Amruthadhaare ಭೂಮಿಕಾಗೆ ಉಪ್ಪಿ ಕಡೆಯಿಂದ ಸಿಕ್ಕಿತು ಗ್ರೀನ್​ ಸಿಗ್ನಲ್! ದಶಕಗಳ ಕನಸು ನನಸು- ಕುಣಿದಾಡಿದ ನಟಿ

Published : Oct 20, 2025, 01:58 PM IST

'ಅಮೃತಧಾರೆ' ಖ್ಯಾತಿಯ ನಟಿ ಛಾಯಾ ಸಿಂಗ್ ಅವರಿಗೆ ಉಪೇಂದ್ರ ನಿರ್ದೇಶನದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡುವ ಬಹುದೊಡ್ಡ ಕನಸಿದೆ. ಜೀ ಕುಟುಂಬ ಅವಾರ್ಡ್ಸ್ ವೇದಿಕೆಯಲ್ಲಿ ಉಪೇಂದ್ರ ಅವರ ಬಳಿ ಈ ಬೇಡಿಕೆ ಇಟ್ಟಿದ್ದು, ಅವರ ಕನಸನ್ನು ಈಡೇರಿಸುವುದಾಗಿ ಉಪ್ಪಿ ಭರವಸೆ ನೀಡಿದ್ದಾರೆ.

PREV
18
ಬೆಸ್ಟ್​ ನಟಿ ಅವಾರ್ಡ್​

ಅಮೃತಧಾರೆ (Amruthadhaare) ಭೂಮಿಕಾ ಅರ್ಥಾತ್​ ನಟಿ ಛಾಯಾ ಸಿಂಗ್​ ಅವರ ನಟನೆಗೆ ಮನ ಸೋಲದವರೇ ಇಲ್ಲವೇನೋ. ಇದೇ ಕಾರಣಕ್ಕೆ ಇವರು ಇತ್ತ ಅಮೃತಧಾರೆಯಲ್ಲಿಯೂ ಬೆಸ್ಟ್​ ನಟಿ ಅವಾರ್ಡ್​ ಪಡೆದುಕೊಂಡಿದ್ದರೆ, ಕನ್ನಡದ ಲಕ್ಷ್ಮೀ ನಿವಾಸ ರೀಮೇಕ್​ ಆಗಿರೋ ತಮಿಳಿನ ಗಟ್ಟಿಮೇಳಂ ಸೀರಿಯಲ್​ನಲ್ಲಿಯೂ ಬೆಸ್ಟ್​ ನಟಿ ಅವಾರ್ಡ್​ ಪಡೆದುಕೊಂಡಿದ್ದಾರೆ.

28
ನಟನೆಯಲ್ಲಿ ಎತ್ತಿದ ಕೈ

ಸನ್ನಿವೇಶ ಏನೇ ಇರಲಿ, ಅದಕ್ಕೆ ತಕ್ಕಂತೆ ನಟನೆ ಮಾಡುವಲ್ಲಿ ನಟಿಯದ್ದು ಎತ್ತಿದ ಕೈ. ಇದೀಗ ನಟಿ ಛಾಯಾ ಸಿಂಗ್​ ಅವರ ಬಹಳ ವರ್ಷಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಜೀ ಕುಟುಂಬ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಉಪೇಂದ್ರ ಅವರು ಛಾಯಾ ಸಿಂಗ್​ ಅವರ ಬಹಳ ವರ್ಷಗಳ ಕೋರಿಕೆಯೊಂದನ್ನು ಈಡೇರಿಸಲು ಪ್ರಾಮಿಸ್​ ಮಾಡಿದ್ದಾರೆ.

38
25 ವರ್ಷಗಳ ಹಿಂದೆನೇ ಸಿನಿಮಾ

ಅಂದಹಾಗೆ, ನಟಿ ಛಾಯಾ ಅವರು ತಮ್ಮನ್ನು ನಟಿ ಮಾಡಿ ಎಂದು ಕೇಳಿಕೊಂಡಿಲ್ಲ. ಏಕೆಂದರೆ, ಇದಾಗಲೇ ಅವರು ಸ್ಯಾಂಡಲ್​ವುಡ್​ ಸೇರಿದಂತೆ ವಿವಿಧ ಭಾಷೆಗಳಲ್ಲಿ ಚಿರಪರಿಚಿತರು. 2000ನೇ ಇಸವಿಯಲ್ಲಿ ತೆರೆಕಂಡ ಪಿ ಶೇಷಾದ್ರಿ ನಿರ್ದೇಶನದ `ಮುನ್ನಡಿ' ಚಿತ್ರದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಇವರು ನಟಿಸಿದ ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಬಳಿಕ ರಾಷ್ಟ್ರಗೀತೆ, ಚಿಟ್ಟೆ, ಗುಟ್ಟು ಸಿನಿಮಾಗಳಲ್ಲಿ ನಟಿಸಿದರು. ನಂತರ ಅನಿರುದ್ಧ್ ನಟನೆಯ 'ತುಂಟಾಟ' ಸಿನಿಮಾದಲ್ಲಿ ಅಭಿನಯಿಸಿದರು. ಈ ಸಿನಿಮಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು.

48
ಕಾಲಿವುಡ್​ನಲ್ಲೂ ನಟನೆ

ತುಂಟಾಟ ಸಿನಿಮಾ ಬಳಿಕ ಕಾಲಿವುಡ್‌ಗೆ ಎಂಟ್ರಿಕೊಟ್ಟ ಛಾಯಾ, ಧನುಷ್ ಜೊತೆ 'ತಿರುಡಾ ತಿರುಡಿ' ಚಿತ್ರದಲ್ಲಿ ನಟಿಸಿದರು. ಈ ಸಿನಿಮಾ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತು. ನಂತರ ಮಲಯಾಳಂ ಸಿನಿರಂಗಕ್ಕೂ ಕಾಲಿಟ್ಟರು. ಹೀಗೆ ನಟನೆಯಲ್ಲಿ ಮುಂದುವರೆದ ಛಾಯಾ ಸಿಂಗ್, ಬಂಗಾಳಿ, ಬೋಜಪುರಿ, ತೆಲುಗು ಮತ್ತು ಓರಿಯಾ ಚಿತ್ರಗಳಲ್ಲೂ ನಟಿಸಿದ್ದಾರೆ. ಜೊತೆಗೆ ಬಂಗಾಳಿ ಭಾಷೆಯಲ್ಲಿ 'ಕಿ ಕೋರ್ ಬೋಝಭೋ ತೊಮಾಕೆ' ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಛಾಯಾ ಕೇವಲ ನಟಿಯಷ್ಟೇ ಅಲ್ಲ, ಅದ್ಭುತ ಡ್ಯಾನ್ಸರ್ ಕೂಡ ಆಗಿದ್ದಾರೆ. ಅವರ ನೃತ್ಯಗಳು ಸಿಕ್ಕಾಪಟ್ಟೆ ಫೇಮಸ್ ಆಗಿವೆ.

58
ಸಹಾಯಕ ನಿರ್ದೇಶಕಿ

ಆದರೆ ಅವರ ಬಹಳ ವರ್ಷಗಳ ಕನಸು ಎಂದರೆ ಉಪೇಂದ್ರ ಅಥವಾ ಶಿವರಾಜ್​ ಕುಮಾರ್​ ಅವರ ನಿರ್ದೇಶನದ ಚಿತ್ರದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡುವುದು. ಕಾರ್ಯಕ್ರಮಕ್ಕೆ ಹಾಜರು ಇದ್ದ ಶಿವರಾಜ್​ ಕುಮಾರ್​ ಅವರನ್ನು ಉದ್ದೇಶಿಸಿ ನಟಿ, ಶಿವಣ್ಣ ಅವರಿಗೆ ಯಾವತ್ತೂ ಹೇಳ್ತೇನೆ, ಡೈರೆಕ್ಷನ್​ ಮಾಡಿ ಅಂತ ಎಂದಿದ್ದಾರೆ.

68
ಉಪೇಂದ್ರ ಅವರಿಗೆ ರಿಕ್ವೆಸ್ಟ್​

ಇದೇ ವೇಳೆ ಉಪೇಂದ್ರ ಅವರನ್ನು ಉದ್ದೇಶಿಸಿ, ನಿಮ್ಮ ಡೈರೆಕ್ಷನ್​ನಲ್ಲಿ ನನಗೆ ಅಸಿಸ್ಟೆಂಟ್​ ಡೈರೆಕ್ಟರ್​ ಆಗಿ ಪ್ಲೀಸ್​ ತಗೊಳ್ಳಿ. ನಿಮ್ಮಿಂದ ಕಲಿಯೋದು ತುಂಬಾ ಇದೆ ಎಂದಿದ್ದಾರೆ. ಇವರಿಬ್ಬರೂ ಸಿನಿಮಾದ ವಿಶ್ವವಿದ್ಯಾಲಯವಿದ್ದಂತೆ. ಆದರೆ ಅಂದು ಇದೇ ಕೋರಿಕೆ ಇಟ್ಟಾಗ ಪ್ರಿಯಾಂಕಾ ಮೇಡಂ ಬೇಡ ಅಂದುಬಿಟ್ರು. ಅವರನ್ನು ಭೇಟಿಯಾದಾಗ ಕ್ಷಮೆ ಕೇಳ್ತೀನಿ. ಆದರೆ ಮತ್ತೊಮ್ಮೆ ನಿಮ್ಮನ್ನು ರಿಕ್ವೆಸ್ಟ್​ ಮಾಡಿಕೊಳ್ತಿದ್ದೇನೆ. ನೀವು ಡೈರೆಕ್ಷನ್​ ಮಾಡಿದಾಗ ನನ್ನನ್ನು ಅಸಿಸ್ಟೆಂಟ್​ ಡೈರೆಕ್ಟರ್​ ಆಗಿ ಕರೀರಿ ಸರ್​ ಪ್ಲೀಸ್​. ಲಾಸ್ಟ್​ ಅಸಿಸ್ಟೆಂಟ್​ ಡೈರೆಕ್ಟರ್​ ಆದ್ರೂ ಪರವಾಗಿಲ್ಲ ಸರ್​.

78
ಓಕೆ ಎಂದ ಉಪ್ಪಿ

ಅದಕ್ಕೆ ನಕ್ಕ ಉಪೇಂದ್ರ ಅವರು, ಇವರು ಅಸಿಸ್ಟೆಂಟ್​ ಆದ್ರೆ ಹೀರೋಯಿನ್​ ಏನ್​ ಮಾಡೋದು ಎಂದು ತಮಾಷೆ ಮಾಡಿದ್ದಾರೆ. ಕೊನೆಯಲ್ಲಿ ನಟಿಯ ಕೋರಿಕೆಯನ್ನು ಈಡೇರಿಸುವ ಭರವಸೆ ಕೊಟ್ಟಿದ್ದಾರೆ. ಅದರಿಂದ ನಟಿ ಫುಲ್​ ಖುಷ್​ ಆಗಿದ್ದಾರೆ.

88
ಛಾಯಾ ಸಿಂಗ್​ ದಾಂಪತ್ಯ

ಇನ್ನು ನಟಿ ಛಾಯಾ ಸಿಂಗ್​ ರಿಯಲ್​ ಲೈಫ್​ ಕುರಿತು ಹೇಳುವುದಾದರೆ, ಕೃಷ್ಣ ಅವರ ಜೊತೆ ಮದುವೆಯಾಗಿ 12 ವರ್ಷಗಳು ಕಳೆದಿವೆ. ಇನ್​ಸ್ಟಾಗ್ರಾಮ್​ನಲ್ಲಿ ಅವರು ಪತಿಯ ಜೊತೆ ಆಗಾಗ ಫೋಟೋ ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಅವರಿಗೆ ಕೃಷ್ಣ ಅವರ ಪರಿಚಯವಾದದ್ದು, ತಮಿಳು ಚಿತ್ರದಲ್ಲಿ ನಟಿಸುವ ಸಮಯದಲ್ಲಿ. ಕೃಷ್ಣ ಅವರೂ ಸಿನಿಮಾರಂಗದಲ್ಲೇ ಇದ್ದು, ತಮಿಳು ಕಿರುತೆರೆಯ ಜನಪ್ರಿಯ ನಟ. 2010ರಲ್ಲಿ ತಮಿಳು ನಟ ಕೃಷ್ಣರನ್ನು ಮೊದಲು ಭೇಟಿಯಾಗಿದ್ದರು. 'ಆನಂದಪುರತು ವೀಡ್' (Anandhapurathu Veedu) ಎಂಬ ಸಿನಿಮಾದ ವೇಳೆ ಭೇಟಿಯಾದ ಇವರು ಪರಸ್ಪರ ಇಷ್ಟಪಟ್ಟು ನಂತರ ಹಿರಿಯರ ಒಪ್ಪಿಸಿ, ಅವರ ಆಶೀರ್ವಾದ ಪಡೆದು 2012ರಲ್ಲಿ ಮದುವೆಯಾಗಿದ್ದಾರೆ.

Read more Photos on
click me!

Recommended Stories