Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಐದು ವರ್ಷದ ಬಳಿಕ ಗೌತಮ್‌ಗೆ ಕೊನೆಗೂ ಮಗಳು ಕಾಣಿಸಿದ್ದಾಳೆ. ಅಪ್ಪ-ಮಗಳು ಒಂದಾಗಬೇಕು ಎಂದು ವೀಕ್ಷಕರು ಆಸೆಪಟ್ಟಿದ್ದರು. ಆದರೆ ಇಲ್ಲಿ ಬೇರೆ ಥರ ಆಗೋ ಹಾಗೆ ಕಾಣ್ತಿದೆ. 

ಖಾಸಗಿ ವಾಹಿನಿಯಲ್ಲಿ ಅಮೃತಧಾರೆ ಧಾರಾವಾಹಿ ( Amruthadhaare Serial ) ಪ್ರಸಾರ ಆಗ್ತಿದೆ. ಈ ಸೀರಿಯಲ್‌ನಲ್ಲಿ ಕಳೆದು ಐದು ವರ್ಷಗಳಿಂದ ಮಲ ಸಹೋದರ, ಕುತಂತ್ರಿ ಶಕುಂತಲಾಳ ಮಗ ಜಯದೇವ್‌ ಅಂದು ಕದ್ದು, ಕಾಡಿನಲ್ಲಿ ಬಿಸಾಕಿದ ಗೌತಮ್‌ ಮಗಳು ಏನಾದಳು ಎನ್ನೋದು ಗೊತ್ತೇ ಆಗಿರಲಿಲ್ಲ. ಆಗ ತಾನೇ ಗೌತಮ್‌ ಪತ್ನಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟರೆ, ಅದನ್ನು ಜಯದೇವ್‌ ಕ್ಷಣಾರ್ಧದಲ್ಲಿ ಕದ್ದೊಯ್ದಿದ್ದನು. ಈಗ ಗೌತಮ್‌ಗೆ ಮಗಳು ಸಿಕ್ಕಿದ್ದಾಳೆ, ವಾಹಿನಿಯು ಹೊಸ ಪ್ರೋಮೋವನ್ನು ರಿವೀಲ್‌ ಮಾಡಿದ್ದು, ಮುಂದೆ ಏನಾಗಬಹುದು ಎಂದು ವೀಕ್ಷಕರು ಕಾತುರದಿಂದಿದ್ದಾರೆ.

ಮಗಳು ಸಿಕ್ಕಿದಳಾ?

ಗೌತಮ್‌ ಈಗ ಕ್ಯಾಬ್‌ ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದಾನೆ. ಹೀಗಾಗಿ ಅವನು ಓರ್ವ ದಂಪತಿಯನ್ನು ಕ್ಯಾಬ್‌ನಲ್ಲಿ ಬೆಂಗಳೂರು ಏರ್‌ಪೋರ್ಟ್‌ಗೆ ಡ್ರಾಪ್‌ ಮಾಡಿದ್ದಾನೆ. ಆಗ ಅವನ ಕಾರ್‌ನಲ್ಲಿ ಆ ಮಹಿಳೆ ಒಂದು ಬ್ಯಾಗ್‌ ಬಿಟ್ಟು ಹೋಗಿದ್ದರು. ಬ್ಯಾಗ್‌ನ್ನು ಅವರ ಮನೆಯವರಿಗೆ ಕೊಡೋಣ ಎಂದು ಅವನು ಮನೆಗೆ ಹೋಗ್ತಾನೆ, ಅಲ್ಲಿ ಆ ದಂಪತಿ ಮಗಳು ಏಕಾಂಗಿಯಾಗಿ ಅಳುತ್ತಿರುತ್ತಾಳೆ, ಹೊರಗಡೆ ಜನರು ನಿಂತು ನೋಡುತ್ತಿರುತ್ತಾರೆ.

ಆ ದಂಪತಿಗೆ ಮಗು ಇರೋದಿಲ್ಲ, ಆ ಟೈಮ್‌ನಲ್ಲಿ ಮಗಳು ಸಿಕ್ಕಿರುತ್ತಾಳೆ. ಆಮೇಲೆ ಅವರಿಗೆ ಮಗು ಆಗುವುದು. ವಿದೇಶದಲ್ಲಿ ಸೆಟಲ್‌ ಆಗಬೇಕು ಅಂತ ಆ ಜೋಡಿ ಆ ಹೆಣ್ಣು ಮಗುವನ್ನು ಮನೆಯಲ್ಲಿ ಬಿಟ್ಟು ಹೋಗಿತ್ತು. ಅದು ಯಾರಿಗೂ ಗೊತ್ತಿರಲಿಲ್ಲ. ಮಿಸ್‌ ಆಗಿ ಮಗಳನ್ನು ಬಿಟ್ಟು ಹೋಗಿರಬಹುದು ಎಂದು ಗೌತಮ್‌ ಭಾವಿಸಿದ್ದನು. ಯಾರೂ ಕೂಡ ಮಗುವನ್ನು ನೋಡಿಕೊಳ್ಳಲು ಮುಂದೆ ಬರೋದಿಲ್ಲ. ಆಗ ಅವನು ಪೊಲೀಸ್‌ ಠಾಣೆಗೆ ಹೋಗುತ್ತಾನೆ. ಅಲ್ಲಿ ಕಾನ್‌ಸ್ಟೇಬಲ್‌, ಗೌತಮ್‌ ಬಳಿ ಎಲ್ಲ ಕಥೆ ಕೇಳಿ ಕೂಡ, “ನೀನೆ ಆ ಮಗುವನ್ನು ಕಿಡ್ನ್ಯಾಪ್‌ ಮಾಡಿದ್ದೀಯಾ?” ಎಂದು ಹೇಳುತ್ತಾನೆ. ಗೌತಮ್‌ ಮಾತನ್ನು ಅವನು ಕೇಳೋಕೆ ರೆಡಿ ಇರೋದಿಲ್ಲ. ಆ ಮಗುವನ್ನು ಪೊಲೀಸರು ಅವನ ಜೊತೆ ಕಳಿಸಿಕೊಟ್ಟರೂ ಕೂಡ ಆಶ್ಚರ್ಯವಿಲ್ಲ.

ಗೌತಮ್‌ ಜೊತೆ ಆ ಮಗು ಇರತ್ತಾ?

ಮುಂದೆ ಗೌತಮ್‌ ಆ ಮಗುವನ್ನು ತನ್ನ ಮಗಳು ಎಂದು ಸಾಕಿ ಬೆಳೆಸಬಹುದು. ಒಂದಲ್ಲ ಒಂದು ದಿನ ಅವಳ ತಂದೆ-ತಾಯಿ ಬಂದಾಗ ಸೇಫ್‌ ಆಗಿ ಆ ಮಗುವನ್ನು ಕೊಟ್ಟರಾಯ್ತು ಎಂದುಕೊಳ್ಳಲೂಬಹುದು. ಈಗ ಮಗಳ ಹುಡುಕಾಟದಲ್ಲಿರುವ ಗೌತಮ್‌ಗೆ ತನ್ನ ಜೊತೆಗೆ ಇರುವವಳು ತನ್ನ ಮಗಳು ಅಂತ ಗೊತ್ತಾಗಲೂಬಹುದು.

ಭೂಮಿಕಾ ಗೆಳತಿ ಆಗಿದ್ದ ಟೀಚರ್ ಕಾವೇರಿ ಕೂಡ ಒಂದು ಹೆಣ್ಣು ಮಗುವನ್ನು ದತ್ತು ತಗೊಂಡಿದ್ದಳು. ಇಷ್ಟುದಿನಗಳಿಂದ ಕಾವೇರಿಯ ಮಗಳೇ ಭೂಮಿಯ ನಿಜವಾದ ಮಗಳು ಎನ್ನೋ ಥರ ತೋರಿಸುತ್ತಿದ್ದರು. ಯಾರು ಗೌತಮ್-ಭೂಮಿಕಾ ನಿಜವಾದ ಮಗಳು ಎಂಬ ಸಂದೇಜ ಬಂದಿದೆ.

ಪಾತ್ರಧಾರಿಗಳು

ಗೌತಮ್‌ ಪಾತ್ರದಲ್ಲಿ ರಾಜೇಶ್‌ ನಟರಂಗ, ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್‌ ನಟಿಸುತ್ತಿದ್ದಾರೆ.