ಭಾರತದ ಈ ಸುಂದರ ದ್ವೀಪ ನೋಡಿದ್ರೆ, ಮತ್ತೆ ಮಾಲ್ಡೀವ್ಸ್ ಕಡೆ ತಿರುಗೀ ನೋಡಲ್ಲ ಬಿಡಿ

Published : Jun 17, 2022, 07:00 PM IST

ಮಾಲ್ಡೀವ್ಸ್ ತುಂಬಾ ಸುಂದರ ತಾಣ ಅನ್ನೋದು ಎಲ್ಲರಿಗೂ ಗೊತ್ತು. ಅದಕ್ಕಾಗಿಯೇ ಹೆಚ್ಚಿನ ಸೆಲೆಬ್ರಿಟಿಗಳು ಮಾಲ್ಡೀವ್ಸ್ ಗೆ (Maldives) ಟ್ರಾವೆಲ್ ಮಾಡ್ತಾರೆ. ಆದ್ರೆ ನಿಮಗೆ ಗೊತ್ತಾ? ಮಾಲ್ಡೀವ್ಸ್ ನಷ್ಟೇ ಅದ್ಭುತ ಸೌಂದರ್ಯ ಹೊಂದಿರೋ ತಾಣ ಭಾರತದಲ್ಲೇ ಇದೆ. ಹಾಗಾದ್ರೆ ಆ ತಾಣ ಯಾವುದು? ಅನ್ನೋದರ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ…. 

PREV
111
 ಭಾರತದ ಈ ಸುಂದರ ದ್ವೀಪ ನೋಡಿದ್ರೆ, ಮತ್ತೆ ಮಾಲ್ಡೀವ್ಸ್ ಕಡೆ ತಿರುಗೀ ನೋಡಲ್ಲ ಬಿಡಿ

ಮಾಲ್ಡೀವ್ಸ್ ನಂತೆ ಸುಂದರವಾದ ತಾಣ ಭಾರತದಲ್ಲೂ ಇದೆ. ಅದು ಬೇರಾವುದೂ ಅಲ್ಲ ಲಕ್ಷದ್ವೀಪ. ಲಕ್ಷದ್ವೀಪಕ್ಕೆ ಸಂಬಂಧಿಸಿದ 5 ವಿಷಯಗಳು ನೀವು ಮಾಲ್ಡೀವ್ಸ್ ಅನ್ನು ತೊರೆದು ಈ ಸಣ್ಣ ಮತ್ತು ಸುಂದರವಾದ ದ್ವೀಪಕ್ಕೆ  (island) ಹೋಗುವಂತೆ ಮಾಡುತ್ತೆ.

211

ಮಾಲ್ಡೀವ್ಸ್ ಮತ್ತು ಮಾರಿಷಸ್ ಎಂತಹ ಪ್ರವಾಸಿ ತಾಣಗಳಾಗಿವೆಯೆಂದರೆ ಜನರು ತಮ್ಮ ದೇಶ ಭಾರತದ ಸುಂದರ ದ್ವೀಪಗಳಿಗೆ ಭೇಟಿ ನೀಡೋದನ್ನು ಬಿಟ್ಟು, ದೂರದ ದ್ವೀಪಗಳಿಗೆ ತೆರಳುತ್ತಾರೆ. ಮಾಲ್ಡೀವ್ಸ್ ನಂತಹ ಅಧ್ಬುತ ಸೌಂದರ್ಯ ಮತ್ತು ಅನುಭವವನ್ನು ನೀಡುವ ಲಕ್ಷದ್ವೀಪದ (Lakshadweep) ಬಗ್ಗೆ ಇಲ್ಲಿ ಒಂದಿಷ್ಟು ಮಾಹಿತಿ ನೀಡಿದ್ದೇವೆ. ನೀವು ಇದನ್ನ ಖಂಡಿತಾ ಇಷ್ಟಪಡ್ತೀರಿ.

311

ಇಂದು ನಾವು ಲಕ್ಷದ್ವೀಪದ ಬಗ್ಗೆ ಅಂತಹ 5 ವಿಷಯಗಳ ಬಗ್ಗೆ ಹೇಳುತ್ತಿದ್ದೇವೆ, ಅದನ್ನು ನೀವು ಮಾಲ್ಡೀವ್ಸ್ ನಲ್ಲಿ ಮಾತ್ರ ಇದೆ ಎಂದು ಅಂದುಕೊಳ್ಳುತ್ತೀರಿ. ಈ ಬಗ್ಗೆ ತಿಳಿದ್ರೆ ನೀವು ಖಂಡಿತವಾಗಿ ಈ ಸಣ್ಣ ಮತ್ತು ಸುಂದರವಾದ ದ್ವೀಪದ ಕಡೆಗೆ ಹೋಗುತ್ತೀರಿ.

411

ಮಾಲ್ದೀವ್ ನಂತೆ ಲಕ್ಷದ್ವೀಪದಲ್ಲಿ ನೀರಿನ ಮೇಲೆ ವಿಲ್ಲಾ ನಿರ್ಮಾಣ
ಲಕ್ಷದ್ವೀಪ ಆಡಳಿತವು ಮಾಲ್ಡೀವ್ಸ್ ಮಾದರಿಯಲ್ಲಿ ಲಕ್ಷದ್ವೀಪವನ್ನು ಅಭಿವೃದ್ಧಿಪಡಿಸಲು ಬಯಸುತ್ತದೆ ಎಂದು ಹೇಳಿದೆ. ನೆರೆಯ ದೇಶದಲ್ಲಿ ಲಭ್ಯವಿರುವ ಎಲ್ಲಾ ವಿಶ್ವದರ್ಜೆಯ ಸೌಲಭ್ಯ ಹೊಂದಿರುವ ಮೂರು ಪ್ರೀಮಿಯಂ ವಾಟರ್ ವಿಲ್ಲಾ ಪ್ರಾಪರ್ಟಿಗಳು (water villa property) ಶೀಘ್ರದಲ್ಲೇ ಲಕ್ಷದ್ವೀಪದಲ್ಲಿ ಬರಲಿವೆ. ಈ ಯೋಜನೆಯು ಭಾರತದ ಮೊಟ್ಟಮೊದಲ ಯೋಜನೆಯಾಗಿದ್ದು, ಇಲ್ಲಿ ಸೌರಶಕ್ತಿ ಚಾಲಿತ, ಪರಿಸರ ಸ್ನೇಹಿ ವಿಶ್ವದರ್ಜೆಯ ಸೌಲಭ್ಯಗಳನ್ನು ವಿಲ್ಲಾದಲ್ಲಿ ನೀಡಲಾಗುವುದು. 

511

ಲಕ್ಷದ್ವೀಪದ ಹೊಸ ಕ್ರೀಸ್ ಪ್ರವಾಸೋದ್ಯಮ 
ಮಾರ್ಚ್ನಲ್ಲಿ, ಲಕ್ಷದ್ವೀಪವು ಮಾಲ್ಡೀವ್ಸ್ ಮತ್ತು ಮಾರಿಷಸ್ಗೆ ಸಮಾನವಾದ ಅನುಭವದೊಂದಿಗೆ ಕ್ರೂಸ್ ಪ್ರವಾಸೋದ್ಯಮದ (tourism) ಯೋಜನೆಯನ್ನು ಪ್ರಸ್ತಾಪಿಸಿತು. ದೊಡ್ಡ ಹಡಗುಗಳಿಂದ ಹಿಡಿದು ಸಣ್ಣ ದೋಣಿಗಳವರೆಗೆ, ಪ್ರವಾಸಿಗರು ತಮ್ಮ ಆಯ್ಕೆಯ ಕ್ರೂಸ್ ಆಯ್ಕೆ ಮಾಡಬಹುದು, ಇದು ಅವರನ್ನು ತಮ್ಮ ಆಯ್ಕೆಯ ವಿವಿಧ ಸ್ಥಳಗಳಿಗೆ ಕರೆದೊಯ್ಯುತ್ತದೆ. ಅಷ್ಟೇ ಅಲ್ಲ, 48 ಗಂಟೆಗಳ ಕಾಲ ಉಳಿಯುವ ಎಲ್ಲಾ ಹಾಲಿಡೇ ಕ್ರೂಸ್ ಪ್ಯಾಕೇಜ್ ಗಳ ಕೊಡುಗೆಯೂ ಇರುತ್ತದೆ. 

611

ಲಕ್ಷದ್ವೀಪದಲ್ಲಿ ನ್ಯೂಡ್ ಬೀಚ್ ಇದೆ.
ಭಾರತದ ಅತ್ಯಂತ ಚಿಕ್ಕ ಕೇಂದ್ರಾಡಳಿತ ಪ್ರದೇಶವು ಸುಂದರವಾದ, ಹವಳದ ದ್ವೀಪ, ಅಗತ್ತಿ ದ್ವೀಪದ ಕಡಲತೀರವನ್ನು ಹೊಂದಿದೆ ಎಂದು ನಿಮಗೆ ತಿಳಿದಿದೆಯೇ, ಅಲ್ಲಿ ಉಡುಪನ್ನು ಧರಿಸದಿರುವ (nude beach) ಆಯ್ಕೆಯೂ ಇದೆ. ಆದಾಗ್ಯೂ, ಹಸಿರು ತೆಂಗಿನ ಮರಗಳಿಂದ ಆವೃತವಾದ ಈ ಸುಂದರವಾದ ಬಿಳಿ ಮರಳಿನ ಕಡಲತೀರಕ್ಕೆ ಭೇಟಿ ನೀಡಲು ನಿಮಗೆ ವಿಶೇಷ ಅನುಮತಿಯ ಅಗತ್ಯವಿದೆ. ಇದನ್ನು ಟಾರ್ಲೆಸ್ ಬೀಚ್ ಎಂದೂ ಕರೆಯಲಾಗುತ್ತದೆ.

711

 ನೀವು ಕೂಡ ಮಾಲ್ಡೀವ್ಸ್ ನ ಬೀಚ್ ಅಭಿಮಾನಿಯಾಗಿದ್ದರೆ, ಆ ಯೋಚನೆ ಬಿಡಿ. ಭಾರತದ ಈ ರಹಸ್ಯ ಕಡಲತೀರಕ್ಕೆ ನೀವು ಭೇಟಿ ನೀಡಿ. ಲಕ್ಷದ್ವೀಪದ ಅತ್ಯಂತ ರಹಸ್ಯ ಮತ್ತು ಕಣ್ಣೀರಿನ ಆಕಾರದ ಬಂಗಾರಂ ದ್ವೀಪವು ಅದ್ಭುತ ಸೌಂದರ್ಯವನ್ನು ಹೊಂದಿರುವ ಬೀಚ್ ಆಗಿದೆ. 

811

ಈ ಪುಟಾಣಿ ದ್ವೀಪದಲ್ಲಿ ಸುಂದರವಾದ ಹವಳಗಳು ಕಂಡುಬರುತ್ತವೆ, ನಿಮಗೆ ವಾಟರ್ ಸ್ಪೋರ್ಟ್ಸ್ (water sports) ಎಂದರೆ ತುಂಬಾನೆ ಇಷ್ಟ ಎಂದಾದರೆ, ಈ ಸ್ಥಳವು ಉತ್ತಮ ಆಯ್ಕೆ ಆಗಿದೆ. ಸ್ಕೂಬಾ ಡೈವಿಂಗ್, ಆಳ ಸಮುದ್ರ ಮೀನುಗಾರಿಕೆ, ಸ್ನಾರ್ಕೆಲಿಂಗ್, ಕಯಾಕಿಂಗ್, ವಿಂಡ್ ಸರ್ಫಿಂಗ್ ನಂತಹ ಜಲಕ್ರೀಡೆಗಳನ್ನು ಇಲ್ಲಿ ಆನಂದಿಸಬಹುದು. 

911

ನೀವು ಸೀ ಫುಡ್ ಇಷ್ಟಪಡುತ್ತಿದ್ದರೆ, ಮಿನಿಕಾಯ್ ಗೆ ಹೋಗಿ 
ನಿಮಗೆ ಸೀ ಫುಡ್  (seafood)ಎಂದರೆ ತುಂಬಾನೆ ಇಷ್ಟ ಎಂದಾದರೆ ಲಕ್ಷದ್ವೀಪವು ನಿಮ್ಮ ನೆಚ್ಚಿನ ರಜಾ ತಾಣವಾಗುತ್ತದೆ. ಇಲ್ಲಿನ ಸ್ಥಳೀಯ ಆಹಾರದಲ್ಲಿ, ನೀವು ಕೇರಳದ ರುಚಿಯನ್ನು ಪಡೆಯುತ್ತೀರಿ, ಆದರೆ ಇದರ ಹೊರತಾಗಿ, ನೀವು ಇಲ್ಲಿ ಅನೇಕ ರೀತಿಯ ರುಚಿ ರುಚಿಯಾದ ಬಾಯಲ್ಲಿ ನೀರೂರಿಸುವ ಸೀ ಫುಡ್ ಗಳನ್ನು ಕಾಣಬಹುದು. 

1011

ನೀವು ಇಲ್ಲಿನ ಆಹಾರವನ್ನು, 'ಮೂಸಾ ಕವಾಬ್' ನೊಂದಿಗೆ ಪ್ರಾರಂಭಿಸಬಹುದು, ಇದು ಫಿಶ್ ಕರಿ ಕವಾಬ್ ಆಗಿದೆ, ಇದನ್ನು ಬಿಸಿ ಅನ್ನ ಅಥವಾ ರೊಟ್ಟಿಯೊಂದಿಗೆ ಬಡಿಸಲಾಗುತ್ತದೆ. ನೀವು ಈ ಭಕ್ಷ್ಯವನ್ನು ತಿನ್ನದಿದ್ದರೆ, ನಿಮ್ಮ ಪ್ರವಾಸವು ಅಪೂರ್ಣವಾಗಿರುತ್ತದೆ. ಇದಲ್ಲದೆ, ತಾಜಾ ಗರಿಗರಿಯಾದ ಆಕ್ಟೋಪಸ್ ಫ್ರೈ (octopus fry) ಮತ್ತು ಸಿಗ್ನೇಚರ್ ಫಿಶ್ ಪಕೋಡಾಗಳನ್ನು ಸಹ ಟ್ರೈ ಮಾಡಬಹುದು. 

1111

ಕೊನೆಯದಾಗಿ ಹೇಳೋದಾದ್ರೆ, ಮಾಲ್ಡೀವ್ಸ್ ಬದಲಿಗೆ ಲಕ್ಷದ್ವೀಪವನ್ನು ಆಯ್ಕೆ ಮಾಡುವುದು ಉತ್ತಮ, ಏಕೆಂದರೆ ನೀವು ಇಲ್ಲಿ ಜನರ ಗುಂಪನ್ನು ನೋಡುವುದಿಲ್ಲ. ಭಾರತದ ಈ ಸುಂದರ ದ್ವೀಪವು ನಿಮ್ಮ ಹೃದಯವನ್ನು ಸಂತೋಷಪಡಿಸುತ್ತದೆ. ಲಕ್ಷದ್ವೀಪ ಖಂಡಿತವಾಗಿಯೂ ನಿಮಗೆ ನಿರಾಶೆಯನ್ನಂತೂ ಮಾಡಲು ಸಾಧ್ಯವೇ ಇಲ್ಲ. 
 

Read more Photos on
click me!

Recommended Stories