ಬಿಗ್‌ಬಾಸ್ ಸೀಸನ್ 12ರ ಮನೆಗೆ ಮ್ಯೂಟಂಟ್ ರಘು ಅಬ್ಬರದಿಂದ ಪ್ರವೇಶಿಸಿದ್ದು, ಬಂದ ಮೊದಲ ದಿನವೇ ಸ್ಪರ್ಧಿಗಳ ಮೇಲೆ ನೀರು ಸುರಿದಿದ್ದಾರೆ. ನಂತರ, ಅಶ್ವಿನಿ ಗೌಡ ಅವರನ್ನು ಏಕವಚನದಲ್ಲಿ ಸಂಬೋಧಿಸಿ ವಿವಾದ ಸೃಷ್ಟಿಸಿದ್ದು, ಇದಕ್ಕೆ ಜಾನ್ವಿ ಕೂಡ ಸಾಥ್ ನೀಡಿ ರಘು ವಿರುದ್ಧ ತಿರುಗಿಬಿದ್ದಿದ್ದಾರೆ.
ಮೊದಲ ಗ್ರ್ಯಾಂಡ್ ಫಿನಾಲೆ ಬಳಿಕ ಬಿಗ್‌ಬಾಸ್ ಸೀಸನ್ 12ರ ಮನೆಗೆ ಮ್ಯೂಟಂಟ್ ರಘು, ಸಂಜಯ್ ಸಿಂಗ್ ಮತ್ತು ರಿಷಾ ಗೌಡ ಮೂವರು ಸ್ಪರ್ಧಿಗಳು ಪ್ರವೇಶಿಸಿದ್ದಾರೆ. ಈ ಮೂವರ ಎಂಟ್ರಿ ಹೇಗಿರುತ್ತೆ ಎಂದು ಕಾಯುತ್ತಿದ್ದ ವೀಕ್ಷಕರಿಗೆ ಇಂದಿನ ಪ್ರೋಮೋ ಸಣ್ಣದಾದ ಹಿಂಟ್ ನೀಡಿದೆ. ಮನೆಯಲ್ಲಿ ಅಶ್ವಿನಿ ಗೌಡ ಮತ್ತು ಜಾನ್ವಿ ಜೊತೆಯಾಗಿ ರಘು ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ.
25
ರಘು ಅಬ್ಬರದ ಧ್ವನಿ
ಮೈಕ್ ಹಿಡಿದುಕೊಂಡು ಮನೆಗೆ ಬಂದ ರಘು, ಮಲಗಿದ್ದ ಎಲ್ಲಾ ಸ್ಪರ್ಧಿಗಳನ್ನು ಎಚ್ಚರಿಸಿ ಗಾರ್ಡನ್ ಏರಿಯಾಗೆ ಕರೆದುಕೊಂಡು ಬಂದಿದ್ದಾರೆ. ಸ್ಪರ್ಧಿಗಳು ಯಾವ ವಿಷಯದಲ್ಲಿ ಎಚ್ಚೆತ್ತುಕೊಳ್ಳಬೇಕೆಂಬ ವಿಷಯ ಹೇಳುತ್ತಾ ಅವರ ಮೇಲೆ ನೀರು ಸುರಿದಿದ್ದಾರೆ. ರಘು ಅಬ್ಬರದ ಧ್ವನಿ ಕೇಳಿ ಮನೆಮಂದಿಯೆಲ್ಲಾ ಒಂದು ಕ್ಷಣ ಶಾಕ್ ಆಗಿದ್ದಾರೆ. ಮನೆಗೆ ಎಂಟ್ರಿ ಕೊಟ್ಟ ಜೋಶ್‌ನಲ್ಲಿ ರಘು ಎಡವಟ್ಟು ಮಾಡಿಕೊಂಡಿದ್ದಾರೆ. ಪ್ರೋಮೋ ನೋಡಿದ ನೆಟ್ಟಿಗರು ನಿಮಗಿದು ಬೇಕಿತ್ತಾ ಎಂದು ಕಮೆಂಟ್ ಮಾಡುತ್ತಿದ್ದಾರೆ.
35
ರಣಕಹಳೆ ಮೊಳಗಿಸಿದ ಅಶ್ವನಿ-ಜಾನ್ವಿ
ಕ್ವಾಟ್ಲೆ ಕಿಚನ್ ಶೋನಲ್ಲಿ ನೋಡಿದ ವೀಕ್ಷಕರರು, ರಘು ಅವರಿಂದ ಅಗ್ರೆಸ್ಸಿವ್ ಆಟವನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಅದೇ ರೀತಿ ಘರ್ಜಿಸುತ್ತಲೇ ಬಂದಿರುವ ರಘು, ಎಡವಟ್ಟು ಮಾಡಿಕೊಂಡಿದ್ದಾರೆ. ಸ್ಪರ್ಧಿಗಳ ಮೇಲೆ ನೀರು ಹಾಕಿ ಅದಕ್ಕೆ ಸೂಕ್ತ ಕಾರಣವನ್ನು ನೀಡಬೇಕಾಗುತ್ತದೆ. ಕಾಕ್ರೋಚ್ ಸುಧಿ ಮತ್ತು ಧ್ರುವಂತ್ ಮೇಲೆ ನೀರು ಹಾಕಿದ್ದಾರೆ. ನಂತರ ಅಶ್ವಿನಿ ಗೌಡ ಮೇಲೆಯೂ ನೀರು ಸುರಿದಿದ್ದಾರೆ. ಈ ವೇಳೆ ರಘು ಮಾತಿನಭರದಲ್ಲಿ ಸಣ್ಣದಾದ ತಪ್ಪು ಮಾಡಿದರು. ಈ ಬೆನ್ನಲ್ಲೆ ರಘು ವಿರುದ್ಧ ಅಶ್ವಿನಿ ಗೌಡ ಮತ್ತು ಜಾನ್ವಿ ರಣಕಹಳೆ ಮೊಳಗಿಸಿದ್ದಾರೆ.
ಅಶ್ವಿನಿ ಗೌಡ ಅವರಿಗೆ ರಕ್ಷಿತಾ ಶೆಟ್ಟಿಯನ್ನು ಟಾರ್ಗೆಟ್ ಮಾಡಿರುವ ಬಗ್ಗೆ ಹೇಳುತ್ತಿರುತ್ತಾರೆ. ಈ ಸಂದರ್ಭದಲ್ಲಿ ಅಶ್ವಿನಿ ಗೌಡ ಅವರಿಗೆ ಏಕವಚನದಲ್ಲಿ ಸಂಭೋದಿಸುತ್ತಾರೆ. ಏಕವಚನದ ಮಾತುಗಳನ್ನು ಅಶ್ವಿನಿ ಗೌಡ ಖಂಡಿಸುತ್ತಾರೆ. ಇದಕ್ಕೆ ಜಾನ್ವಿ ಸಹ ಸಾಥ್ ನೀಡುತ್ತಾರೆ. ಅಶ್ವಿನಿ ಗೌಡ ಎಚ್ಚರಿಸಿದರೂ ರಘು ತಮ್ಮ ಮಾತಿನ ಶೈಲಿಯನ್ನು ಬದಲಿಸಿಕೊಳ್ಳದೇ ಮತ್ತೆ ವಾಗ್ದಾಳಿ ನಡೆಸುತ್ತಾರೆ.
ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳಾಡುವ ಪ್ರತಿ ಮಾತು ಒಂದೊಂದು ಹೊಸ ಚರ್ಚೆಗೆ ಕಾರಣವಾಗುತ್ತದೆ. ಕೆಲವೊಮ್ಮೆ ಸ್ಪರ್ಧಿಗಳು ಹೇಳಿದ ಮಾತನ್ನು ಕಾರಣವನ್ನಾಗಿ ನೀಡಿ ಮನೆಯಿಂದ ಹೊರಗೆ ಹಾಕಲು ನಾಮಿನೇಟ್ ಮಾಡಲಾಗುತ್ತದೆ. ಇದೀಗ ರಘು ಮಾತು ಮುಂದೆ ಅವರಿಗೆ ಯಾವ ರೀತಿಯಲ್ಲಿ ಪರಿಣಾಮ ಬೀರಬಹುದು ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.