ಜನರು ದೆಹಲಿ-ಮುಂಬೈ ಬಿಟ್ಟು ಬೆಂಗಳೂರಲ್ಲೇ ವಾಸಿಸೋಕೆ ಬಯಸುತ್ತಿರೋದು ಯಾಕೆ?

First Published Feb 28, 2024, 5:16 PM IST

ಮೊದಲೆಲ್ಲಾ ಬೆಂಗಳೂರು ಜನರು ಕೇವಲ ಟ್ರಾವೆಲ್ ಮಾಡುವಂತಹ ಸ್ಥಳವಾಗಿತ್ತು. ಆದರೆ ಕಳೆದ ಕೆಲವು ವರ್ಷಗಳಲ್ಲಿ, ಈ ನಗರವು ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ದೇಶದ ಇತರ ಸ್ಥಳಗಳಿಗೆ ಹೋಲಿಕೆ ಮಾಡಿದ್ರೆ, ಬೆಂಗಳೂರು ಜೀವಿಸೋದಕ್ಕೆ ಬೆಸ್ಟ್ ತಾಣ ಅನ್ನುತ್ತಿದ್ದಾರೆ ಜನ. 
 

ಮೊದಲೆಲ್ಲಾ ಕೆಲಸಕ್ಕೆಂದು ಬೇರೆ ಬೇರೆ ಊರಿಗಳಿಗೆ ಹೋಗುವವರೇ ಹೆಚ್ಚಿದ್ದರು. ಆದರೆ ಈಗ ಇಡೀ ದೇಶದಿಂದ ಕೆಲಸಕ್ಕಾಗಿ ಜನರೆಲ್ಲಾ ಬೆಂಗಳೂರಿಗೆ (Bangalore) ವಲಸೆ ಬಂದಿದ್ದಾರೆ. ಯಾಕೆಂದರೆ ಇಲ್ಲಿನ ಉದ್ಯೋಗ, ಜೀವನ, ರಾತ್ರಿ ಜೀವನ ಎಲ್ಲವೂ ಜನರನ್ನು ಬೆಂಗಳೂರಿನತ್ತೆ ಸೆಳೆಯುತ್ತೆ. ಯಾವೆಲ್ಲಾ ಕಾರಣಗಳು ಬೆಂಗಳೂರನ್ನು ವಾಸಿಸೋಕೆ ಯೋಗ್ಯವಾದ ಸ್ಥಳವಾಗಿಸಿದೆ ಅನ್ನೋದನ್ನು ತಿಳಿಯೋಣ ಬನ್ನಿ. 
 

ಕೆಲವು ವರ್ಷಗಳ ಹಿಂದೆ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ನಮ್ಮ ದೇಶದಲ್ಲಿ ಯಾವ ನಗರವು ವಾಸಿಸಲು ಬೆಸ್ಟ್ ತಾಣವಾಗಿದೆ ಅನ್ನೋ ಲಿಸ್ಟ್ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ 111 ನಗರಗಳಿದ್ದವು, ನಂತರ ಈಸ್ ಆಫ್ ಲಿವಿಂಗ್ ಇಂಡೆಕ್ಸ್ (Ease of living Index) ಆಧಾರದ ಮೇಲೆ ಶ್ರೇಯಾಂಕ ನೀಡಲಾಯಿತು, ಇದರಲ್ಲಿ ಬೆಂಗಳೂರನ್ನು ವಾಸಿಸಲು ದೇಶದ ಅತ್ಯುತ್ತಮ ನಗರವೆಂದು ಪರಿಗಣಿಸಲಾಗಿದೆ. ಇಷ್ಟೇ ಅಲ್ಲ, ಗ್ಲೋಬಲ್ ಸರ್ವೇ ವರದಿ ಪ್ರಕಾರ ದಕ್ಷಿಣ ಭಾರತದ ಸಿಲಿಕಾನ್ ವ್ಯಾಲಿ ಮತ್ತು ತಂತ್ರಜ್ಞಾನ ಕೇಂದ್ರ ಬೆಂಗಳೂರು ದೆಹಲಿ-ಮುಂಬೈ, ಕೋಲ್ಕತಾ ಮತ್ತು ಚೆನ್ನೈನಂತಹ ಇತರ ಮೆಟ್ರೋ ನಗರಗಳಿಗಿಂತ ಉತ್ತಮ ರೇಟಿಂಗ್ ಪಡೆದಿದೆ.
 

Latest Videos


ಬೆಂಗಳೂರು ಬಹಳ ಕಡಿಮೆ ಅವಧಿಯಲ್ಲಿ ಹೊಸ ಸಾಧನೆಗಳನ್ನು ಮಾಡಿದೆ. ಉದ್ಯೋಗಕ್ಕಾಗಿ ಹೆಚ್ಚಿನ ಜನರು ದೆಹಲಿ-ಮುಂಬೈ ತೊರೆದು ಬೆಂಗಳೂರಿನಲ್ಲಿ ನೆಲೆಸಲು ಇಷ್ಟಪಡ್ತಿರೋದೇ ಇಲ್ಲಿನ ಲೈಫ್ ಸ್ಟೈಲ್ ನಿಂದಾಗಿ. ಜನರು ದೇಶದ ಇತರ ದೊಡ್ಡ ನಗರಗಳಿಗಿಂತ ಬೆಂಗಳೂರಿನಲ್ಲಿ ವಾಸಿಸಲು ಆದ್ಯತೆ ನೀಡುತ್ತಿದ್ದಾರೆ. ಯಾವೆಲ್ಲ ಕಾರಣಕ್ಕೆ ಬೆಂಗಳೂರು ನೆಲೆಸಲು ಯೋಗ್ಯ ಸ್ಥಳವಾಗಿದೆ ಅನ್ನೋದನ್ನು ತಿಳಿಯೋಣ. 
 

ನಗರದ ರಾತ್ರಿ ಜೀವನ  (Night Life of the City)
ಮುಂಬೈನ ನೈಟ್ ಲೈಫ್, ಅಲ್ಲಿನ ಜನರ ಜೀವನದಿಂದಾಗಿ ಅದನ್ನ ಕನಸಿನ ನಗರಿ (Dream City) ಎಂದು ಕರೆಯಲಾಗುತ್ತದೆ ಅಲ್ವಾ?  ಮುಂಬೈನ ರಾತ್ರಿ ಜೀವನವು ತುಂಬಾನೆ ಇಂಟ್ರೆಸ್ಟಿಂಗ್ ಆಗಿರುತ್ತೆ. ಅದೇ ಮುಂಬೈನಂತೆ, ಬೆಂಗಳೂರಿನ ರಾತ್ರಿ ಜೀವನವು ಪಾರ್ಟಿ ಲೈಫ್ ಗೆ ಪ್ರಸಿದ್ಧ. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ನೈಟ್ ಪಬ್ ಗಳ ಸಂಖ್ಯೆ ನೋಡಿದ್ರೆ, ಇಲ್ಲಿ ರಾತ್ರಿಯೇ ಇಲ್ಲವೇನೋ ಅನಿಸುತ್ತೆ. ಅದಕ್ಕಾಗಿಯೇ ಯುವ ಜನರ ಫೇವರಿಟ್ ನಗರಗಳ ಲಿಸ್ಟ್ ನಲ್ಲಿ ಬೆಂಗಳೂರಿಗೆ ಪ್ರಮುಖ ಸ್ಥಾನ ಇದೆ. 
 

ಮಹಿಳೆಯರಿಗೆ ಸುರಕ್ಷಿತ (Safe City for Women)
ಬೆಂಗಳೂರನ್ನು ಭಾರತದ ಅತ್ಯಂತ ಸುರಕ್ಷಿತ ನಗರ ಅಲ್ಲ ಅನ್ನೋದು ನಿಜ. ಆದರೆ ಇದು ಭಾರತದ ಇತರ ನಗರಗಳಿಗಿಂತ ಸುರಕ್ಷಿತವಾಗಿದೆ. ಅಷ್ಟೇ ಅಲ್ಲದೇ ಮಹಿಳೆಯರಿಗೆ ಹೆಚ್ಚು ಸುರಕ್ಷಿತವಾದ ನಗರವಾಗಿದೆ. ಜಾಗತಿಕ ಸಮೀಕ್ಷೆಯ ಪ್ರಕಾರ, ಬೆಂಗಳೂರು ಭಾರತದ ಸುರಕ್ಷಿತ ನಗರ ಮತ್ತು ವಿದೇಶಿ ನಾಗರಿಕರಿಗೆ ಸ್ನೇಹಪರ ನಗರವಾಗಿ ಮೂರನೇ ಸ್ಥಾನದಲ್ಲಿದೆ.

ಉದ್ಯೋಗಕ್ಕೆ ಉತ್ತಮ ನಗರ (Best City for Employment)
ಕರ್ನಾಟಕದ ರಾಜಧಾನಿ ಬೆಂಗಳೂರು ಈ ಹಿಂದೆ ಉತ್ತರ ಭಾರತೀಯರಿಗೆ ತಿರುಗಾಡಲು ನೆಚ್ಚಿನ ತಾಣವಾಗಿತ್ತು ಅಷ್ಟೇ. ಆದರೆ ಕ್ರಮೇಣ ಈ ನಗರವು ಸಿಲಿಕಾನ್ ಸಿಟಿಯಾಗಿ, ಐಟಿ ಕಂಪನಿಗಳ ರಾಜಧಾನಿಯಾಗಿ ಅಭಿವೃದ್ಧಿ ಹೊಂದಿತು. ಈಗ ಸ್ಥಳೀಯರನ್ನು ಹೊರತುಪಡಿಸಿ, ಇತರ ರಾಜ್ಯಗಳ, ವಿಶೇಷವಾಗಿ ಉತ್ತರ ಭಾರತದ ಹೆಚ್ಚಿನ ಸಂಖ್ಯೆಯ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಬೆಂಗಳೂರು ವಿಶ್ವದಲ್ಲೇ ಎ1 ಕಂಪನಿಗಳನ್ನು ಹೊಂದಿದ್ದು, ಲಕ್ಷಾಂತರ ಜನರಿಗೆ ಉದ್ಯೋಗ ನೀಡುತ್ತಿದೆ.

ಕಡಿಮೆ ಮಾಲಿನ್ಯದ ನಗರಗಳು (Low Pollution) 
ಬೆಂಗಳೂರಲ್ಲಿ ದುಡಿಯುವವರು, ಕೆಲಸ ಅರಸಿ ಬಂದವರ ಸಂಖ್ಯೆ ದೊಡ್ಡದಿದೆ. ಈ ನಗರವು ಸಂಚಾರದ ದೃಷ್ಟಿಯಿಂದ ತುಂಬಾ ಕಾರ್ಯನಿರತವಾಗಿದೆ. ಹೀಗಿರೋವಾಗ ಇಲ್ಲಿ ಹೆಚ್ಚು ಮಾಲಿನ್ಯ ಇದೆ ಎಂದು ನೀವು ಯೋಚನೆ ಮಾಡಬಹುದು. ಆದರೆ ಭಾರತದ ಇತರ ಜನನಿಬಿಡ ನಗರಗಳಿಗೆ ಹೋಲಿಸಿದರೆ, ಬೆಂಗಳೂರಿನಲ್ಲಿ ಮಾಲಿನ್ಯ ತುಂಬಾ ಕಡಿಮೆ. ಆದ್ದರಿಂದ, ಇಲ್ಲಿನ ಜನರು ಇತರ ನಗರಗಳಿಗಿಂತ ಕಡಿಮೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ.
 

ಹವಾಮಾನ ಮತ್ತು ಆಹಾರ ಬೆಸ್ಟ್ (Best food and weather)
ಹವಾಮಾನದ ದೃಷ್ಟಿಯಿಂದ ಬೆಂಗಳೂರು ಮಿಲಿಯನ್ ಪಟ್ಟು ಉತ್ತಮ. ಬೆಂಗಳೂರಿನ ಹವಾಮಾನವು ವರ್ಷಪೂರ್ತಿ ತುಂಬಾ ಆಹ್ಲಾದಕರವಾಗಿರುತ್ತದೆ. ಇದು ತುಂಬಾ ಬಿಸಿಯೂ ಅಲ್ಲ ಅಥವಾ ತುಂಬಾ ತಂಪೂ ಕೂಡ ಅಲ್ಲ. ನೀವು ಬಯಸಿದರೆ, ನೀವು ಇಲ್ಲಿ ಫ್ಯಾನ್ ಗಾಳಿಯಲ್ಲಿ ಇಡೀ ವರ್ಷವನ್ನು ಕಳೆಯಬಹುದು. ನೀವು ಮಧ್ಯಮ ಹವಾಮಾನವನ್ನು ಬಯಸಿದರೆ, ಬೆಂಗಳೂರು ನಿಮಗೆ ಉತ್ತಮ ಆಯ್ಕೆ. ಇಲ್ಲಿನ ಆಹಾರದ ಬಗ್ಗೆ ಮಾತನಾಡುವುದಾದರೆ, ದಕ್ಷಿಣ ಭಾರತದ ಹೊರತಾಗಿ, ಉತ್ತರ ಭಾರತೀಯ ಆಹಾರಗಳನ್ನು ಸಹ ನೀವಿಲ್ಲಿ ಸವಿಯಬಹುದು.

ಸಂಸ್ಕೃತಿ ಮತ್ತು ಧರ್ಮ (Culture and Religion)
ಇತರರಿಗೆ ಗೌರವ ನೀಡುವಲ್ಲಿ ಬೆಂಗಳೂರಿನ ಜನರು ಬಹಳ ಮುಂದಿದ್ದಾರೆ. ಇಲ್ಲಿ 14% ತೆಲುಗು, 10% ಕೇರಳಿಗರು, 25% ತಮಿಳು, 8% ಯುರೋಪಿಯನ್ ಮತ್ತು 6% ವಿವಿಧ ಜಾತಿಗಳ ಜನರು ವಾಸಿಸುತ್ತಿದ್ದಾರೆ. ನಗರವು ತುಂಬಾನೆ ಕಲರ್ ಫುಲ್ ಆಗಿದೆ. ಕಲಾವಿದ-ಸಂಗೀತಗಾರರು ಮತ್ತು ಕಾಮಿಡಿಯನ್ ಗಳು ಪ್ರತಿದಿನ ತಮ್ಮ ಅತ್ಯುತ್ತಮ ಪ್ರದರ್ಶನಗಳಿಂದ ಜನರನ್ನು ಮೋಡಿ ಮಾಡುತ್ತಾರೆ. ಪ್ರತಿದಿನವೂ ಒಂದಿಲ್ಲ ಒಂದು ಮನಸೂರೆಗೊಳ್ಳುವ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. ಅಷ್ಟೇ ಅಲ್ಲ, ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಭಾರತದ ಅತ್ಯಂತ ಜನಪ್ರಿಯ ಎನ್ ಜಿಒ ಆಗಿದೆ. 

click me!