ಇದು ಸುಸೈಡ್ ಫಾರೆಸ್ಟ್, ಒಮ್ಮೆ ಒಳ ಹೋದರೆ ಮರಳಿ ಬಂದ ಇತಿಹಾಸವೇ ಇಲ್ಲ

First Published | Aug 7, 2024, 3:17 PM IST

ಒಕಿಗಹರಾ ಅರಣ್ಯ ಜಪಾನ್‌ನ ಪ್ರಸಿದ್ಧ ಜ್ವಾಲಾಮುಖಿ ಮೌಂಟ್ ಫ್ಯೂಜಿಯ ತಪ್ಪಲಿನಲ್ಲಿದೆ. ಜನರು ಇಲ್ಲಿಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹಾಗಾಗಿ ಈ ಕಾಡಿನ ಹೆಸರು ಸೂಸೈಡ್ ಫಾರೆಸ್ಟ್ ಅಂತಾನೂ ಇದೆ. ಈ ಕಾಡಿನಲ್ಲಿ ಇಲ್ಲೀವರೆಗೆ ಸುಮಾರು 500ಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
 

ಕಾಡು ಸ್ವಲ್ಪ ದಟ್ಟವಾದಾಗ ಮಾತ್ರ ಭಯಾನಕವಾಗಿ ಕಾಣಲು ಪ್ರಾರಂಭಿಸುತ್ತದೆ. ಕೆಲವು ಕಾಡುಗಳು ದಟ್ಟವಾಗಿರದೇ ಇದ್ದರೂ ಭಯಾನಕತೆ ಸೃಷ್ಟಿಸುತ್ತೆ. ಅಲ್ಲಿಗೆ ಹೋಗೋಕೆ ಭಯ ಆಗುತ್ತೆ. ಆದರೆ ಜಪಾನ್ ನಲ್ಲಿ ಸುಸೈಡ್ ಫಾರೆಸ್ಟ್ (Aokigahara Forest or Suicide Forest) ಎಂದು ಕರೆಯಲ್ಪಡುವ ಅರಣ್ಯವೂ ಇದೆ. ಇದು ವಿಶೇಷವಾಗಿ ಆತ್ಮಹತ್ಯೆಗಳಿಗೆ ಪ್ರಸಿದ್ಧವಾಗಿದೆ. ಯಾಕಂದ್ರೆ ಈ ಕಾಡಿನೊಳಗೆ ಹೋದ ಜನ ಬಂದ ಇತಿಹಾಸವೆ ಇಲ್ಲ.  

ಅಯೋಕಿಗಹರಾ ಕಾಡಿಗೆ (Aokigahara Forest) ಜನರು ತಮ್ಮ ಏಕಾಂತ ಕ್ಷಣಗಳನ್ನು ಎಂಜಾಯ್ ಮಾಡಲು ಬರುತ್ತಾರೆ. ಕೆಲವರಂತೂ ಇಲ್ಲಿಂದ ಹಿಂದಿರುಗುವ ಮಾತೇ ಇಲ್ಲ ಎನ್ನುವಂತೆ ಇಲ್ಲಿ ಬರುತ್ತಾರೆ. ಸ್ಯಾನ್ ಫ್ರಾನ್ಸಿಸ್ಕೋದ ಗೋಲ್ಡನ್ ಬ್ರಿಡ್ಜ್ ನಂತರ ಅತಿ ಹೆಚ್ಚು ಆತ್ಮಹತ್ಯೆಗಳು ಸಂಭವಿಸುವ ವಿಶ್ವದ ಎರಡನೇ ಸ್ಥಳವಿದು.  ಜಪಾನ್ ಅಂತೂ ಈಗಾಗಲೇ ಹೆಚ್ಚಿನ ಆತ್ಮಹತ್ಯೆ ಪ್ರಮಾಣವನ್ನು ಹೊಂದಿರುವ ರಾಷ್ಟ್ರವಾಗಿದೆ.

Tap to resize

ಕಳೆದ ಕೆಲವು ವರ್ಷಗಳಲ್ಲಿ, ಅಯೋಕಿಗಹರಾ ಕಾಡಿನಲ್ಲಿ ಕೋಪ ಮತ್ತು ಪ್ರತೀಕಾರದಿಂದ ತುಂಬಿದ ಜಪಾನೀಸ್ ದೆವ್ವಗಳು (Japanese ghosts) ವಾಸಿಸುತ್ತಿದ್ದವೆಂದು ಹೇಳಲಾಗುತ್ತಿತ್ತು. ಅದರಿಂದಲೇ ಅಲ್ಲಿ ಆತ್ಮಹತ್ಯೆಗಳು ಸಂಭವಿಸುತ್ತವೆ ಎಂದಿದ್ದರು. ಇದರ ಭಯಾನಕ ಇತಿಹಾಸವು 2016ರ ಹಾರರ್ ಚಲನಚಿತ್ರ ದಿ ಫಾರೆಸ್ಟ್‌ಗೆ ಪ್ರೇರಣೆ ನೀಡಿದೆ.  

ಈ ಕಾಡಿನಲ್ಲಿ ಜನರು ಆತ್ಮಹತ್ಯೆ (suicide) ಮಾಡಿಕೊಳ್ಳುವುದನ್ನು ತಡೆಯಲು ಜಪಾನ್ ಸರ್ಕಾರ ವಿಶೇಷ ವ್ಯವಸ್ಥೆಗಳನ್ನು ಮಾಡಿದೆ. ಅಯೋಕಿಗಹರಾ ಪ್ರವೇಶ ದ್ವಾರದಲ್ಲಿ ಭದ್ರತಾ ಕ್ಯಾಮೆರಾಗಳನ್ನು ಸ್ಥಾಪಿಸುವುದು ಮತ್ತು ಗಸ್ತು ಹೆಚ್ಚಿಸುವುದು ಈ ಕ್ರಮಗಳಲ್ಲಿ ಸೇರಿವೆ. ಆತ್ಮಹತ್ಯೆ ತಡೆಗಟ್ಟುವ ಕಾರ್ಯಕರ್ತರು ಮತ್ತು ಪೊಲೀಸರು ಕಾಡಿನಾದ್ಯಂತ ಎಲ್ಲಾ ಮಾರ್ಗಗಳಲ್ಲಿ ಫಲಕಗಳನ್ನು ಹಾಕಿದ್ದಾರೆ, ಅದರಲ್ಲಿ 'ನಿಮ್ಮ ಮಕ್ಕಳು, ನಿಮ್ಮ ಕುಟುಂಬದ ಬಗ್ಗೆ ಎಚ್ಚರಿಕೆಯಿಂದ ಯೋಚಿಸಿ' ,  'ನಿಮ್ಮ ಜೀವನವು ನಿಮ್ಮ ಹೆತ್ತವರಿಂದ ಸಿಕ್ಕಿದ ಅಮೂಲ್ಯವಾದ ಉಡುಗೊರೆ,' ಎಂದು ಬರೆಯಲಾಗಿದೆ.

ಈ ಕಾಡು ಪರ್ವತದ ತಪ್ಪಲಿನಲ್ಲಿರೋದರಿಂದ, ನೆಲ ಅಸಮವಾಗಿದೆ, ಬಂಡೆಗಳಿಂದ ಕೂಡಿದೆ ಮತ್ತು ಒರಟಾಗಿದೆ. ಮರಗಳು ಎಷ್ಟು ದಟ್ಟವಾಗಿವೆಯೆಂದರೆ ಗಾಳಿ ಅವುಗಳ ಮೂಲಕ ಹಾದುಹೋಗಲು ಸಾಧ್ಯವಿಲ್ಲ ಅನ್ನುವಷ್ಟು ದಟ್ಟವಾಗಿದೆ. ಇಲ್ಲಿ ವನ್ಯಜೀವಿಗಳು ಅಪರೂಪ. ಈ ಕಾಡಿನಲ್ಲಿ ಕಳೆದುಹೋಗುವುದು ತುಂಬಾ ಸುಲಭ, ಇಲ್ಲಿನ ಅನೇಕ ಸ್ಥಳಗಳಲ್ಲಿ ಫೋನ್ ಕೂಡ ಕೆಲಸ ಮಾಡುವುದಿಲ್ಲ. ದಿಕ್ಸೂಚಿ ಕೂಡ ಇಲ್ಲಿ ಕೆಲಸ ಮಾಡೋದಿಲ್ವಂತೆ. ಹಾಗಾಗಿ ಕಾಡಿನಲ್ಲಿ ಕಳೆದು ಹೋದರೆ ಮತ್ತೆ ಹೊರಗೆ ಬರೋದು ತುಂಬಾ ಕಷ್ಟ. 

ಆತ್ಮಹತ್ಯೆ ಕಾರಣದಿಂದಲೇ ಅಯೋಕಿಗಹರಾ ಅರಣ್ಯ ಬಹಳ ಕುಖ್ಯಾತಿ ಪಡೆದಿದೆ, ಆದರೆ ಜನರು ಅದರ ಸೌಂದರ್ಯ ಆನಂದಿಸಲು ಇಲ್ಲಿಗೆ ಬರುತ್ತಾರೆ. ಅನೇಕ ಪ್ರವಾಸಿಗರು ಫ್ಯೂಜಿ ಪರ್ವತದ ಸೌಂದರ್ಯ ನೋಡಲು ಮತ್ತು ವಿಶಿಷ್ಟವಾದ ಲಾವಾ ಪ್ರಸ್ಥಭೂಮಿ, 300 ವರ್ಷ ಹಳೆಯ ಮರಗಳು ಮತ್ತು ನರುಸಾವಾ ಐಸ್ ಗುಹೆ ಸೇರಿದಂತೆ ನೈಸರ್ಗಿಕ ದೃಶ್ಯಾವಳಿಗಳ ಪ್ರಮುಖ ಆಕರ್ಷಣೆಗಳನ್ನು ನೋಡಲು ಮಾತ್ರ ಇಲ್ಲಿಗೆ ಬರುತ್ತಾರೆ. 

ಒಂದು ವೇಳೆ ಈ ಕಾಡಿನಲ್ಲಿ ಯಾರಾದರೂ ಕಳೆದು ಹೋದರೆ, ಅವರನ್ನ ಕಂಡು ಹಿಡಿಯುವುದು ತುಂಬಾ ಕಷ್ಟ. ಇಲ್ಲಿ ಕಾಣೆಯಾದ ಅನೇಕ ಜನರು ಇಲ್ಲಿಯವರೆಗೆ ಪತ್ತೆಯಾಗಿಲ್ಲ. ಅರಣ್ಯ ದೊಡ್ಡದಾಗಿದೆ ಮತ್ತು ದಟ್ಟವಾಗಿದೆ, ಇದರಿಂದ ಶೋಧ ತಂಡಗಳಿಗೆ ಅದರ ಪ್ರತಿಯೊಂದೂ ಭಾಗವನ್ನು ಆವರಿಸುವುದು ಕಷ್ಟ. ಪೊದೆಗಳಲ್ಲಿ ಸಿಲುಕಿರುವ ಕೆಲವೊಂದು ವಸ್ತುಗಳು, ಮಾನವ ಅಸ್ತಿಪಂಜರ ಇವುಗಳೇ ಈ ಸುಸೈಡ್ ಕಾಡಿನ ಪ್ರಮುಖ ಚಿತ್ರಣವನ್ನ ನೀಡುತ್ತೆ. 

Latest Videos

click me!