ಇಂದೋರ್‌ನ ಟಾಪ್ 10 ಫೇಮಸ್ ಜಾಗಗಳು; ಲೈಫಲ್ಲಿ ಒಮ್ಮೆಯಾದ್ರೂ ಭೇಟಿ ಕೊಡಿ!
ಇಂದೋರ್‌ನಲ್ಲಿ ಲಾಲ್ ಬಾಗ್ ಅರಮನೆಯಿಂದ ಟಿಂಚಾ ಫಾಲ್ಸ್ ವರೆಗೆ, ತಿರುಗಾಡಲು ಬಹಳಷ್ಟು ಅದ್ಭುತವಾದ ಜಾಗಗಳಿವೆ. ಈ ಜಾಗಗಳು ಸಂಸ್ಕೃತಿ, ಇತಿಹಾಸ ಮತ್ತು ಪ್ರಕೃತಿಯ ಅದ್ಭುತ ಮಿಕ್ಸ್ ಆಗಿವೆ.
ಇಂದೋರ್‌ನಲ್ಲಿ ಲಾಲ್ ಬಾಗ್ ಅರಮನೆಯಿಂದ ಟಿಂಚಾ ಫಾಲ್ಸ್ ವರೆಗೆ, ತಿರುಗಾಡಲು ಬಹಳಷ್ಟು ಅದ್ಭುತವಾದ ಜಾಗಗಳಿವೆ. ಈ ಜಾಗಗಳು ಸಂಸ್ಕೃತಿ, ಇತಿಹಾಸ ಮತ್ತು ಪ್ರಕೃತಿಯ ಅದ್ಭುತ ಮಿಕ್ಸ್ ಆಗಿವೆ.
ರಾಜವಾಡ ಅಂದ್ರೆ ರಾಜ ಮನೆತನದ ಏಳು ಅಂತಸ್ತಿನ ಅರಮನೆ. ಇದು ಮರಾಠ, ಮೊಘಲ್ ಹಾಗು ಫ್ರೆಂಚ್ ಆರ್ಕಿಟೆಕ್ಚರ್ ಸ್ಟೈಲ್ ಮಿಕ್ಸ್ ಆಗಿರೋ ಒಂದು ಹಿಸ್ಟಾರಿಕಲ್ ಪ್ಲೇಸ್.
ಲಾಲ್ ಬಾಗ್ ಪ್ಯಾಲೇಸ್ ಯುರೋಪಿಯನ್ ಆರ್ಕಿಟೆಕ್ಚರ್ ತೋರಿಸೋ ಒಂದು ಅದ್ಭುತ ಅರಮನೆ. ಇದು ಹಸಿರಾದ ತೋಟಗಳಿಂದ ಸುತ್ತುವರೆದಿದೆ. ಹೋಳ್ಕರ್ ರಾಜವಂಶದ ಡೈನೆಸ್ಟಿನು ತೋರಿಸುತ್ತೆ.
ಖಜರಾನಾ ಗಣೇಶ ದೇವಸ್ಥಾನ ಗಣೇಶನ ಮೂರ್ತಿ ಇರೋ ಒಂದು ಮುಖ್ಯವಾದ ದೇವಸ್ಥಾನ. ಇಲ್ಲಿ ತುಂಬಾ ಜನ ಭಕ್ತರು ಬರ್ತಾರೆ. ವರ್ಷವಿಡೀ ಭಕ್ತರು ಇಲ್ಲಿ ಭೇಟಿ ನೀಡುತ್ತಾರೆ.
ನೀವು ಇಂದೋರ್ ಗೆ ಹೋಗೋ ಪ್ಲಾನ್ ಮಾಡ್ತಿದ್ರೆ, ಅನ್ನಪೂರ್ಣ ದೇವಸ್ಥಾನಕ್ಕೆ ಹೋಗೋದು ಬೆಸ್ಟ್ ಆಪ್ಷನ್. ಇದು ಬಹಳಷ್ಟು ಪ್ರಸಿದ್ಧಿ ಪಡೆದಿದ್ದು, ಸದಾ ಇಲ್ಲಿ ಭಕ್ತರು ಭೇಟಿ ನೀಡುತ್ತಾರೆ.
ಕಾಂಚ್ ಮಂದಿರ ಜೈನ ದೇವಸ್ಥಾನ. ಇದು ಗಾಜಿನ ಕೆಲಸ ಹಾಗು ಮಹಾವೀರನ ಕಪ್ಪು ಗೋಮೇದಕದ ಮೂರ್ತಿಗೆ ಫೇಮಸ್. ಇಂದೋರ್‌ಗೆ ಹೋದರೆ ಇಲ್ಲೋ ಹೋಗೋದಕ್ಕೆ ಮರೆಯಬೇಡಿ.
ಪಾತಳಪಾಣಿ ಒಂದು ಜಲಪಾತ. ಇದು ಇಂದೋರ್ ಹತ್ತಿರ ಇದೆ. ಇಲ್ಲಿ ಪಿಕ್ನಿಕ್ ಮಾಡೋಕೆ ತುಂಬಾ ಜನ ಬರ್ತಾರೆ. ಇಲ್ಲಿ ಸುಮಾರು 300 ಅಡಿ ಎತ್ತರದಿಂದ ನೀರು ಬೀಳುತ್ತೆ.
ರಾಳಾಮಂಡಲ ವೈಲ್ಡ್ ಲೈಫ್ ಸೆಂಚುರಿನ 1989 ರಲ್ಲಿ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಸ್ಥಾಪನೆ ಮಾಡಿದ್ದು. ಇದು ಪ್ರಕೃತಿ ಪ್ರಿಯರಿಗೆ ಸ್ವರ್ಗ ಇದ್ದಂಗೆ.
ಬಡಾ ಗಣಪತಿ ಮಂದಿರದಲ್ಲಿ ಗಣೇಶನ ಅತಿ ಎತ್ತರದ ಮೂರ್ತಿಗಳಲ್ಲಿ ಒಂದು ಇದೆ. ಈ ದೇವಸ್ಥಾನ ತನ್ನ ವಿಶಿಷ್ಟ ಮೂರ್ತಿಗೆ ಫೇಮಸ್.
ಛತ್ರಿಬಾಗ್ ಇಂದೋರ್‌ನ ಹೃದಯ ಭಾಗದಲ್ಲಿ ಅಂದ್ರೆ ರಾಜವಾಡ ಪ್ಯಾಲೇಸ್ ಹತ್ತಿರ ಇದೆ. ಇದು ತನ್ನ ಸೌಂದರ್ಯಕ್ಕೆ ಫೇಮಸ್. ಇಂದೋರ್‌ಗೆ ಭೇಟಿ ನೀಡಿದರೆ ಇಲ್ಲಿಗೆ ಹೋಗೋಕೆ ಮರೀಬೇಡಿ.
ಟಿಂಚಾ ಫಾಲ್ಸ್ ಇಂದೋರ್ ಹತ್ತಿರ ಇರೋ ಒಂದು ಸುಂದರವಾದ ಜಲಪಾತ. ಇಲ್ಲಿ ಮಳೆಗಾಲದಲ್ಲಿ ಪ್ರಕೃತಿ ಸೌಂದರ್ಯ ನೋಡೋಕೆ ಮಸ್ತ್ ಇರುತ್ತೆ.