ಈ ಬುಡಕಟ್ಟು ಜನಾಂಗದಲ್ಲಿ ಅಣ್ಣನನ್ನೇ ತಂಗಿ ಮದ್ವೆ ಆಗ್ತಾಳೆ… ಉಲ್ಲಂಘಿಸಿದ್ರೆ ಕಠಿಣ ಶಿಕ್ಷೆ!

Published : Feb 28, 2024, 04:08 PM IST

ಭಾರತದಲ್ಲಿ, ಸಹೋದರ ಮತ್ತು ಸಹೋದರಿಯ ನಡುವಿನ ಸಂಬಂಧವನ್ನು ಬಹಳ ಗೌರವದಿಂದ ನೋಡಲಾಗುತ್ತದೆ, ನಮ್ಮ ಸಂಸ್ಕೃತಿಯಲ್ಲಿ, ಹಿರಿಯ ಸಹೋದರಿಯನ್ನು ತಾಯಿಯಾಗಿ ನೋಡಲಾಗುತ್ತದೆ, ಆದರೆ ಇದೇ ನಮ್ಮ ದೇಶದಲ್ಲಿ ಅಣ್ಣ ತಂಗಿ ಮದುವೆಯಾಗೋ ಸಂಪ್ರದಾಯವೂ ಇದೆ.  

PREV
18
ಈ ಬುಡಕಟ್ಟು ಜನಾಂಗದಲ್ಲಿ ಅಣ್ಣನನ್ನೇ ತಂಗಿ ಮದ್ವೆ ಆಗ್ತಾಳೆ… ಉಲ್ಲಂಘಿಸಿದ್ರೆ ಕಠಿಣ ಶಿಕ್ಷೆ!

ಮದುವೆ ಬಂಧವು, (Marriage) ಇಬ್ಬರು ವ್ಯಕ್ತಿಗಳನ್ನು ಜೀವನ ಪರ್ಯಂತ ಜೊತೆಯಾಗಿರುವಂತೆ ಮಾಡುತ್ತದೆ. ಮದುವೆಗೆ ಸಂಬಂಧಿಸಿದಂತೆ ಪ್ರಪಂಚದಾದ್ಯಂತ ವಿವಿಧ ರೀತಿಯ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಸಹ ನಡೆಸಲಾಗುತ್ತದೆ, ಇದನ್ನು ಜನರು ಪ್ರಾಚೀನ ಕಾಲದಿಂದಲೂ ಅನುಸರಿಸುತ್ತಿದ್ದಾರೆ., ಜಗತ್ತಿನಲ್ಲಿ  ಇನ್ನೂ ಕೆಲವು ಸಂಪ್ರದಾಯಗಳಿವೆ, ಅವುಗಳ ಬಗ್ಗೆ ತಿಳಿದುಕೊಂಡ್ರೆ ನಿಮಗೆ ಶಾಖ್ ಆಗೋದು ಖಚಿತ. 

28

ಭಾರತದಲ್ಲಿ, ಸಹೋದರ ಮತ್ತು ಸಹೋದರಿಯ (borther and sister) ನಡುವಿನ ಸಂಬಂಧವನ್ನು ಬಹಳ ಗೌರವದಿಂದ ನೋಡಲಾಗುತ್ತದೆ, ನಮ್ಮ ಸಂಸ್ಕೃತಿಯಲ್ಲಿ, ಹಿರಿಯ ಸಹೋದರಿಯನ್ನು ತಾಯಿಯಾಗಿ ನೋಡಲಾಗುತ್ತದೆ, ಮತ್ತು ಕಿರಿಯ ಸಹೋದರಿಯನ್ನು ಮಗಳಾಗಿ ಕಾಣಲಾಗುತ್ತದೆ. ಇದೇ ಸಂಪ್ರದಾಯ ಹೊಂದಿರುವ ನಮ್ಮ ದೇಶದಲ್ಲಿ ಸಹೋದರ ಮತ್ತು ಸಹೋದರಿಯ ಮದುವೆ ನಡೆಯುವ ಸಂಪ್ರದಾಯವೂ ಇದೆ ಅನ್ನೋದನ್ನು ನೀವು ನಂಬಲೇಬೇಕು.
 

38

ಇಂದು ನಾವು ಛತ್ತೀಸ್ಗಢದ ಒಂದು ಬುಡಕಟ್ಟು ಜನಾಂಗದವರ (tribes of Chattisgarh) ಅಂತಹ ಒಂದು ವಿಚಿತ್ರ ಸಂಪ್ರದಾಯದ ಬಗ್ಗೆ ನಿಮಗೆ ಹೇಳಲಿದ್ದೇವೆ, ಈ ಸಂಪ್ರದಾಯದ ಬಗ್ಗೆ ತಿಳಿದರೆ, ನಮ್ಮ ದೇಶದಲ್ಲಿ ಹೀಗೂ ನಡೆಯುತ್ತಾ ಎಂದು ನಿಮಗೂ ಅಚ್ಚರಿಯಾಗಬಹುದು. ಬನ್ನಿ ಮದುವೆಗೆ ಸಂಬಂಧಿಸಿದಂತೆ ಛತ್ತೀಸ್ ಗಢದಲ್ಲಿ ನಡೆಯುವ ಈ ವಿಚಿತ್ರ ಸಂಪ್ರದಾಯದ ಬಗ್ಗೆ ತಿಳಿದುಕೊಳ್ಳೋಣ.
 

48

ಛತ್ತೀಸ್ ಗಢದ ಬುಡಕಟ್ಟು ಜನಾಂಗದಲ್ಲಿ ಧುರುವಾ ಎಂಬ ಬುಡಕಟ್ಟು (Dhurwa Tribes) ಜನಾಂಗವಿದೆ. ಈ ಬುಡಕಟ್ಟಿನಲ್ಲಿ, ಒಡಹುಟ್ಟಿದವರು ಅಂದರೆ ಅಣ್ಣ ತಂಗಿ ಪರಸ್ಪರ ಮದುವೆಯಾಗುತ್ತಾರೆ. ಇದನ್ನು ಮಾಡಲು ಕಾರಣವೂ ಇದೆಯಂತೆ, ಯಾಕಂದ್ರೆ ತನ್ನ ಬುಡಕಟ್ಟು ಜನಾಂಗದ ಸಂಖ್ಯೆಯನ್ನು ಹೆಚ್ಚಿಸಲು ಇಲ್ಲಿನ ಜನರು ಅಣ್ಣ ತಂಗಿಯನ್ನೇ ಮದುವೆಯಾಗ್ತಾರಂತೆ.  
 

58

ಈ ಸಮುದಾಯದಲ್ಲಿ ಯಾರಾದರೂ ಈ ರೀತಿಯಾಗಿ ಮದುವೆಯಾಗಲು ನಿರಾಕರಿಸಿದರೆ, ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಅಂತಹ ಸಂಸ್ಕೃತಿಯು ಸಮಾಜದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆಯಾದರೂ, ಸಮಾಜದ ಜನರು ತಮ್ಮ ಸ್ವಾರ್ಥ ಹಿತಾಸಕ್ತಿಗಳನ್ನು ಮುಂದುವರಿಸಲು ಇಂತಹ ಸಂಪ್ರದಾಯವನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿರುವುದು ವಿಪರ್ಯಾಸವೇ ಸರಿ.
 

68

ಭಾರತೀಯ ಸಂಪ್ರದಾಯದಲ್ಲಿ, ವಿವಾಹ ಪದ್ಧತಿ ಬಹಳ ಮುಖ್ಯ. ಭಾರತದ ಬಹುತೇಕ ಎಲ್ಲಾ ಸ್ಥಳಗಳಲ್ಲಿ, ಗೋತ್ರ ಸೇರದಿದ್ದರೆ ಮದುವೆಯಾಗಲ್ಲ, ಗೋತ್ರ ಒಂದೇ ರೀತಿ ಇದ್ದರೂ ಕೆಲವೊಮ್ಮೆ ಮದುವೆಯಾಗೋದಿಲ್ಲ. ಅದರಲ್ಲೂ ಒಂದೇ ಗೋತ್ರದ ಜನರನ್ನು ಸಹೋದರರು ಎಂದೇ ಹೇಳುತ್ತಾರೆ. ಅಂತದ್ದರಲ್ಲಿ ಈ ಜನಾಂಗದವರು ಸ್ವಂತ ತಂಗಿಯನ್ನೇ ಮದುವೆಯಾಗುತ್ತಾರೆ. 
 

78

ಸನಾತನ ಧರ್ಮವನ್ನು (Sanatana Dharma) ನಂಬುವ ಜನರು ಸಹೋದರ ಮತ್ತು ಸಹೋದರಿಯರ ಸಂಬಂಧವನ್ನು ಪವಿತ್ರ ಸಂಬಂಧವೆಂದು ನೋಡುತ್ತಾರೆ. ಆದರೆ ಭಾರತದಲ್ಲಿ ನಮ್ಮದೇ ಆದ ಸಂಸ್ಕೃತಿಯಲ್ಲಿ, ಸಹೋದರ ಮತ್ತು ಸಹೋದರಿಯರ ನಡುವೆ ಮದುವೆ ನಡೆಯುವ ಸಮಾಜ ಇದೆ ಅನ್ನೋದು ನಿಜಕ್ಕೂ ಅಚ್ಚರಿ. 
 

88

ಸಹೋದರ ಮತ್ತು ಸಹೋದರಿಯನ್ನು ಮದುವೆಯಾಗುವುದರ ಹೊರತಾಗಿ, ಈ ಹಳ್ಳಿಯ ಜನರು ಮತ್ತೊಂದು ವಿಚಿತ್ರ ಸಂಪ್ರದಾಯವನ್ನು ನಂಬುತ್ತಾರೆ. ವಧು ಮತ್ತು ವರನನ್ನು ಬೆಂಕಿಯಿಂದ ಅಲ್ಲ, ಆದರೆ ನೀರನ್ನು ಸಾಕ್ಷಿಯಾಗಿ ಪರಿಗಣಿಸಿ ಮದುವೆ ಮಾಡೀಸುತ್ತಾರೆ. ಇಲ್ಲಿ, ಎಲ್ಲಾ ಸಂದರ್ಭದಲ್ಲಿ ನೀರು ಮತ್ತು ಮರಗಳನ್ನು ಮಾತ್ರ ಪೂಜಿಸಲಾಗುತ್ತದೆ. ಇದಲ್ಲದೆ, ನೀರಿಗೆ ಪ್ರದಕ್ಷಿಣೆ ಹಾಕುವಾಗ ಇಡೀ ಗ್ರಾಮವು ವಧು ಮತ್ತು ವರನನ್ನು ಸೇರಿಕೊಳ್ಳುತ್ತದೆ. ವಿಚಿತ್ರ ಅನಿಸಿದ್ರು ನಿಜವಾಗಿಯೂ ನಡೆಯುತ್ತೆ ಈ ಸಂಪ್ರದಾಯ. 
 

Read more Photos on
click me!

Recommended Stories