ಭಾರತದ ಸಿರಿವಂತರ ನಗರಗಳಿವು… ಟಾಪ್ 10ರಲ್ಲಿ ಕರ್ನಾಟಕದ ಯಾವ ನಗರಕ್ಕಿದೆ ಸ್ಥಾನ?

Published : May 13, 2025, 02:40 PM ISTUpdated : May 13, 2025, 02:48 PM IST

ಭಾರತದ ಶ್ರೀಮಂತರ ನಗರಗಳ ಲಿಸ್ಟ್ ಇಲ್ಲಿದೆ. ಟಾಪ್ 10 ಲಿಸ್ಟಲ್ಲಿ ಕರ್ನಾಟಕದ ಯಾವ ನಗರ ಇದೆ ಅನ್ನೋದನ್ನು ನೀವು ಗೆಸ್ ಮಾಡ ಬಲ್ಲಿರಾ?   

PREV
111
ಭಾರತದ ಸಿರಿವಂತರ ನಗರಗಳಿವು… ಟಾಪ್ 10ರಲ್ಲಿ ಕರ್ನಾಟಕದ ಯಾವ ನಗರಕ್ಕಿದೆ ಸ್ಥಾನ?

ಭಾರತದ ಶ್ರೀಮಂತ ನಗರಗಳ (Richest cities) ಲಿಸ್ಟ್ ಅನ್ನು ಇಲ್ಲಿ ನೀಡಲಾಗಿದೆ. ಈ ಟಾಪ್ 10 ನಗರಗಳನ್ನು ಅವುಗಳ ಜಿಡಿಪಿ, ತಲಾ ಆದಾಯ ಹಾಗೂ ಆ ನಗರದಲ್ಲಿ ಎಷ್ಟು ಬಿಲೇನಿಯರ್ ಇದ್ದಾರೆ ಎನ್ನುವ ಮಾಹಿತಿಯ ಆಧಾರದ ಮೇಲೆ ಲಿಸ್ಟ್ ಮಾಡಲಾಗಿದೆ. ಟಾಪ್ 10 ಲಿಸ್ಟ್ ಇಲ್ಲಿದೆ. 
 

211

ಭಾರತದ ಶ್ರೀಮಂತ ನಗರಗಳ ಈ ಲಿಸ್ಟ್ ನಲ್ಲಿ ಒಂದನೇ ಸ್ಥಾನದಲ್ಲಿದೆ ನಮ್ಮ ದೇಶದ ಹಣಕಾಸಿನ ರಾಜಧಾನಿ ಹಾಗೂ ಶ್ರೀಮಂತ ನಗರಿ ಹಾಗೂ ಕನಸಿನ ನಗರಿ ಮುಂಬೈ. ಇದರ ಜಿಡಿಪಿ 4.91% ಆಗಿದೆ. 

311

ಎರಡನೇ ಸ್ಥಾನದಲ್ಲಿ ನಮ್ಮ ದೇಶದ ರಾಜಧಾನಿ ದೆಹಲಿ(Delhi). ದೆಹಲಿಯ ಜಿಡಿಪಿ 3.77% ಆಗಿದೆ. ಇಲ್ಲಿ ಹೆಚ್ಚಾಗಿ ಐಟಿ ಕಂಪನಿಗಳೂ ಇವೆ, ಅದರ ಜೊತೆಗೆ ದೇಶದ ರಾಜಕಾರಣಿಗಳು ಸಹ ದೆಹಲಿಯಲ್ಲೆ ನೆಲೆಯಾಗಿರುತ್ತಾರೆ. 

411

ಇನ್ನು ಟಾಪ್ ಮೂರು ಸ್ಥಾನದಲ್ಲಿರುವ ನಗರಗಳು ಯಾವುವು ಅಂದ್ರೆ, ಮೂರನೇ ಸ್ಥಾನದಲ್ಲಿ ಪಶ್ಚಿಮ ಬಂಗಾಲದ (West Bengal) ಕೋಲ್ಕತ್ತಾ. ಭಾರತದ ಹಳೆದ ಬಂದರು ಇರೋದು ಕೊಲ್ಕತ್ತಾದಲ್ಲಿ. ಇಲ್ಲಿ ಹಲವಾರು ಪ್ರಾಚೀನ ಕಟ್ಟಡಗಳನ್ನೂ ಸಹ ಕಾಣಬಹುದು.   
 

511

ಇನ್ನು 4ನೇ ಸ್ಥಾನದಲ್ಲಿರುವ ನಗರ ಯಾವುದು ಅಂದ್ರೆ ಅದು ನಮ್ಮ ದೇಶದ ಐಟಿ ಕ್ಯಾಪಿಟಲ್ (IT Capital) ಎಂದೇ ಖ್ಯಾತಿ ಪಡೆದಿರುವ ನಮ್ಮ ಬೆಂಗಳೂರು. ಇಲ್ಲಿ ಸ್ಟಾರ್ಟ್ ಅಪ್ ಕಂಪನಿಗಳು, ಬ್ಯುಸಿನೆಸ್ ಮೆನ್ ಗಳು, ಶ್ರೀಮಂತರು ಸಿಕ್ಕಾಪಟ್ಟೆ ಇದ್ದಾರೆ. 

611

5ನೇ ಸ್ಥಾನದಲ್ಲಿರೋದು ತೆಲಂಗಾಣದ ಹೈದರಾಬಾದ್ (Hyderabad). ಇದನ್ನು ಮುತ್ತಿನ ನಗರಿ ಎಂದು ಕರೆಯುತ್ತಾರೆ. ಇಲ್ಲಿ ಮುತ್ತು, ವಜ್ರಗಳು ಮಾರುತ್ತಿದ್ದ ಇತಿಹಾಸವೇ ಇದೆ. ಇದು ವೇಗವಾಗಿ ಬೆಳೆಯುತ್ತಿರುವ ಐಟಿ ಹಬ್ ಕೂಡ ಹೌದು. 

711

6ನೇ ಸ್ಥಾನದಲ್ಲಿ ತಮಿಳುನಾಡಿನ ಚೆನ್ನೈ ಇದೆ. ಚೆನ್ನೈಯಲ್ಲೂ ಸಹ ಐಟಿ ಕಂಪನಿಗಳು ಸಾಕಷ್ಟಿವೆ. ಇದು ಇಂಡಷ್ಟ್ರಿಯಲ್ ಹಾಗೂ ಕಮರ್ಷಿಯಲ್ ಹಬ್ ಕೂಡ ಹೌದು. ಇಲ್ಲಿ ಹೆಲ್ತ್ ಕೇರ್, ಆಟೋ ಮೊಬೈಲ್ ಕಂಪನಿಗಳು ಸಹ ಸಾಕಷ್ಟಿವೆ. 

811

ಶ್ರೀಮಂತ ನಗರಗಳ ಲಿಸ್ಟ್ ನಲ್ಲಿ 7ನೇ ಸ್ಥಾನದಲ್ಲಿದೆ ಮಹಾರಾಷ್ಟ್ರದ ಪುಣೆ. ಇಲ್ಲಿ ಹಲವಾರು ಜನಪ್ರಿಯ ರಿಸರ್ಚ್ ಹಾಗೂ ಶೈಕ್ಷಣಿಕ ಸಂಸ್ಥೆಗಳಿವೆ (educational institute). ಇಲ್ಲಿ ಹಲವಾರು ಟೆಕ್ ಕಂಪನಿಗಳು ಸಹ ಇವೆ. 

911

ಇನ್ನು 8ನೇ ಸ್ಥಾನದಲ್ಲಿದೆ ಗುಜರಾತ್ ನ ಮತ್ತೊಂದು ನಗರ ಅಹಮದಾಬಾದ್ (Ahamadabad). ಇಲ್ಲಿಯೂ ಹಲವು ಟೆಕ್ ಪಾರ್ಕ್, ಇಂಡಷ್ಟ್ರಿ, ಹೀಗೆ ಹಲವಾರು ಕಂಪನಿಗಳು, ಪ್ರವಾಸಿ ಸ್ಥಳಗಳು ಸಹ ಇವೆ. 

1011

9ನೇ ಸ್ಥಾನದಲ್ಲಿರೋದು ಭಾರತದ ವಜ್ರದ ನಗರಿ (Diamond City) ಎಂದೇ ಖ್ಯಾತಿ ಪಡೆದಿರುವ ಗುಜರಾತಿನ ಸೂರತ್. ಇದು ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರ ಕೂಡ ಹೌದು. ವಜ್ರದ ಜೊತೆಗೆ ಟೆಕ್ಸ್ಟೈಲ್ ಇಂಡಷ್ಟ್ರಿಗೆ ಕೂಡ ಇದು ಜನಪ್ರಿಯವಾಗಿದೆ. 
 

1111

ಶ್ರೀಮಂತ ನಗರಗಳಲ್ಲಿ 10ನೇ ಸ್ಥಾನದಲ್ಲಿರೋದು ಆಂಧ್ರಪ್ರದೇಶದ ವಿಶಾಖ ಪಟ್ಟಣ. ಸುಂದರವಾದ ಪ್ರಕೃತಿ ಹಾಗೂ ಸಮುದ್ರ ತೀರಕ್ಕೆ ಹೆಸರುವಾಸಿಯಾದ ಪ್ರದೇಶ ಇದು. ಇಲ್ಲಿ ಹಡಗು ನಿರ್ಮಾಣ, ಸ್ಟೀಲ್, ನ್ಯಾಚುರಲ್ ಗ್ಯಾಸ್, ಐಟಿ ಕಂಪನಿಗಳು ಸೇರಿ ಹಲವಾರು ಕಂಪನಿಗಳಿವೆ. 
 

Read more Photos on
click me!

Recommended Stories