ಮಥುರಾದಲ್ಲಿರುವ ಈ 10 ಫೇಮಸ್ ಜಾಗಗಳನ್ನು ಮಿಸ್ ಮಾಡ್ದೇ ನೋಡಿ..
ಮಥುರಾದ ಟಾಪ್ ಜಾಗಗಳು: ಮಥುರಾದಲ್ಲಿ ಶ್ರೀ ಕೃಷ್ಣ ಜನ್ಮಭೂಮಿ ಮಂದಿರದಿಂದ ಹಿಡಿದು ವಿಶ್ರಾಮ್ ಘಾಟ್ ವರೆಗೆ, ತಿರುಗಾಡಲು ತುಂಬಾ ಇದೆ! ದೇವಸ್ಥಾನಗಳು ಮತ್ತು ಐತಿಹಾಸಿಕ ಸ್ಥಳಗಳ ಅನುಭವ ಪಡೆಯಿರಿ.
ಮಥುರಾದ ಟಾಪ್ ಜಾಗಗಳು: ಮಥುರಾದಲ್ಲಿ ಶ್ರೀ ಕೃಷ್ಣ ಜನ್ಮಭೂಮಿ ಮಂದಿರದಿಂದ ಹಿಡಿದು ವಿಶ್ರಾಮ್ ಘಾಟ್ ವರೆಗೆ, ತಿರುಗಾಡಲು ತುಂಬಾ ಇದೆ! ದೇವಸ್ಥಾನಗಳು ಮತ್ತು ಐತಿಹಾಸಿಕ ಸ್ಥಳಗಳ ಅನುಭವ ಪಡೆಯಿರಿ.
ಶ್ರೀ ಕೃಷ್ಣ ಜನ್ಮಭೂಮಿ ಮಂದಿರ ಮಥುರಾದ ಪ್ರಮುಖ ಸ್ಥಳ. ಇದು ಕೃಷ್ಣನ ಹುಟ್ಟಿದ ಜಾಗ ಅಂತಾರೆ. ಮಂದಿರದ ಆವರಣ ಶಾಂತವಾಗಿದೆ ಮತ್ತು ಭಕ್ತರಿಗೆ ಮುಖ್ಯ ತೀರ್ಥ ಕ್ಷೇತ್ರ.
ವಿಶ್ರಾಮ್ ಘಾಟ್, ಯಮುನಾ ನದಿ ತೀರದಲ್ಲಿರುವ ಪವಿತ್ರ ಘಾಟ್. ಕೃಷ್ಣನು ಕಂಸನನ್ನು ಸೋಲಿಸಿದ ನಂತರ ಇಲ್ಲಿ ವಿಶ್ರಾಂತಿ ತಗೊಂಡಿದ್ದ ಅಂತಾರೆ. ಇಲ್ಲಿ ಸಂಜೆ ಆರತಿ ಮಾಡ್ತಾರೆ, ಅದರಲ್ಲಿ ಎಣ್ಣೆ ದೀಪಗಳು ತೇಲುತ್ತವೆ.
ದ್ವಾರಕೆಯ ರಾಜನಾದ ಕೃಷ್ಣನಿಗೆ ಅರ್ಪಿತವಾದ ಈ ಮಂದಿರ ಅದರ ಸುಂದರ ಆರ್ಕಿಟೆಕ್ಚರ್ ಗೆ ಫೇಮಸ್. ಇದು ಮಥುರಾದ ಸಾಂಸ್ಕೃತಿಕ ವೈಭವ ತೋರಿಸುತ್ತೆ.
ಕುಸುಮ ಸರೋವರ ಹಚ್ಚ ಹಸಿರಿನ ಮರಗಳಿಂದ ಆವೃತವಾಗಿದೆ. ಇದು ಫೋಟೋಗ್ರಫಿಗೆ ಬೆಸ್ಟ್ ಆಯ್ಕೆ. ಜೊತೆಗೆ, ಇಲ್ಲಿ ನಿಮಗೆ ನಿಸರ್ಗ ಸಹಜವಾದ ಪ್ರಕೃತಿಯ ವಾತಾವರಣವಿದ್ದು ಆಹ್ಲಾದ ನೀಡುತ್ತದೆ.
ಗೋವರ್ಧನ ಪರ್ವತ ಅಥವಾ ಗಿರಿರಾಜ್ ವೃಂದಾವನದಿಂದ 22 ಕಿಲೋಮೀಟರ್ ದೂರದಲ್ಲಿದೆ. ಭಗವದ್ಗೀತೆಯಲ್ಲಿ ಹೇಳಿರುವ ಹಾಗೆ, ಕೃಷ್ಣನ ಪ್ರಕಾರ ಗೋವರ್ಧನ ಪರ್ವತ ಅವನಿಂದ ಬೇರೆಯಲ್ಲ. ಇದು ಭಕ್ತರು ಪ್ರದಕ್ಷಿಣೆ ಹಾಕಲು ಫೇಮಸ್ ಜಾಗ.
ಮಥುರಾ ಮ್ಯೂಸಿಯಂ ಅನ್ನು 1874 ರಲ್ಲಿ ಮಥುರಾ ಜಿಲ್ಲೆಯಲ್ಲಿ ಸ್ಥಾಪಿಸಲಾಯಿತು. ಇದು ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಮಾಹಿತಿ ನೀಡುತ್ತದೆ.
ಕಂಸ ಕೋಟೆಯನ್ನು ಐತಿಹಾಸಿಕ ಕೋಟೆ ಅಂತಾರೆ. ಇದು ರಾಜ ಕಂಸನ ವಾಸಸ್ಥಾನವಾಗಿತ್ತು. ಈ ಜಾಗ ಮಥುರಾದ ಹಳೆಯ ನೆನಪುಗಳನ್ನು ತೋರಿಸುತ್ತೆ.
ನಂದ ಭವನ ಕೃಷ್ಣನ ಸಾಕು ತಂದೆ ನಂದ ಬಾಬಾನ ಮನೆ. ಈ ಮಂದಿರದ ಆವರಣ ಅದರ ಸುಂದರ ಆರ್ಕಿಟೆಕ್ಚರ್ ಮತ್ತು ಶಾಂತ ವಾತಾವರಣಕ್ಕೆ ಹೆಸರುವಾಸಿಯಾಗಿದೆ.
ಚೌಕ್ ಬಜಾರ್ ಮಥುರಾದ ಗಿಜಿಗುಡುವ ಬಜಾರ್. ಇಲ್ಲಿಗೆ ಹೋದ್ರೆ ಸಾಂಪ್ರದಾಯಿಕ ಸಿಹಿ ತಿನಿಸುಗಳನ್ನ ಟ್ರೈ ಮಾಡಿ. ನೀವೆಂದೂ ನೋಡಿರದ ಸಿಹಿತಿಂಡಿಗಳು ಇಲ್ಲಿವೆ, ಒಮ್ಮೆನಾದ್ರೂ ಸವಿಯಿರಿ.
ಡಾಲ್ಫಿನ್ ವಾಟರ್ ವರ್ಲ್ಡ್ ಒಂದು ಮಜಾ ವಾಟರ್ ಪಾರ್ಕ್. ಆಧ್ಯಾತ್ಮಿಕ ಯಾತ್ರೆ ಆದ್ಮೇಲೆ ಇಲ್ಲಿಗೆ ಹೋಗಿ ಆರಾಮಾಗಿರಿ. ಜೀವನದಲ್ಲಿ ಒಮ್ಮೆಯಾದ್ರೂ ಇವೆಲ್ಲವನ್ನೂ ನೀವು ನೋಡ್ಲೇಬೇಕು.