ ಬೇಸರ

ದಯವಿಟ್ಟು ಈ ಮಗುವನ್ನು ಮೂಗಿ ಮಾಡಬೇಡಿ, ಈ ಮಗು ಮೂಗಿ ಆದರೆ ನೋಡಲು ಕಷ್ಟ ಆಗುತ್ತದೆ. ಮಾತಿನ ಮಲ್ಲ ಗೌತಮ್‌ಗೆ ಮೂಗಿ ಮಗಳು ಅಂದರೆ ಬೇಸರ ಆಗುತ್ತದೆ, ಹೇಗಿದ್ದರೂ ಅಪ್ಪ-ಮಗಳು ಇವರೇ ಎನ್ನೋ ಸತ್ಯ ಯಾರಿಗೂ ಗೊತ್ತಿಲ್ಲ, ಅದರಲ್ಲೂ ಮಾತು ಕಸಿದುಕೊಂಡು ಹೀಗೆ ಮಾಡಬೇಡಿ ಎಂದು ವೀಕ್ಷಕರು ಬೇಸರಮಾಡಿಕೊಳ್ಳುತ್ತಿದ್ದಾರೆ.

Read more Photos on
click me!

Recommended Stories