ಹನಿಮೂನ್‌ಗೆ ಪ್ಲ್ಯಾನ್ ಮಾಡ್ತಿದ್ದೀರಾ? 5 ರೊಮ್ಯಾಂಟಿಕ್ ಪ್ಲೇಸ್ ಮಿಸ್ ಮಾಡ್ಕೋಬೇಡಿ!

Published : Jun 22, 2026, 12:56 PM IST

ಜುಲೈ ತಿಂಗಳಲ್ಲಿ ಮದುವೆಯಾದ ನಂತರ ರೊಮ್ಯಾಂಟಿಕ್ ಟ್ರಿಪ್ ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಿದ್ರೆ, ನಿಮ್ಮ ಸಂಗಾತಿ ಜೊತೆ ಭೇಟಿ ನೀಡಲೇಬೇಕಾದ 5 ಅತ್ಯುತ್ತಮ ಹನಿಮೂನ್ ತಾಣಗಳ ಮಾಹಿತಿ ಇಲ್ಲಿದೆ. ಜೀವನಪೂರ್ತಿ ನೆನಪಿನಲ್ಲಿ ಉಳಿಯುವ ಅನುಭವವನ್ನು ಈ ಸ್ಥಳಗಳು ನಿಮಗೆ ನೀಡುತ್ತವೆ.

PREV
15
ಭಾರತದ ಸ್ಕಾಟ್ಲೆಂಡ್, ಕರ್ನಾಟಕದ ಕೊಡಗಿನ ವೈಬ್ಸ್
ಕರ್ನಾಟಕದಲ್ಲಿರುವ ಕೊಡಗನ್ನು 'ಭಾರತದ ಸ್ಕಾಟ್ಲೆಂಡ್' ಅಂತ ಕರೆಯುತ್ತಾರೆ. ಇಲ್ಲಿನ ಕಾಫಿ ತೋಟಗಳು, ಮಂಜು ಮುಸುಕಿದ ಬೆಟ್ಟಗಳು ನವ ಜೋಡಿಗಳಿಗೆ ಪ್ರಶಾಂತ ವಾತಾವರಣವನ್ನು ನೀಡುತ್ತವೆ. ಮಸಾಲೆ ತೋಟಗಳ ಪ್ರವಾಸ ಇಲ್ಲಿನ ಪ್ರಮುಖ ಆಕರ್ಷಣೆ. ಈ ಅನುಭವ ಜೀವನದಲ್ಲಿ ಮರೆಯಲಾಗದು.
25
ಪ್ರಕೃತಿಯ ಮಡಿಲಲ್ಲಿ ಪ್ರಣಯ, ಮುನ್ನಾರ್
ಕೇರಳದ ಮುನ್ನಾರ್ ಹೊಸದಾಗಿ ಮದುವೆಯಾದವರಿಗೆ ಸ್ವರ್ಗದಂತೆ ಭಾಸವಾಗುತ್ತದೆ. ಹಚ್ಚ ಹಸಿರಾದ ಬೆಟ್ಟಗಳು, ಮಂಜಿನ ಹೊದಿಕೆ, ಜಲಪಾತಗಳ ಸದ್ದು ನಿಮ್ಮನ್ನು ಮೋಡಿ ಮಾಡುತ್ತದೆ. ಸಂಗಾತಿಯ ಕೈ ಹಿಡಿದು ಬಿಸಿ ಬಿಸಿ ಚಹಾ ಹೀರುತ್ತಾ ಪ್ರಕೃತಿಯ ಸೌಂದರ್ಯವನ್ನು ಆನಂದಿಸುವುದೇ ಒಂದು ಅದ್ಭುತ ಅನುಭವ. ಜುಲೈ ಮಳೆ ಇಲ್ಲಿನ ಸೌಂದರ್ಯವನ್ನು ದುಪ್ಪಟ್ಟು ಮಾಡುತ್ತದೆ.
35
ಈಶಾನ್ಯ ಭಾರತದ ಕರೆ, ಗ್ಯಾಂಗ್ಟಕ್ ಮ್ಯಾಜಿಕ್
ಸಿಕ್ಕಿಂ ರಾಜಧಾನಿ ಗ್ಯಾಂಗ್ಟಕ್ ಜುಲೈ ತಿಂಗಳಲ್ಲಿ ಮಂಜಿನ ಮೋಡಗಳಿಂದ ತುಂಬಿ ರೊಮ್ಯಾಂಟಿಕ್ ಆಗಿ ಕಾಣುತ್ತದೆ. ಇಲ್ಲಿನ ಬೌದ್ಧ ಮಠಗಳು, ಸುಂದರ ಸರೋವರಗಳು ಮತ್ತು ಪರ್ವತಗಳ ದೃಶ್ಯಗಳು ನಿಮ್ಮನ್ನು ಬೇರೆಯೇ ಲೋಕಕ್ಕೆ ಕರೆದೊಯ್ಯುತ್ತವೆ. ಇಲ್ಲಿನ ಪ್ರಸಿದ್ಧ ಎಂಜಿ ರೋಡ್‌ನಲ್ಲಿ ವಾಕ್ ಮಾಡುವುದು, ಕೇಬಲ್ ಕಾರ್ ರೈಡ್ ಮತ್ತು ಸ್ಥಳೀಯ ಆಹಾರವನ್ನು ಸವಿಯುವುದನ್ನು ಮರೆಯಬೇಡಿ.
45
ಪರ್ವತಗಳ ನಡುವೆ ಪ್ರೇಮಾಯಣ, ಮನಾಲಿ ರೊಮ್ಯಾನ್ಸ್

ಹಿಮಾಚಲ ಪ್ರದೇಶದ ಮನಾಲಿಯು ಜೋಡಿಗಳ ನೆಚ್ಚಿನ ತಾಣವಾಗಿದೆ. ಎತ್ತರದ ಪರ್ವತಗಳು ಮತ್ತು ಸೇಬಿನ ತೋಟಗಳ ನಡುವೆ ಚಿಮುಕಿಸುವ ಮಳೆಯು ಒಂದು ವಿಭಿನ್ನ ಅನುಭವ ನೀಡುತ್ತದೆ. ಇಲ್ಲಿ ನೀವು ಸೋಲಾಂಗ್ ಕಣಿವೆಗೆ ಭೇಟಿ ನೀಡಬಹುದು. ಹಿಲ್‌ಸೈಡ್ ಕಾಟೇಜ್‌ಗಳಲ್ಲಿ ಉಳಿದುಕೊಂಡು, ಸ್ಥಳೀಯ ಕೆಫೆಗಳಲ್ಲಿ ಹಾಟ್ ಚಾಕೊಲೇಟ್ ಕುಡಿಯುತ್ತಾ ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಬಹುದು.

ಇದನ್ನೂ ಓದಿ: ಮೈಸೂರು, ಬೆಂಗಳೂರು, ಚಿತ್ರದುರ್ಗದಿಂದ ವಿಜಯಪುರಕ್ಕಿದೆ ನೇರ ರೈಲು; ಪ್ರಯಾಣಿಕರಿಗೆ ಉತ್ತಮ ಆಯ್ಕೆ

55
ಬೀಚ್ ಲವರ್ಸ್ ಗಾಗಿ ಸ್ವರ್ಗ, ಅಂಡಮಾನ್ ದ್ವೀಪಗಳು

ನೀವು ಸಮುದ್ರ ತೀರ ಮತ್ತು ನೀರಿನ ಚಟುವಟಿಕೆಗಳನ್ನು ಇಷ್ಟಪಡುವವರಾಗಿದ್ದರೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ತಿಳಿ ನೀಲಿ ನೀರು ಮತ್ತು ಪ್ರಶಾಂತವಾದ ಬೀಚ್‌ಗಳು ನವಜೋಡಿಗಳಿಗೆ ಉತ್ತಮ ಏಕಾಂತವನ್ನು ನೀಡುತ್ತವೆ. ಜುಲೈನಲ್ಲಿ ಮಳೆಯಿದ್ದರೂ, ಬಿಸಿಲು ಬಂದಾಗ ಸ್ಕೂಬಾ ಡೈವಿಂಗ್ ಮಾಡಬಹುದು. ಬೀಚ್‌ನಲ್ಲಿ ಕ್ಯಾಂಡಲ್‌ಲೈಟ್ ಡಿನ್ನರ್ ಮಾಡಿದರೆ ಆ ನೆನಪು ಶಾಶ್ವತವಾಗಿ ಉಳಿಯುತ್ತದೆ.

ಇದನ್ನೂ ಓದಿ: ಬೆಂಗಳೂರಿನಿಂದ ಊಟಿಗೆ ಹೋಗ್ತಿದ್ದೀರಾ? ಇಲ್ಲಿದೆ ನೋಡಿ ನಮ್ಮ ಸಾರಿಗೆ ಬಸ್‌ಗಳ ಮಾಹಿತಿ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories