ಯಾವ ರಾಜ್ಯವನ್ನು ಭಾರತದ ಜಪಾನ್ ಎನ್ನಲಾಗುತ್ತೆ ಗೊತ್ತಾ?

Published : Mar 04, 2024, 05:06 PM IST

ಯಾವ ರಾಜ್ಯವನ್ನು ಜಪಾನ್ ಎಂದು ಕರೆಯಲಾಗುತ್ತದೆ? ಈ ಪ್ರಶ್ನೆಗೆ ಹೆಚ್ಚಿನ ಜನರಿಗೆ ಉತ್ತರ ತಿಳಿದಿರುವುದಿಲ್ಲ, ಉತ್ತರವನ್ನು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ, ಯಾಕೆ ಜಪಾನ್ ಅಂತ ಕರೆಯುತ್ತಾರೆ ಎನ್ನುವ ಕಾರಣವೂ ಆಸಕ್ತಿದಾಯಕವಾಗಿದೆ ...  

PREV
17
ಯಾವ ರಾಜ್ಯವನ್ನು ಭಾರತದ ಜಪಾನ್ ಎನ್ನಲಾಗುತ್ತೆ ಗೊತ್ತಾ?

ವಿಶ್ವದ ಮೊದಲ ಸೂರ್ಯನ ಕಿರಣವು ಜಪಾನ್ (Land of Rising Sun) ಅನ್ನು ತಲುಪುತ್ತದೆ ಎಂದು ನೀವು ಕೇಳಿರಬಹುದು. ಅಂತೆಯೇ, ಭಾರತದ ಯಾವ ಹಳ್ಳಿಯಲ್ಲಿ ಮೊದಲ ಸೂರ್ಯೋದಯ ಆಗುತ್ತೆ ಗೊತ್ತಾ? ಗ್ರಾಮದ ಹೆಸರೇನು ಮತ್ತು ಅದು ಯಾವ ರಾಜ್ಯಕ್ಕೆ ಸೇರಿದೆ? ಈ ಪ್ರಶ್ನೆಗೆ ಉತ್ತರಿಸುವಲ್ಲಿ ಅನೇಕ ಜನರು ಗೊಂದಲಕ್ಕೊಳಗಾಗಿದ್ದಾರೆ. ನಿಮಗೆ ಉತ್ತರ ತಿಳಿದಿದೆಯೇ?

27

ಯಾವುದೇ ಕೆಲಸಕ್ಕಾಗಿ ಟೆಸ್ಟ್ ಬರೆಯುವಾಗ ಅದು ಸರ್ಕಾರಿ ಅಥವಾ ಖಾಸಗಿಯಾಗಿರಲಿ, ಸಾಮಾನ್ಯ ಜ್ಞಾನವು (General Knowledge) ಬಹಳ ಮುಖ್ಯ ಅನ್ನೋದು ತಿಳಿದೇ ಇದೆ. ಯಾವುದೇ ಉದ್ಯೋಗ ಪರೀಕ್ಷೆಯಲ್ಲಿ ಜಿಕೆ ಇದ್ದೇ ಇರುತ್ತೆ. ಹೀಗಿರೋವಾಗ ನೀವು ಒಂದಿಷ್ಟು ಸಾಮಾನ್ಯ ಜ್ಞಾನವನ್ನು ತಿಳಿದುಕೊಂಡಿರೋದು ತುಂಬಾನೆ ಮುಖ್ಯ ಅಲ್ವ? 
 

 


 

37

ಇಂತಹ ಪರೀಕ್ಷೆಗಳಲ್ಲಿ ಕೇಳಲಾಗುವ ಒಂದು ಪ್ರಶ್ನೆಯ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ ಅದೇನೆಂದರೆ ಭಾರತದ ಯಾವ ರಾಜ್ಯದಲ್ಲಿ ಸೂರ್ಯನು ಮೊದಲು ಉದಯಿಸುತ್ತಾನೆ? ಆ ಹಳ್ಳಿಯ ಹೆಸರೇನು? ಮೊದಲ ಸೂರ್ಯೋದಯ ಅಥವಾ ಸೂರ್ಯೋದಯದ ನಾಡು ಎಂದಾಗ ನೆನಪಾಗೋದು ಜಪಾನ್ ಅಲ್ವಾ? ಹಾಗಾಗಿ ಭಾರತದ ಈ ತಾಣವನ್ನು ಭಾರತದ ಜಪಾನ್ ಎಂದು ಕರೆಯುತ್ತಾರೆ. 

47

ಹಾಗಿದ್ರೆ ಭಾರತ ಜಪಾನ್ ಯಾವುದು? ಉತ್ತರ ಗೊತ್ತ? ಇಲ್ಲ ಅಂದ್ರೆ ಉತ್ತರವನ್ನು ಸಹ ತಿಳಿದುಕೊಳ್ಳೋಣ. ಭಾರತದ ಮೊದಲ ಸೂರ್ಯೋದಯವು ಅರುಣಾಚಲ ಪ್ರದೇಶದಲ್ಲಿ (Arunachal Pradesh) ಕಂಡುಬರುತ್ತದೆ. ಅರುಣಾಚಲ ಪ್ರದೇಶ ರಾಜ್ಯದ ಅಂಜಾವೊ ಜಿಲ್ಲೆಯ ಡಾಂಗ್ (Dung) ಎಂಬ ಸಣ್ಣ ಹಳ್ಳಿಯು ನಮ್ಮ ದೇಶದ ಮೊದಲ ಸೂರ್ಯೋದಯಕ್ಕೆ ಸಾಕ್ಷಿಯಾಗಿದೆ.  
 

 

57

ಡಾಂಗ್ ಹಳ್ಳಿಯು ಸಮುದ್ರ ಮಟ್ಟದಿಂದ 1,240 ಮೀಟರ್ ಎತ್ತರದಲ್ಲಿರುವ ಅರುಣಾಚಲ ಪ್ರದೇಶದ ಅಂಜೋಯ್ ನದಿ-ಬೆಟ್ಟಗಳಿಂದ ಸುತ್ತುವರೆದಿರುವ ಒಂದು ಹಳ್ಳಿ. 1999 ರಲ್ಲಿ ಮೊದಲ ಬಾರಿಗೆ, ಭಾರತದ ಪೂರ್ವದ ತುದಿಯಲ್ಲಿರುವ ಈ ಹಳ್ಳಿಯಲ್ಲಿ ದಿನದ ಮೊದಲ ಸೂರ್ಯ ಉದಯಿಸುತ್ತಾನೆ ಎಂದು ತಿಳಿದುಬಂದಿದೆ. ನಂತರ ಈ ಬೆಳಕು ನಿಧಾನವಾಗಿ ಹರಡುತ್ತದೆ.

67

ಚೀನಾ ಮತ್ತು ಮ್ಯಾನ್ಮಾರ್ ನಡುವೆ ಇರುವ ಈ ಗ್ರಾಮವು ಲೋಹಿತ್ ಮತ್ತು ಸತಿ ನದಿಗಳ ಸಂಗಮದ ಸ್ಥಳ, ಇದು ಇದನ್ನು ಇನ್ನಷ್ಟು ಸುಂದರಗೊಳಿಸುತ್ತದೆ. ಡಾಂಗ್ ನ ಈ ಸೂರ್ಯೋದಯವನ್ನು ನೋಡಲು, ಪ್ರವಾಸಿಗರು ಬೆಟ್ಟದ ಹಿಂಭಾಗದಲ್ಲಿರುವ ಈ ಗ್ರಾಮವನ್ನು ತಲುಪಲು ಕಾಲ್ನಡಿಗೆಯಲ್ಲಿ 8 ಕಿ.ಮೀ ಪ್ರಯಾಣಿಸಬೇಕು.
 

77

ಈ ಡಾಂಗ್ ಹಳ್ಳಿಯಲ್ಲಿ, ಸೂರ್ಯನು ದೇಶದ ಉಳಿದ ಭಾಗಗಳಿಗಿಂತ ಒಂದು ಗಂಟೆ ಮುಂಚಿತವಾಗಿ ಉದಯಿಸುತ್ತಾನೆ. ಸೂರ್ಯನು ಬೇಗನೆ ಉದಯಿಸುವುದರಿಂದ, ಸೂರ್ಯಾಸ್ತವೂ ಬೇಗನೆ ಆಗುತ್ತದೆ. ಚಳಿಗಾಲದಲ್ಲಿ, ಸೂರ್ಯನು ಬೆಳಿಗ್ಗೆ 5.54 ಕ್ಕೆ  ಉದಯಿಸಿದ್ರೆ ಮತ್ತು ಸೂರ್ಯಾಸ್ತವು ಸಂಜೆ 4.30 ಕ್ಕೆ ಆಗುತ್ತದೆ. ಈ ಗ್ರಾಮವು ದೇಶದಲ್ಲಿ ಮೊದಲ ಸೂರ್ಯೋದಯವನ್ನು ನೋಡಲು ಪ್ರವಾಸಿಗರಲ್ಲಿ ಬಹಳ ಜನಪ್ರಿಯವಾಗಿದೆ.
 

Read more Photos on
click me!

Recommended Stories