ಇಟಲಿ (Italy) ತನ್ನ ದೇಶದಲ್ಲಿ ನೆಲೆಸಲು ಜನರಿಗೆ ಒಂದು ಸುವರ್ಣಾವಕಾಶವನ್ನು ನೀಡುತ್ತಿದೆ. ಇಲ್ಲಿಗೆ ಹೋಗಿ ನೆಲೆಸಲು 92 ಲಕ್ಷ ರೂ.ಗಳನ್ನು ಅನುದಾನ ನೀಡಲಾಗುವುದು. ಇದು ಸುಳ್ಳಲ್ಲ ನಿಜಾ. ಆದಾರೆ ಷರತ್ತುಗಳು ಅನ್ವಯವಾಗಿದೆ.
ಉತ್ತರ ಇಟಲಿಯ ಸ್ವಾಯತ್ತ ಪ್ರಾಂತ್ಯವಾದ ಟ್ರೆಂಟಿನೊ (Trentino) ತನ್ನ ಹಳ್ಳಿಗಳಲ್ಲಿನ ಜನಸಂಖ್ಯಾ ಕುಸಿತವನ್ನು ಎದುರಿಸಲು ಆಕರ್ಷಕ ಪ್ರಸ್ತಾಪವನ್ನು ತಂದಿದೆ. ಈ ಹಳ್ಳಿಯಲ್ಲಿ ಜನಸಂಖ್ಯೆ ಸಿಕ್ಕಾಪಟ್ಟೆ ಕಡಿಮೆಯಾಗಿರೋದರಿಂದ , ಅದನ್ನ ಸರಿದೂಗಿಸಲು ಜನಗಳ ಅಗತ್ಯ ಇರೋದರಿಂದ ಈ ಪ್ರಸ್ತಾಪವನ್ನು ಇಟ್ಟಿದೆ.
ಆದರೆ ಅದಕ್ಕಾಗಿ ಒಂದಷ್ಟು ನಿಯಮಗಳನ್ನು ಪಾಲಿಸಬೇಕಾಗಿ ಬರುತ್ತೆ. ಇಲ್ಲಿನ ಸುಂದರ ಆಲ್ಪೈನ್ ಪ್ರದೇಶಕ್ಕೆ ತೆರಳಿ, ಅಲ್ಲಿ ನೆಲೆಸೋದಕ್ಕೆ ಜನ ಇಷ್ಟ ಪಡುತ್ತಿದ್ದರೆ, ಅಲ್ಲಿನ ಸರ್ಕಾರ 92 ಲಕ್ಷ ರೂ.ಗಳ (100,000 ಯುರೋಗಳು) ಒಂದು ಬಾರಿಯ ಅನುದಾನ ನೀಡುತ್ತೆ.
ಇದರಲ್ಲಿ 74 ಲಕ್ಷ ರೂ. (80,000 ಯುರೋಗಳು) ಆಸ್ತಿಯ ನವೀಕರಣಕ್ಕಾಗಿ ಮೀಸಲಿಡಲಾಗಿದ್ದು, 18.5 ಲಕ್ಷ ರೂ. (20,000 ಯುರೋಗಳು) ಆಸ್ತಿಯನ್ನು ಖರೀದಿಸುವ ವೆಚ್ಚಕ್ಕಾಗಿ ಖರ್ಚು ಮಾಡಲಾಗುವುದು. ಒಟ್ಟು ಹಣ ಅಲ್ಲಿ ಆಸ್ತಿಯನ್ನು ಖರೀದಿಸೋದಕ್ಕೆ ಮಾತ್ರ ಖರ್ಚು ಮಾಡೊದಕ್ಕೆ ಸಾಧ್ಯವಾಗೋದು. ಬೇರೆ ಕಾರಣಕ್ಕೆ ಇಲ್ಲಿ ಅನುದಾನದ ಹಣ ಖರ್ಚು ಮಾಡೋದಕ್ಕೆ ಸಾಧ್ಯ ಆಗೋದಿಲ್ಲ.
ಆದರೆ ಇಲ್ಲಿ ಮನೆ ಖರೀದಿ ಮಾಡಲು ಕೆಲವು ಷರತ್ತುಗಳಿವೆ, ಉದಾಹರಣೆಗೆ ಇಟಾಲಿಯನ್ ನಿವಾಸಿಗಳು ಅಥವಾ ವಿದೇಶದಲ್ಲಿ ವಾಸಿಸುವ ಇಟಾಲಿಯನ್ನರು ಮಾತ್ರ ಈ ಕೊಡುಗೆಗೆ ಅರ್ಹರು ಮತ್ತು ಆ ಪ್ರದೇಶದಲ್ಲಿ 10 ವರ್ಷಗಳ ಕಾಲ ಅವರು ವಾಸಿಸಬೇಕು ಅಥವಾ ಆ ಅವಧಿಯಲ್ಲಿ ಆಸ್ತಿಯನ್ನು ಬಾಡಿಗೆಗೆ ನೀಡಬೇಕು.
ಸ್ಥಳೀಯ ಸಮುದಾಯಗಳನ್ನು ಪುನರುಜ್ಜೀವನಗೊಳಿಸುವುದು ಮತ್ತು ಪ್ರಾದೇಶಿಕ ಏಕತೆಯನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ ಎಂದು ಟ್ರೆಂಟೊ ಅಧ್ಯಕ್ಷ ಮೌರಿಜಿಯೊ ಫುಗಾಟಿ ಹೇಳಿದ್ದಾರೆ.. ನಮ್ಮ ಕರ್ನಾಟಕದಲ್ಲಿ ಯಾರಾದ್ರೂ ಇಟಲಿ ಪ್ರಜೆಗಳಿದ್ರೆ, ಅವರಿಗೂ ಇದು ಉಪಯುಕ್ತವಾಗಿದೆ.