World Highest Railway Station: ಸಮುದ್ರ ಮಟ್ಟದಿಂದ 5,068 ಮೀಟರ್ ಎತ್ತರದಲ್ಲಿದೆ. ಇಲ್ಲಿ ಆಮ್ಲಜನಕದ ಕೊರತೆಯಿಂದಾಗಿ ರೈಲುಗಳಲ್ಲಿ ಪ್ರಯಾಣಿಕರಿಗೆ ಆಕ್ಸಿಜನ್ ಮಾಸ್ಕ್‌ಗಳನ್ನು ಒದಗಿಸಲಾಗುತ್ತದೆ. ಈ ನಿಲ್ದಾಣದ ವಿಶೇಷತೆಯ ಮಾಹಿತಿ ಇಲ್ಲಿದೆ.
ರೈಲು ಪ್ರಯಾಣದ ವೇಳೆ ಕಿಟಕಿ ಆಸನದಲ್ಲಿ ಕುಳಿತುಕೊಳ್ಳುವ ಆನಂದ ಬಲ್ಲವರಿಗಾಗಿ ಮಾತ್ರ ಗೊತ್ತು. ವಿಶ್ವದ ಅತಿ ಎತ್ತರದ ನಿಲ್ದಾಣದಲ್ಲಿ ಉಸಿರಾಡುವುದು ಸಹ ಕಷ್ಟವಾಗುತ್ತದೆ. ಈ ನಿಲ್ದಾಣದಲ್ಲಿ ವಿಮಾನದಲ್ಲಿರುವಂತೆ ಪ್ರಯಾಣಿಕರಿಗೆ ಆಮ್ಲಜನಕ ಮಾಸ್ಕ್ ಅಗತ್ಯವಾಗಿ ಬೇಕಾಗುತ್ತದೆ. ದ ಈ ನಿಲ್ದಾಣವು ವಿಶ್ವದ ಅತಿ ಎತ್ತರದ ರೈಲು ನಿಲ್ದಾಣ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
27
ಮೋಡಗಳ ಮೇಲೆ ರೈಲು ಪ್ರಯಾಣ
ವಿಶ್ವದ ಅತಿ ಎತ್ತರದ ರೈಲು ನಿಲ್ದಾಣ ಎಂದು ಕರೆಯಲ್ಪಡುವ ತಂಗುಲಾ ರೈಲು ನಿಲ್ದಾಣವು ಟಿಬೆಟ್‌ನ ಆಮ್ಡೋ ಕೌಂಟಿ ಎಂಬ ಪ್ರದೇಶದಲ್ಲಿದೆ. ಈ ರೈಲು ಪ್ರಯಾಣ ಆಕಾಶದಲ್ಲಿ ಪಯಣಿಸಿದ ಅನುಭವ ನೀಡುತ್ತದೆ. ಸಮುದ್ರ ಮಟ್ಟದಿಂದ 5,068 ಮೀಟರ್ (16,627 ಅಡಿ) ಎತ್ತರದಲ್ಲಿದ್ದು, ಈ ನಿಲ್ದಾಣ ಕ್ವಿಂಗ್ಹೈ-ಟಿಬೆಟ್ ರೈಲ್ವೆ ಮಾರ್ಗದಲ್ಲಿದೆ. ಟಿಬೆಟ್ ಅನ್ನು ಚೀನಾದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವ ಮೊದಲ ರೈಲ್ವೆ ಮಾರ್ಗ ಇದಾಗಿದೆ. ಇದನ್ನು 'ಡಾಂಗ್ಲಾ ರೈಲ್ವೆ ನಿಲ್ದಾಣ' ಎಂದೂ ಕರೆಯುತ್ತಾರೆ.
37
ಸಾಸಹಮಯ ಪ್ರಯಾಣ
ವಿಮಾನಗಳಲ್ಲಿ ತುರ್ತು ಪರಿಸ್ಥಿತಿ ನಿರ್ವಹಣೆಗಾಗಿ ಆಕ್ಸಿಜನ್ ಮಾಸ್ಕ್ ಅಳವಡಿಸಲಾಗಿರುತ್ತದೆ. ಅದೇ ರೀತಿ ಈ ಮಾರ್ಗದ ರೈಲುಗಳಲ್ಲಿ ಆಕ್ಸಿಜನ್ ಮಾಸ್ಕ್ ಅಳವಡಿಸಲಾಗಿರುತ್ತದೆ. ಈ ಮಾರ್ಗದಲ್ಲಿ ಆಕ್ಸಿಜನ್ ಮಟ್ಟ ಕಡಿಮೆಯಾಗಿರುವ ಕಾರಣ ಈ ರೈಲುಗಳು ವಿಶೇಷ ವ್ಯವಸ್ಥೆಗಳನ್ನು ಹೊಂದಿರುತ್ತವೆ. ಪ್ರತಿ ಸೀಟಿನ ಬಳಿ ಆಕ್ಸಿಜನ್ ಮಾಸ್ಕ್ ನೀಡಲಾಗಿರುತ್ತದೆ. ಈ ಮಾರ್ಗದಲ್ಲಿ ಪ್ರಯಾಣಿಸುವುದು ಸಾಹಸಮಯ ಪ್ರಯಾಣ ಎಂದು ಪ್ರಯಾಣಿಕರು ಹೇಳುತ್ತಾರೆ.
ಈ ನಿಲ್ದಾಣ ಸಂಪೂರ್ಣವಾಗಿ ಸ್ವಯಂಚಾಲಿತ ವ್ಯವಸ್ಥೆಯನ್ನು ಹೊಂದಿದ್ದು, ಇಲ್ಲಿ ಯಾವುದೇ ಸಿಬ್ಬಂದಿ ಇರಲ್ಲ. ರೈಲುಗಳ ಚಲನೆಯಿಂದ ಹಿಡಿದು ಸಿಗ್ನಲಿಂಗ್ ವ್ಯವಸ್ಥೆಯವರೆಗೆ ಎಲ್ಲವೂ ಸ್ವಯಂಚಾಲಿತವಾಗಿದೆ. ಜುಲೈ 1, 2006 ರಂದು ಪ್ರಾರಂಭವಾದ ಈ ನಿಲ್ದಾಣ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪಟ್ಟಿಯಲ್ಲಿದೆ. ಮೂರು ಟ್ರ್ಯಾಕ್ ಹೊಂದಿರುವ ರೈಲು ನಿಲ್ದಾಣ 1.25 ಕಿಲೋಮೀಟರ್ ಉದ್ದವಿದೆ.
57
ಪ್ರಯಾಣಿಕರಿಗೆ ನಿಷೇಧ
2010 ರವರೆಗೆ ಈ ನಿಲ್ದಾಣದಲ್ಲಿ ಪ್ಯಾಸೆಂಜರ್ ರೈಲುಗಳು ನಿಲುಗಡೆಯಾಗುತ್ತಿರಲಿಲ್ಲ. ಇದೀಗ ಈ ನಿಲ್ದಾಣ ತಾಂತ್ರಿಕ ನಿಲುಗಡೆಯನ್ನು ಹೊಂದಿದ್ದು, ಪ್ರಯಾಣಿಕರಿಗೆ ಹತ್ತುವ ಮತ್ತು ಇಳಿಯುವ ಅವಕಾಶ ನಿಷೇಧಿಸಲಾಗಿದೆ.
67
ಹಿಮಾಲಯ ಪರ್ವತ ಶ್ರೇಣಿ
ಸಮುದ್ರಮಟ್ಟದಿಂದ ತುಂಬಾ ಎತ್ತರದಲ್ಲಿರುವ ಕಾರಣ ಪ್ರಯಾಣಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ನಿಯಮ ಜಾರಿಗೆ ತರಲಾಗಿದೆ. ರೈಲು ನಿಂತಾಗ, ಪ್ರಯಾಣಿಕರು ಕಿಟಕಿಗಳ ಮೂಲಕ ಹೊರಗೆ ಹಿಮಾಲಯ ಪರ್ವತ ಶ್ರೇಣಿಗಳ ಸುಂದರವಾದ ದೃಶ್ಯ ವೀಕ್ಷಿಸಬಹುದು.
ವಿಶ್ವದ ಅತಿ ಎತ್ತರದ ರೈಲು ನಿಲ್ದಾಣ ಚೀನಾದ ಟಿಬೆಟ್ ಪ್ರದೇಶದಲ್ಲಿದ್ದರೆ, ಭಾರತದ ಅತಿ ಎತ್ತರದ ರೈಲು ನಿಲ್ದಾಣ ಪಶ್ಚಿಮ ಬಂಗಾಳದಲ್ಲಿದೆ. ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆಯಲ್ಲಿರುವ ಘುಮ್ ರೈಲು ನಿಲ್ದಾಣವು ಭಾರತದ ಅತಿ ಎತ್ತರದ ನಿಲ್ದಾಣ ಎಂಬ ದಾಖಲೆಯನ್ನು ಹೊಂದಿದೆ.
ಸಮುದ್ರ ಮಟ್ಟದಿಂದ 2,258 ಮೀಟರ್ (7,407 ಅಡಿ) ಎತ್ತರದಲ್ಲಿದೆ. ಇದರ ಎತ್ತರ ತಂಗುಲಾ ನಿಲ್ದಾಣಕ್ಕಿಂತ ಕಡಿಮೆಯಿದ್ದರೂ, ಘೂಮ್ ನಿಲ್ದಾಣವು ವಿಶ್ವಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇಲ್ಲಿನ ಆಟಿಕೆ ರೈಲು ಸವಾರಿ ಪ್ರವಾಸಿಗರಿಗೆ ಮರೆಯಲಾಗದ ಅನುಭವ ನೀಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.