ಲೋನಾವಾಲಾ ಮತ್ತು ಖಂಡಾಲಾ:
ಸಹ್ಯಾದ್ರಿ ಶ್ರೇಣಿಯ ನೆಲೆಸಿರುವ ಲೋನಾವಲದಲ್ಲಿ ಮತ್ತು ಖಂಡಾಲ ಗಿರಿಧಾಮಗಳು ಚಿತ್ರ ಸದೃಶವಾದ ಭೂದೃಶ್ಯಗಳು, ಮಂಜಿನ ಕಣಿವೆಗಳು ಮತ್ತು ಜಲಪಾತಗಳಿಂದ ಕೂಡಿದೆ.
ಮಹಾಬಲೇಶ್ವರ:
ಮಹಾಬಲೇಶ್ವ ಉಸಿರು ಕಟ್ಟುವ ವ್ಯೂ ಪಾಯಿಂಟ್‌ಗಳು ಮತ್ತು ಸ್ಟ್ರಾಬೆರಿ ಫಾರ್ಮ್‌ಗಳೊಂದಿಗೆ ಸಮೃದ್ಧ ಹಸಿರಿಗೆ ಹೆಸರುವಾಸಿ. ಮಹಾಬಲೇಶ್ವರವು ಮಹಾರಾಷ್ಟ್ರದ ಅತ್ಯಂತ ಜನಪ್ರಿಯ ಗಿರಿಧಾಮಗಳಲ್ಲಿ ಒಂದಾಗಿದೆ.
ಮಾಥೆರಾನ್:
ಮಾಥೆರಾನ್ ಹಿಲ್ ಸ್ಟೇಷನ್ ತನ್ನ ಪ್ರಶಾಂತ ವಾತಾವರಣ ಮತ್ತು ವಿಂಟೇಜ್ ಮೋಡಿಯೊಂದಿಗೆ ಸಂದರ್ಶಕರನ್ನು ತನ್ನ ಕಡೆ ಸೆಳೆಯುತ್ತದೆ. ಹಸಿರಿನ ನಡುವೆ ವಾಕ್, ಕುದುರೆ ಸವಾರಿ ಮತ್ತು ಪನೋರಮಾ ಪಾಯಿಂಟ್ ಮತ್ತು ಎಕೋ ಪಾಯಿಂಟ್‌ನಂತಹ ವ್ಯೂ ಪಾಯಿಂಟ್‌ಗಳಿಂದ ವಿಹಂಗಮ ನೋಟಗಳನ್ನು ಇಲ್ಲಿ ಆನಂದಿಸಬಹುದು.
ಪಂಚಗಣಿ:
ಪಂಚಗಣಿ ಪಶ್ಚಿಮ ಘಟ್ಟಗಳಲ್ಲಿನ 5 ಬೆಟ್ಟಗಳ ನಡುವೆ ಇರುವ ಪಂಚಗಣಿ ತನ್ನ ಸೊಂಪಾದ ಕಣಿವೆ, ಸ್ಟ್ರಾಬೆರಿ ಫಾರ್ಮ್‌ಗಳು ಮತ್ತು ವಸಾಹತುಶಾಹಿ ಯುಗದ ವಾಸ್ತುಶಿಲ್ಪಕ್ಕೆ ಹೆಸರುವಾಸಿ.
ಭಂಡಾರದಾರ:
ಸಹ್ಯಾದ್ರಿ ಶ್ರೇಣಿಯಲ್ಲಿ ದೂರದಲ್ಲಿರುವ ಭಂಡಾರದಾರವು ಪ್ರಶಾಂತವಾದ ಗಿರಿಧಾಮವಾಗಿದ್ದು, ಪ್ರಶಾಂತವಾದ ಸರೋವರಗಳು, ಧುಮ್ಮಿಕ್ಕುವ ಜಲಪಾತಗಳು ಮತ್ತು ಹಚ್ಚ ಹಸಿರಿನಿಂದ ತುಂಬಿದೆ.
ಇಗತ್ಪುರಿ:
ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಇಗತ್‌ಪುರಿ ತನ್ನ ರಮಣೀಯ ಸೌಂದರ್ಯ ಮತ್ತು ಭವ್ಯ ಪರ್ವತಗಳಿಗೆ ಹೆಸರುವಾಸಿಯಾಗಿದೆ. ಭಟ್ಸಾ ನದಿ ಕಣಿವೆ, ಕಲ್ಸುಬಾಯಿ ಶಿಖರ ಮತ್ತು ತ್ರಿಂಗಲ್ವಾಡಿ ಕೋಟೆಯಂತಹ ಸ್ಥಳಗಳಿಗೆ ಭೇಟಿ ನೀಡಬಹುದು.
ಮಲ್ಶೆಜ್ ಘಾಟ್‌ಗಳು:
ಮಲ್ಶೆಜ್ ಘಾಟ್‌ಗಳ ಸಮೃದ್ಧವಾದ ಜಲಪಾತಗಳು, ಮೌಂಟನ್ ವ್ಯೂವ್ ಮತ್ತು ಸರೋವರಗಳು ಈ ಸ್ಥಳಕ್ಕೆ ಪದೇ ಪದೇ ಭೇಟಿ ನೀಡಲು ಬಯಸುವಂತೆ ಮಾಡುತ್ತದೆ.