ಕಡಲ ತೀರದ ಕಾಶ್ಮೀರ ಉತ್ತರ ಕನ್ನಡ…. ಈ ಜಿಲ್ಲೆಯ ಬಗ್ಗೆ ಕೇಳಿದ್ರೆ ಹೆಮ್ಮೆ ಪಡ್ತೀರಿ!

Published : May 12, 2025, 05:05 PM ISTUpdated : May 12, 2025, 05:14 PM IST

ಕಡಲ ತೀರದ ಕಾಶ್ಮೀರ ಎಂದು ಹೆಸರು ಪಡೆದಿರುವ ಉತ್ತರ ಕನ್ನಡ ಜಿಲ್ಲೆಯ ಕುರಿತು ಒಂದಷ್ಟು ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ. ಅವುಗಳ ಬಗ್ಗೆ ತಿಳಿದ್ರೆ ಅಚ್ಚರಿ ಪಡುತ್ತೀರಿ.   

PREV
18
ಕಡಲ ತೀರದ ಕಾಶ್ಮೀರ ಉತ್ತರ ಕನ್ನಡ…. ಈ ಜಿಲ್ಲೆಯ ಬಗ್ಗೆ ಕೇಳಿದ್ರೆ ಹೆಮ್ಮೆ ಪಡ್ತೀರಿ!

ಕರಾವಳಿ ಕರ್ನಾಟಕವಾದ ಉತ್ತರ ಕನ್ನಡ ಜಿಲ್ಲೆ (Uttara Kannada) ಪ್ರಕೃತಿ ಸೌಂದರ್ಯ ತೊಟ್ಟಿಲು. ಇಲ್ಲಿನ ಸಮುದ್ರ ತೀರವು ಇದೆ, ಟ್ರೆಕ್ಕಿಂಗ್ ಮಾಡಲು ಸುಂದರವಾದ ತಾಣಗಳೂ ಇವೆ, ಜಲಪಾತಗಳೂ ಇವೆ. ಇಲ್ಲಿ ಹಲವು ಗಣ್ಯರು ಜನಿಸಿದ್ದಾರೆ. ಹೀಗೆ ಉತ್ತರ ಕನ್ನಡದ ಕುರಿತು ಹೇಳುತ್ತಾ ಹೋದ್ರೆ ಪದಗಳೇ ಸಾಕಾಗಲ್ಲ. 
 

28

ಉತ್ತರ ಕನ್ನಡವು ಮೋಡಿಮಾಡುವ ಸೌಂದರ್ಯ, ಶ್ರೀಮಂತ ಪರಂಪರೆ ಮತ್ತು ರೋಮಾಂಚಕ ಸಂಸ್ಕೃತಿಯ ನಾಡು ಕೂಡ ಹೌದು.  ನೀವು ಬೀಚ್ ಪ್ರಿಯರು ಆಗಿದ್ದರೆ, ಇಲ್ಲಿ ಕಾರಾವಾರ, ಗೋಕರ್ಣ, ಓಂ ಬೀಚ್ ಮತ್ತು ಮುರುಡೇಶ್ವರಗಳು ರಮಣೀಯ ಸೌಂದರ್ಯ ಮತ್ತು ಆಧ್ಯಾತ್ಮಿಕ ಕಂಪನಗಳನ್ನು ನೀಡುತ್ತವೆ.
 

38

ಕರ್ನಾಟಕದ ಪ್ರಖ್ಯಾತ ಜಾನಪದ ಕಲೆ "ಯಕ್ಷಗಾನ"  (Yakshagana) ಕ್ಷೇತ್ರದಲ್ಲಿ ಉತ್ತರ ಕನ್ನಡ ಜಿಲ್ಲೆ ಸಾಕಷ್ಟು ಹೆಸರು ಮಾಡಿದೆ. ಯಕ್ಷಗಾನದ ದಿಗ್ಗಜರಾದ ಶಂಭು ಹೆಗಡೆ, ಮಹಾಬಲ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ ಎಲ್ಲರೂ ಉತ್ತರ ಕನ್ನಡ ಜಿಲ್ಲೆಯವರು. 

48

ಅಷ್ಟೇ ಅಲ್ಲ, ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸಿ ಕರ್ನಾಟಕದ ದಾಂಡಿ ಎಂದು ಜನಪ್ರಿಯತೆ ಪಡೆದ ಅಂಕೋಲಾ ಕೂಡ ಈ ಜಿಲ್ಲೆಗೆ ಸೇರಿದೆ. ಹಾಗಾಗಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಉತ್ತರ ಕನ್ನಡದ ಕೊಡುಗೆ ಸಾಕಷ್ಟಿದೆ ಎಂದೇ ಹೇಳಬಹುದು. 
 

58

ಇನ್ನು ನೀವು ಹಚ್ಚ ಹಸಿರಿನ ಕಾಡುಗಳು ಮತ್ತು ವನ್ಯಜೀವಿಗಳನ್ನು ಇಷ್ಟಪಡುವ ಪ್ರಕೃತಿ ಪ್ರಿಯರು ಆಗಿದ್ರೆ ದಾಂಡೇಲಿ ವನ್ಯಜೀವಿ ಅಭಯಾರಣ್ಯ ಮತ್ತು ಕಾಳಿ ಹುಲಿ ಅಭಯಾರಣ್ಯಗಳು ಸಹ ಇಲ್ಲಿ ಇವೆ. ಅಷ್ಟೇ ಅಲ್ಲ ಉಂಚಳ್ಳಿ ಜಲಪಾತ, ಮಾಗೋಡು ಜಲಪಾತ ಮತ್ತು ಘರ್ಜಿಸುವ ಕಾಳಿ ನದಿ ಸೇರಿ ಹಲವು ನದಿಗಳಿಗೆ ನೆಲೆ ನೀಡಿರುವ ಸುಂದರ ತಾಣ ಉತ್ತರ ಕನ್ನಡ ಜಿಲ್ಲೆ. 

68

ಅಷ್ಟೇ ಅಲ್ಲ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಾಚೀನ ದೇವಾಲಯಗಳು ಸಹ ಇವೆ. ಮುರುಡೇಶ್ವರ (Murudeshwara), ಇಡಗುಂಜಿ, ಮಾರಿಕಾಂಬ, ಕದಂಬರ ಬನವಾಸಿ, ಸಹಸ್ರಲಿಂಗ, ಮಹಾಬಲೇಶ್ವರ ದೇಗುಲ ಎಲ್ಲವೂ ಇರೋದು ಇಲ್ಲಿದೆ. ಇದರ ಜೊತೆ ನೀವು ಸಾಹಸ ಮತ್ತು ಚಾರಣ ಪ್ರಿಯರಾಗಿದ್ರೆ ಯಾಣ ಮತ್ತು ವಿಭೂತಿ ಜಲಪಾತಗಳಂತಹ ತಾಣಗಳಲ್ಲೂ ನೀವು ಎಂಜಾಯ್ ಮಾಡಬಹುದು. 

78

ಇದು ಮಾತ್ರವಲ್ಲ, ಕಲೆ, ಸಂಸ್ಕೃತಿಯ ತವರೂರು ಕೂಡ ಹೌದು. ನಟರಾದಂತಹ ಶಂಕರ್ ನಾಗ್, ಅನಂತ್ ನಾಗ್, ಗೌರೀಶ್ ಕಾಯ್ಕಿಣಿ, ಜಯಂತ್ ಕಾಯ್ಕಿಣಿ, ರಾಧಿಕಾ ಪಂಡಿತ್, ರಾಮಕೃಷ್ಣ ಹೆಗಡೆ ದಿನಕರ್ ದೇಸಾಯಿ ಸೇರಿ ಅನೇಕ ಕಲಾವಿದರಿಗೆ, ರಾಜಕಾರಣಿಗಳಿಗೆ ಹಾಗೂ ಸಾಹಿತಿಗಳಿಗೆ ಜನ್ಮ ನೀಡಿದ ಪುಣ್ಯ ಭೂಮಿ ಇದು. 

88

ಇನ್ನು ಕಾಳಿ ನದಿ ಹರಿಯೋದು ಕೂಡ ಇದೇ ಜಿಲ್ಲೆಯಲ್ಲಿ, ಈ ನದಿ ಮೇಲೆ ಕಟ್ಟಿದಂತಹ ಸುಪಾ ಅಣೆಕಟ್ಟು ಕರ್ನಾಟಕದ ಅತ್ಯಂತ ದೊಡ್ಡ ಅಣೆಕಟ್ಟು ಕೂಡ ಹೌದು. ಅಷ್ಟೇ ಅಲ್ಲ ಐಎಸ್ ಎಸ್ ಅಂದರೆ ಭಾರತೀಯ ನೌಕದಳದ ನೆಲೆ ಇರೋದು ಕೂಡ ಕಾರವಾರದಲ್ಲಿ. ಇದನ್ನು ಕಾರಾವರ ನೌಕನೆಲೆ ಎಂದು ಕರೆಯಲಾಗುತ್ತೆ. 

Read more Photos on
click me!

Recommended Stories