ಅನಂತ್ ಅಂಬಾನಿ ರಾಧಿಕಾ ಹನಿಮೂನ್‌, ಬೆಡ್‌ ರೂಂನ ಒಂದು ದಿನದ ಬಾಡಿಗೆ 31 ಲಕ್ಷ!

First Published | Aug 14, 2024, 4:35 PM IST

ಮುಂಬೈನಲ್ಲಿ ಅದ್ಧೂರಿಯಾಗಿ ಮದುವೆ ಬಳಿಕ ಪ್ಯಾರೀಸ್‌ ಒಲಂಪಿಕ್ಸ್ ನಲ್ಲಿ ಕಾಣಿಸಿಕೊಂಡಿದ್ದ   ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಹನಿಮೂನ್‌ಗಾಗಿ ಕೋಸ್ಟರಿಕಾಗೆ ಪ್ರಯಾಣ ಬೆಳಸಿದ್ದಾರೆ.

ಮಧ್ಯ ಅಮೆರಿಕಾದಲ್ಲಿ ಇರುವ ಕೋಸ್ಟರಿಕಾದಲ್ಲಿ ಅವರು ತಮ್ಮ ಮಧುಚಂದ್ರಕ್ಕೆ ಫೋರ್ ಸೀಸನ್ಸ್ ರೆಸಾರ್ಟ್ ಕಾಸಾ ಲಾಸ್ ಓಲಾಸ್ ವನ್ನು ಬುಕ್ ಮಾಡಿದ್ದಾರೆ. ಆಗಸ್ಟ್ 1 ರಂದು ಆಗಮಿಸಿದ ನೂತನ ದಂಪತಿ ತಮಗೆ ಬೇಕಾದ, ತಮ್ಮ ಅಭಿರುಚಿಗೆ ಬೇಕಾದ ಜಾಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಇದು ಸಾಟಿಯಿಲ್ಲದ ಐಷಾರಾಮಿ ಮತ್ತು ಪ್ರಶಾಂತ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ವಿಸ್ತಾರವಾದ ತೆರೆದ ಇದಾಗಿದ್ದು, ಸೊಂಪಾದ ತಾಳೆ ಮರಗಳ ನಡುವೆ ನೆಲೆಸಿರುವ ಈ ಅಲ್ಟ್ರಾ-ಐಷಾರಾಮಿ ರೆಸಾರ್ಟ್ ಕಾಸಾ ಲಾಸ್ ಓಲಾಸ್ ಪ್ರಶಾಂತ ಸ್ಥಳದಲ್ಲಿ ನೆಲೆಗೊಂಡಿದೆ. ವಿರಾಡೋರ್ ಬೀಚ್‌ನಲ್ಲಿ ನೆಲೆಗೊಂಡಿದ್ದು, ತಿಳಿ ನೀರು ಮತ್ತು ಪ್ರೀಟಾ ಕೊಲ್ಲಿಯ ಹಚ್ಚ ಹಸಿರಿನ ನೋಟದಿಂದ ತುಂಬಿದೆ.

Tap to resize

ಓಲಾಸ್ ಎಂದು ಕರೆಯಲ್ಪಡುವ ಐಷಾರಾಮಿ ಫೋರ್ ಸೀಸನ್ಸ್ ರೆಸಾರ್ಟ್‌ನಲ್ಲಿ  ಅನಂತ್ -ರಾಧಿಕಾ  ಗುಣಮಟ್ಟದ ಸಮಯವನ್ನು ಕಳೆಯುತ್ತಿದ್ದಾರೆ.

ದಂಪತಿ ಆಯ್ಕೆ ಮಾಡಿರುವ ಈ ಹೊಟೇಲ್ ಆರು ಬೆಡ್‌ ರೂಂ ಹೊಂದಿದ್ದು, 18,475 ಚದರ ಅಡಿಯ ಐಷಾರಾಮಿ ನಿವಾಸವಾಗಿದೆ. ಹೆಚ್ಚುವರಿ ರೆಸಾರ್ಟ್ ಶುಲ್ಕಗಳು ಮತ್ತು ತೆರಿಗೆಗಳನ್ನು ಹೊರತುಪಡಿಸಿ ಇಡೀ ವಿಲ್ಲಾ ಪ್ರತಿ ರಾತ್ರಿಗೆ 16 ಲಕ್ಷ ರೂ. ಪಾವತಿ ಮಾಡಬೇಕಿದೆ.

ಈ ಲಕ್ಷುರಿ ಜಾಗವು ಆರಾಮದಾಯಕವಾದ ಹಾಸಿಗೆ, ಲೈಬ್ರೆರಿ, ಜಿಮ್, 100 ಅಡಿ ಈಜುಕೊಳ, ಟೆನ್ನಿಸ್ ಕೋರ್ಟ್‌, ವಿಶಾಲವಾದ ಹೊರಾಂಗಣ ಸೇರಿ ಇನ್ನೂ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದೆ.

ಹೆಚ್ಚುವರಿ ಐಷಾರಾಮಿ ಬಯಸಿದರೆ ಅತಿಥಿಗಳು ಖಾಸಗಿಯಾಗಿ ಅಡುಗೆ ಮಾಡುವವರು, ವೈಯಕ್ತಿಕ ಬಾರ್, ಯೋಗ, ಧ್ಯಾನಕ್ಕಾಗಿ ವೈಯಕ್ತಿಕ ತರಬೇತುದಾರರನ್ನು ಕೂಡ ಪಡೆದುಕೊಳ್ಳಬಹುದು.

ರೆಸಾರ್ಟ್ ಶುಲ್ಕಗಳು ಮತ್ತು ತೆರಿಗೆಗಳನ್ನು ಹೊರತುಪಡಿಸಿ ಇಲ್ಲಿರುವ ಜಾಗದ ಸಾಮಾನ್ಯ ರೂಂ ಬಾಡಿಗೆ ಪ್ರತೀ ರಾತ್ರಿಗೆ ರೂ 1.3 ಲಕ್ಷದಿಂದ ಪ್ರಾರಂಭವಾಗುತ್ತವೆ. ಅಲ್ಲಿಂದ ಐಶಾರಾಮಿಯಾಗಿರುವ  ಐದು ಬೆಡ್‌ರೂಮ್ ನಿವಾಸಕ್ಕೆ ಪ್ರತಿ ರಾತ್ರಿ ರೂ 31 ಲಕ್ಷದವರೆಗೆ  ಶುಲ್ಕವಿದೆ.

ಈ ರೆಸಾರ್ಟ್ ಒಟ್ಟು 15 ಖಾಸಗಿ ನಿವಾಸಗಳನ್ನು ಹೊಂದಿದೆ. ಇದನ್ನು ಪ್ರಸಿದ್ಧ ವಾಸ್ತುಶಿಲ್ಪಿ ರೊನಾಲ್ಡ್ ಜುರ್ಚರ್ ವಿನ್ಯಾಸಗೊಳಿಸಿದ್ದಾರೆ. 

ಜುಲೈ 12, 13 ಮತ್ತು 14ರಂದು ಮುಂಬೈನ ಜಿಯೋ ವಲ್ಡ್ ಸೆಂಟರ್‌ ನಲ್ಲಿ ಅದ್ಧೂರಿ ವಿವಾಹ ನಡೆದಿತ್ತು. ಜಗತ್ತಿನಾದ್ಯಂತ ಶ್ರೀಮಂತ ಉದ್ಯಮಿಗಳು, ಬಾಲಿವುಡ್ ಸೇರಿದಂತೆ ಸಾವಿರಾರು ಮಂದಿ ಮದುವೆಗೆ ಆಗಮಿಸಿದ್ದರು.

Latest Videos

click me!