Karna Nithya marriage twist: ಕರ್ಣನು ನಿತ್ಯಾಳನ್ನು ಮದುವೆಯಾಗಲು ಒಪ್ಪುತ್ತಾನೆ. ಆದರೆ, ತಾಳಿ ಕಟ್ಟದೆ ಅವಳ ಕೈಗೆ ಕೊಟ್ಟು ಗುಟ್ಟಾಗಿ ಮದುವೆಯಾದಂತೆ ನಟಿಸುತ್ತಾರೆ. ನಂತರ ನಿತ್ಯಾ ಗರ್ಭಿಣಿ ಎಂಬ ಆಘಾತಕಾರಿ ಸತ್ಯ ಕರ್ಣನಿಗೆ ತಿಳಿಯುತ್ತದೆ, ಇದು ಕಥೆಗೆ ಹೊಸ ತಿರುವು ನೀಡುತ್ತದೆ.
ತೇಜಸ್ ಮಂಟಪದಿಂದ ಓಡಿ ಹೋಗಿದ್ದರಿಂದ ಕರ್ಣನಿಗೆ ನಿತ್ಯಾಳನ್ನು ಮದುವೆಯಾಗಲು ಅಜ್ಜಿ ಸೂಚಿಸಿದ್ದಾಳೆ. ಇಬ್ಬರು ಅಜ್ಜಿಯಂದಿರಿಗೆ ಮಾತಿಗೆ ಬೆಲೆ ನೀಡಿರುವ ನಿತ್ಯಾ ಜೊತೆ ಮಾತನಾಡಲು ಕರ್ಣ ಮುಂದಾಗಿದ್ದಾನೆ. ತನ್ನಿಂದಲೇ ಎಲ್ಲಾ ನಡೆದಿರೋದು ಎಂದು ನಿತ್ಯಾಗೆ ಗೊತ್ತಾಗಿದೆ. ಕರ್ಣ ತಾಳಿ ಕಟ್ಟದೇ ನಿತ್ಯಾಳ ಮದುವೆಯಾಗಿದ್ದು, ಮೂರು ಗಂಟಿನ ಸತ್ಯ ನಾಲ್ಕು ಗೋಡೆ ಮಧ್ಯೆಯೇ ಉಳಿದುಕೊಂಡಿದೆ.
26
ಕರ್ಣನ ಭೂಮಿ ತೂಕದ ಮಾತು
ನೀವು ಯಾವತ್ತು ನನ್ನನ್ನು ದೂರಾನೇ ನಿಲ್ಲಿಸಿದ್ದು. ನಿಮ್ಮನ್ನು ಮದುವೆಯಾಗೋದು ಕನಸಲ್ಲೂ ನಿಮಗೆ ಇಷ್ಟವಿಲ್ಲ ಅಂತ ಗೊತ್ತು. ಈ ಸಂದರ್ಭದಲ್ಲಿ ನನ್ನ ಮತ್ತು ನಿಮ್ಮ ಇಷ್ಟ ಯಾವುದು ಮುಖ್ಯವಲ್ಲ. ಇಬ್ಬರು ಅಜ್ಜಿಯ ಜೀವ ಮುಖ್ಯವಾಗಿದೆ. ಇವತ್ತು ಮದುವೆ ನಡೆಯಲಿಲ್ಲ ಅಂದ್ರೆ ಇದಕ್ಕಿಂತ ದೊಡ್ಡ ಅನಾಹುತ ನಡೆಯುತ್ತೆ ಎಂದು ಕರ್ಣ ಹೇಳಿದ್ದಾನೆ.
36
ಸಾವು ಯಾವುದಕ್ಕೂ ಪರಿಹಾರ ಅಲ್ಲ
ಇದೆಲ್ಲಾ ನನ್ನಿಂದಲೇ ನಡೆಯುತ್ತಿದೆ. ಎಲ್ಲರ ಕನಸು ಹಾಳು ಮಾಡಿ ನುಚ್ಚುನೂರು ಮಾಡಿದೆ. ನನ್ನಂಥಳಿಗೆ ಮದುವೆ ಅಲ್ಲ, ಸಾವೇ ಪರಿಹಾರ ಎಂದು ಹೇಳಿ ನಿತ್ಯಾ ಕಣ್ಣೀರು ಹಾಕಿದ್ದಾಳೆ. ಕಣ್ಣೀರು ಹಾಕುತ್ತಿದ್ದ ನಿತ್ಯಾ ಪಕ್ಕ ಕುಳಿತ ಕರ್ಣ, ಸಾವು ಯಾವುದಕ್ಕೂ ಪರಿಹಾರ ಅಲ್ಲ. ನಮ್ಮನ್ನು ನಾವು ದೋಷಿಸಿಕೊಳ್ಳುವ ಸಮಯ ಇದಲ್ಲ. ಬಂದಿರುವ ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳಬೇಕು ಎಂದು ಕರ್ಣ ಹೇಳಿದ್ದಾನೆ. ಈ ಸಮಸ್ಯೆಗೆ ಮದುವೆ ಒಂದೇ ಪರಿಹಾರ ಎಂದು ನಿತ್ಯಾಗೆ ವಾಸ್ತವ ಪರಿಸ್ಥಿತಿಯನ್ನು ಕರ್ಣ ಅರ್ಥ ಮಾಡಿಸಿದ್ದಾನೆ.
ನಿತ್ಯಾಳನ್ನು ಮದುವೆಯಾಗಬೇಕಾ ಅಥವಾ ಬೇಡವಾ ಎಂದು ಕರ್ಣ ಗೊಂದಲದಲ್ಲಿ ಸಿಲುಕಿರೋದನ್ನು ನೋಡಿದ ಅಜ್ಜಿಯರು, ನಾವು ನಿಮಗೆ ತುಂಬಾ ಒತ್ತಾಯ ಮಾಡಿದ್ದೀವಿ ಅಂತ ಅನ್ನಿಸುತ್ತಿದೆಯಾ ಎಂದು ಕೇಳುತ್ತಾರೆ. ಶಾಂತಿ ಅಜ್ಜಿಯೂ ನಮ್ಮ ಒತ್ತಾಯಕ್ಕೆ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಕರ್ಣನಿಗೆ ಹೇಳುತ್ತಾರೆ. ಅಷ್ಟರಲ್ಲಿ ಕೊರಳಲ್ಲಿ ಮಾಂಗಲ್ಯ ಸರ ಹಾಕಿಕೊಂಡು ಅಜ್ಜಿಯಂದಿರ ಮುಂದೆ ನಿತ್ಯಾ ಬರುತ್ತಾಳೆ. ಮೊಮ್ಮಗಳ ಕೊರಳಲ್ಲಿ ಮಾಂಗಲ್ಯ ನೋಡಿ ಅಜ್ಜಿಯರು ಖುಷಿಯಾಗಿದ್ದಾರೆ.
56
ನಿಧಿಗೆ ಗೊತ್ತಾಗುತ್ತಾ ಸತ್ಯ?
ಇಷ್ಟೆಲ್ಲಾ ಒತ್ತಡದ ನಡುವೆಯೂ ತನ್ನ ಪ್ರೀತಿಯನ್ನು ತ್ಯಾಗ ಮಾಡಲು ಕರ್ಣ ಸಿದ್ದನಿಲ್ಲ. ಹಾಗಾಗಿ ನಿತ್ಯಾ ಕೈಗೆ ತಾಳಿ ನೀಡಿದ ಕರ್ಣ ಕಟ್ಟಿಕೊಳ್ಳುವಂತೆ ಹೇಳಿದ್ದಾನೆ. ಮುಂದೊಂದು ದಿನ ಈ ಸತ್ಯ ಎಲ್ಲರಿಗೂ ಗೊತ್ತಾಗಲಿದೆ ಎಂದು ಕರ್ಣ ಹೇಳಿದ್ದಾನೆ. ಸದ್ಯಕ್ಕೆ ಇದೇ ಒಳ್ಳೆಯದು ಎಂದು ನಿತ್ಯ ತಾಳಿ ಕಟ್ಟಿಕೊಂಡು ಎಲ್ಲರ ಮುಂದೆ ಬಂದಿದ್ದಾಳೆ.
ಸಪ್ತಪದಿ ತುಳಿಯುವಾಗ ನಿತ್ಯಾ ಎಡವುತ್ತಾಳೆ. ಆಗ ಕೈ ಹಿಡಿದ ಕರ್ಣನಿಗೆ ನಾಡಿಮಿಡಿತದಲ್ಲಿ ನಿತ್ಯಾ ಗರ್ಭಿಣಿ ಎಂಬ ರಹಸ್ಯ ಗೊತ್ತಾಗಿದೆ. ಸ್ವಲ್ಪ ಸಮಯದ ಹಿಂದೆಯೇ ಪ್ರಪೋಸ್ ಮಾಡಿದ ಪ್ರಿಯಕರ ಅಕ್ಕ ನಿತ್ಯಾಳನ್ನು ಮದುವೆಯಾಗಿರುವ ವಿಷಯ ತಿಳಿದ ನಿಧಿ ಅಕ್ಷರಷಃ ಹುಚ್ಚಿಯಾಗಿದ್ದಾಳೆ. ಸೋದರಿ ನಿಧಿ ಪ್ರೀತಿಸುತ್ತಿರುವ ಹುಡುಗ ಕರ್ಣ ಎಂಬ ವಿಷಯ ನಿತ್ಯಾಗೂ ಗೊತ್ತಿಲ್ಲ.