ವಿಶ್ವದ ಅತಿದೊಡ್ಡ ಏರ್‌ಲೈನ್‌ ಕಂಪನಿಗಳು, ಟಾಪ್‌ 10 ಲಿಸ್ಟ್‌ನಲ್ಲಿ ಭಾರತದ ಏಕೈಕ ಬ್ರ್ಯಾಂಡ್‌!

First Published | Aug 15, 2024, 6:01 PM IST

biggest airlines in the world ಜಗತ್ತಿನಲ್ಲಿ ಏರ್‌ಟಿಕೆಟ್‌ ಬೆಲೆಗಳು ಗಗನಕ್ಕೇರುತ್ತಿದೆ. ಎಕಾನಮಿ ವಿಮಾನ ಟಿಕೆಟ್‌ಗಾಗಿ ಪ್ರಯಾಣಿಕರು ಆಫರ್‌ಗಳನ್ನು ಹುಡುಕುತ್ತಿದ್ದಾರೆ. ಈ ಹಂತದಲ್ಲಿ ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ವಿಶ್ವದ ಅತಿದೊಡ್ಡ ವಿಮಾನಯಾನ ಸಂಸ್ಥೆಗಳ ಟಾಪ್‌ 10 ಲಿಸ್ಟ್‌ ಇಲ್ಲಿದೆ.

ವಿಮಾನ ಪ್ರಯಾಣಿಕರಿಗೆ ಇತ್ತೀಚಿನ ದಿನಗಳಲ್ಲಿ ಟಿಕೆಟ್‌ ಬೆಲೆ ಏರಿಕೆಯಿಂದ ನಲುಗಿ ಹೋಗಿದ್ದಾರೆ. ಆದರೆ, ವಿಮಾನ ಪ್ರಯಾಣದ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಏರ್‌ಲೈನಲ್‌ಗಳು ಕೂಡ ಪ್ರಯಾಣದ ದರದ ವಿಚಾರದಲ್ಲಿ ಆಫರ್‌ಗಳನ್ನು ನೀಡಲು ಶುರು ಮಾಡಿವೆ.

ಏರುತ್ತಿರುವ ವಿಮಾನ ದರಗಳ ಮಧ್ಯೆ, ವಿಶ್ವದ ಕೆಲವು ದೊಡ್ಡ ವಿಮಾನಯಾನ ಸಂಸ್ಥೆಗಳು ಜಾಗತಿಕ ವಿಮಾನಯಾನ ಮಾರುಕಟ್ಟೆಯನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿವೆ.

Tap to resize

ಡೆಲ್ಟಾ ಏರ್ ಲೈನ್ಸ್, ಯುನೈಟೆಡ್ ಏರ್‌ಲೈನ್ಸ್ ಮತ್ತು ಅಮೇರಿಕನ್ ಏರ್‌ಲೈನ್ಸ್ ಯುಎಸ್‌ ಮಾರುಕಟ್ಟೆಯನ್ನು ಮುನ್ನಡೆಸುತ್ತವೆ, ಆದರೆ ಎಮಿರೇಟ್ಸ್, ಲುಫ್ಥಾನ್ಸ ಮತ್ತು ಏರ್ ಚೀನಾದಂತಹ ಅಂತರಾಷ್ಟ್ರೀಯ ದೈತ್ಯರು ಗಮನಾರ್ಹ ಜಾಗತಿಕ ಉಪಸ್ಥಿತಿಯನ್ನು ನೋಡುತ್ತಿವೆ.

ವಿಶ್ವದ ಅತಿದೊಡ್ಡ ವಿಮಾನಯಾನ ಸಂಸ್ಥೆಗಳ ಡೇಟಾ, ಅವುಗಳಲ್ಲಿರುವ ವಿಮಾನಗಳ ಸಂಖ್ಯೆ ಮತ್ತು ಈ ಕಂಪನಿಗಳ ಮಾರುಕಟ್ಟೆ ಕ್ಯಾಪ್ ಆಧಾರದಲ್ಲಿ ಇವುಗಳ ವರ್ಗೀಕರಣ ಮಾಡಿದೆ.

ಡೆಲ್ಟಾ ಏರ್‌ಲೈನ್ಸ್‌: ಪ್ಲೇನ್‌ ಸ್ಪಾಟರ್ಸ್‌ ವರದಿ ಪ್ರಕಾರ, 2024ರ ವೇಳೆಗೆ ಡೆಲ್ಟಾ ಏರ್‌ಲೈನ್ಸ್‌ ಅಂದಾಜು 800 ವಿಮಾನಗಳನ್ನು ಹೊಂದಿದೆ. ಇದರಲ್ಲಿ ಬೋಯಿಂಗ್‌ ಹಾಗೂ ಏರ್‌ಬಸ್‌ ಮಾಡೆಲ್‌ಗಳೂ ಇವೆ. ಪ್ರಯಾಣಿಕ ವಿಮಾನವು ತನ್ನ ವ್ಯಾಪಕವಾದ ದೇಶೀಯ ಮತ್ತು ಅಂತರಾಷ್ಟ್ರೀಯ ನೆಟ್‌ವರ್ಕ್‌ಗೆ ಹೆಸರುವಾಸಿಯಾದ ಪ್ರಮುಖ ಅಮೇರಿಕನ್ ವಿಮಾನಯಾನ ಸಂಸ್ಥೆಯಾಗಿದೆ. 25.5 ಬಿಲಿಯನ್‌ ಯುಎಸ್‌ ಡಾಲರ್‌ ಕಂಪನಿ ಇದಾಗಿದೆ.

ಇಂಟರ್‌ಗ್ಲೋಬ್‌ ಏವಿಯೇಷನ್‌ ಲಿಮಿಟೆಡ್‌ (ಇಂಡಿಗೋ):  1.63 ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯ ಹೊಂದಿರುವ ಇಂಡಿಗೋ 390ಕ್ಕೂ ಅಧಿಕ ವಿಮಾನಗಳನ್ನು ಹೊಂದಿದೆ. ಭಾರತದ ಅತಿದೊಡ್ಡ ಹಾಗೂ ವಿಶ್ವದ 2ನೇ ಅತಿದೊಡ್ಡ ವಿಮಾನಯಾನ ಕಂಪನಿಯಾಗಿದೆ. ದೇಶೀಯ ಮಾರ್ಗಗಳು ಹಾಗೂ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಸೇವೆ  ನೀಡುತ್ತಿದೆ.
 

ರಾನ್‌ಏರ್‌ ಹೋಲ್ಡಿಂಗ್ಸ್‌ ಪಿಎಲ್‌ಸಿ:  590ಕ್ಕೂ ಅಧಿಕ ವಿಮಾನಗಳನ್ನು ಹೊಂದಿದ್ದು, 18.4 ಬಿಲಿಯುನ್‌ ಯುಎಸ್‌ ಡಾಲರ್‌ ಮಾರುಕಟ್ಟೆ ಮೌಲ್ಯ ಹೊಂದಿದೆ.  ಐರ್ಲೆಂಡ್‌ ಮೂಲಕ ಬಜೆಟ್‌ ಸ್ನೇಹಿ ವಿಮಾನ ಯಾನ ಕಂಪನಿ. ವಿಮಾನ ಯಾನದಲ್ಲಿ ಹೆಚ್ಚಿನ ಸೇವೆಗಳು ಕೂಡ ಇರೋದಿಲ್ಲ. 450 ಬೋಯಿಂಗ್‌ 737ವಿಮಾನಗಳನ್ನು ಹೊಂದಿದ್ದು, ಯುರೋಪ್‌ನ ಅತಿದೊಡ್ಡ ಲೋ ಕಾಸ್ಟ್‌ ಏರ್‌ಲೈನ್‌ ಆಗಿದೆ.
 

ಸೌತ್‌ವಸ್ಟ್‌ ಏರ್‌ಲೈನ್‌: 15.2 ಬಿಲಿಯನ್‌ ಯುಎಸ್‌ ಡಾಲರ್‌ ಮಾರುಕಟ್ಟೆ ಮೌಲ್ಯ ಹೊಂದಿರುವ ಅಮೆರಿಕದ ವಿಮಾನಯಾನ ಕಂಪನಿ 816 ವಿಮಾನಗಳನ್ನು ಹೊಂದಿದೆ. ಇದು ಕೂಡ ಅಮೆರಿಕದ ಪ್ರಮುಖ ಲೋ ಕಾಸ್ಟ್‌ ಹಾಗೂ ಪಾಯಿಂಟ್‌-ಟು-ಪಾಯಿಂಟ್‌ ಏರ್‌ಲೈನ್‌ ಆಗಿದೆ. ಕಂಪನಿ 750 ಬೋಯಿಂಗ್‌ 737 ವಿಮಾನಗಳನ್ನು ಹೊಂದಿದೆ.
 

ಏರ್‌ ಚೀನಾ: ಭಾರತದಲ್ಲಿ ಏರ್‌ ಇಂಡಿಯಾ ಇದ್ದ ಹಾಗೆ ಚೀನಾದಲ್ಲಿ ಏರ್‌ ಚೀನಾ ಲಿಮಿಟೆಡ್‌ ರಾಷ್ಟ್ರೀಯ ವಿಮಾನಯಾನ ಕಂಪನಿ. 13.8 ಬಿಲಿಯನ್‌ ಯುಎಸ್‌ ಡಾಲರ್‌ ಮೌಲ್ಯ ಹೊಂದಿದ್ದು, 490ಕ್ಕೂ ಅಧಿಕ ವಿಮಾಗಳನ್ನು ಹೊಂದಿದೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ರೂಟ್‌ಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಬೋಯಿಂಗ್‌ ಹಾಗೂ ಏರ್‌ಬಸ್‌ ಮಾಡೆಲ್‌ನ ವಿಮಾಗಳು ಇವೆ.

ಸಿಂಗಾಪುರ ಏರ್‌ಲೈನ್ಸ್‌: 13.5 ಬಿಲಿಯನ್‌ ಯುಎಸ್‌ ಡಾಲರ್‌ ಮೌಲ್ಯದ ಸಿಂಗಾಪುರ ಮೂಲದ ಸಿಂಗಾಪುರ ಏರ್‌ಲೈನ್ಸ್‌  130ಕ್ಕೂ ಅಧಿಕ ವಿಮಾನಗಳನ್ನು ಹೊಂದಿದೆ. ಐಷಾರಾಮಿ ಟ್ರಾವೆಲ್‌ ಅನುಭವವನ್ನು ಈ ಕಂಪನಿ ನೀಡುತ್ತದೆ. ಏರ್‌ಬಸ್‌ ಎ380ಯಂಥ ವಿಮಾನಗಳನ್ನು ದೀರ್ಘ ಪ್ರಯಾಣಕ್ಕಾಗಿ ಹೊಂದಿದೆ.

ಯುನೈಟೆಡ್‌ ಏರ್‌ಲೈನ್ಸ್‌ ಹೋಲ್ಡಿಂಗ್ಸ್‌:  900ಕ್ಕೂ ಅಧಿಕ ವಿಮಾನಗಳನ್ನು ಈ ಕಂಪನಿ ಹೊಂದಿದೆ. ಅಮೆರಿಕ ಮೂಲದ ಈ ಕಂಪನಿಯ ಮೌಲ್ಯ 13.5 ಬಿಲಿಯನ್‌ ಯುಎಸ್‌ ಡಾಲರ್‌. ವಿಶ್ವದಲ್ಲಿಯೇ ಗರಿಷ್ಠ ವಿಮಾನಗಳನ್ನು ಹೊಂದಿರುವ ಕಂಪನಿ ಕೂಡ ಹೌದು. ಬೋಯಿಂಗ್‌ ಹಾಗೂ ಏರ್‌ಬಸ್‌ ಮಾಡೆಲ್‌ಗಳು ಈ ಕಂಪನಿಯ ಜೊತೆಗೆ ಇದೆ.
 

ಚೀನಾ ಸೌತರ್ನ್‌ ಏರ್‌ಲೈನ್ಸ್‌: 860ಕ್ಕೂ ಅಧಿಕ ವಿಮಾನಗಳನ್ನು ಹೊಂದಿರುವ ಚೀನಾ ಮೂಲದ ಕಂಪನಿಯ ಮಾರುಕಟ್ಟೆ ಮೌಲ್ಯ 12.4 ಬಿಲಿಯನ್‌ ಯುಎಸ್‌ ಡಾಲರ್‌. ಏಷ್ಯಾದ ಅತಿದೊಡ್ಡ ಏರ್‌ಲೈನ್ಸ್‌ ಕಂಪನಿ ಎನಿಸಿದೆ.
 

ಟರ್ಕಿಶ್‌ ಏರ್‌ಲೈನ್ಸ್‌: 12.2 ಬಿಲಿಯನ್‌ ಯುಎಸ್‌ ಡಾಲರ್‌ ಮೌಲ್ಯದ ಟರ್ಕಿಶ್‌ ಏರ್‌ಲೈನ್ಸ್‌, ಆ ದೇಶದ ರಾಷ್ಟ್ರೀಯ ವಿಮಾನಯಾನ ಕಂಪನಿ. ವಿಶ್ವದ 300ಕ್ಕೂ ಅಧಿಕ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತದೆ.

ಇಂಟರ್‌ನ್ಯಾಷನಲ್‌ ಏರ್‌ಲೈನ್‌ ಗ್ರೂಪ್‌ (ಐಎಜಿ): ಬ್ರಿಟನ್‌ ಹಾಗೂ ಸ್ಪೇನ್‌ನ ಕಂಪನಿ 10.6 ಬಿಲಿಯನ್‌ ಯುಎಸ್‌ ಡಾಲರ್‌ ಮೌಲ್ಯವನ್ನು ಹೊಂದಿದೆ. 650ಕ್ಕೂ ಅಧಿಕ ವಿಮಾನಗಳು ಕಂಪನಿಯಲ್ಲಿವೆ. ಬ್ರಿಟಿಷ್‌ ಏರ್‌ವೇಸ್‌ ಹಾಗೂ ಐಬೆರಿಯಾ ಕಂಪನಿಗಳು ಈ ಕಂಪನಿಯ ಅಂಗಸಂಸ್ಥೆಗಳಾಗಿವೆ.
 

Latest Videos

click me!