ಇವು ಪ್ರಪಂಚದ 10 ಅತಿ ಅಪಾಯಕಾರಿ ಸಿಟಿಗಳು..! ಹೋಗಿದ್ರಾ ಅಲ್ಲೇನಾದ್ರೂ..?

ಪ್ರಪಂಚದ ಕೆಲವೊಂದು ಅತಿ ಡೇಂಜರಸ್ ಸಿಟಿಗಳ ಬಗ್ಗೆ ತಿಳ್ಕೊಳ್ಳಿ. ಕ್ರೈಮ್, ಹೊಡೆದಾಟ, ರಾಜಕೀಯ ಸರಿ ಇಲ್ಲದೆ ಇರೋದ್ರಿಂದ ಈ ಸಿಟಿಗಳಲ್ಲಿ ಇರೋದು ಸೇಫ್ ಅಲ್ಲ.

Top 10 Most Dangerous Cities in the World to Avoid
ತಿಜುವಾನ, ಮೆಕ್ಸಿಕೋ

ಇಲ್ಲಿ ಕೊಲೆಗಳು ಜಾಸ್ತಿ ಆಗ್ತವೆ. ಡ್ರಗ್ ಕಳ್ಳಸಾಗಣೆ, ಗ್ಯಾಂಗ್ ವಾರ್‌ಗಳಿಗೆ ಈ ಸಿಟಿ ಫೇಮಸ್ಸು. ಇಲ್ಲಿ ಹೋದವ್ರು ತುಂಬಾ ಎಚ್ಚರಿಕೆ ವಹಿಸ್ಬೇಕು.

Top 10 Most Dangerous Cities in the World to Avoid
ಕರಾಕಸ್, ವೆನೆಜುವೆಲಾ

ರಾಜಕೀಯ, ಆರ್ಥಿಕ ಸಮಸ್ಯೆಗಳು, ಕ್ರೈಮ್ ರೇಟ್ ಈ ಸಿಟಿನ ಸೇಫ್ ಅಲ್ಲ ಅಂತ ಮಾಡುತ್ತೆ. ಇಲ್ಲಿ ಕಿಡ್ನ್ಯಾಪ್, ದರೋಡೆ ಕಾಮನ್.


ಪೋರ್ಟ್-ಓ-ಪ್ರಿನ್ಸ್, ಹೈಟಿ

ಬಡತನ, ಗ್ಯಾಂಗ್‍ಗಳ ಕಾಳಗದಿಂದ ಪೋರ್ಟ್-ಓ-ಪ್ರಿನ್ಸ್ ಡೇಂಜರಸ್ ಆಗಿದೆ. ಇಲ್ಲಿ ದರೋಡೆ, ಕಿಡ್ನ್ಯಾಪ್ ಕಾಮನ್. ಅವುಗಳಿಂದ ತಪ್ಪಿಸಿಕೊಳ್ಳೋದೇ ಕಷ್ಟ ಎನ್ನಲಾಗ್ತಿದೆ. 

ಕೇಪ್ ಟೌನ್, ಸೌತ್ ಆಫ್ರಿಕಾ

ಇಲ್ಲಿ ಹೊಡೆದಾಟದ ಕ್ರೈಮ್, ಗ್ಯಾಂಗ್ ವಾರ್, ಕಳ್ಳತನ ಜಾಸ್ತಿ. ಅವುಗಳನ್ನು ಕಂಟ್ರೋಲ್ ಮಾಡೋದಕ್ಕೆ ತುಂಬಾ ಕಷ್ಟ ಆಗ್ತಿದೆಯಂತೆ. 

ಸಿಯುಡಾಡ್ ಜುವಾರೆಜ್, ಮೆಕ್ಸಿಕೋ

ಈ ಸಿಟಿ ಕ್ರೈಮ್, ಕಿಡ್ನ್ಯಾಪ್, ಕೊಲೆಗಳಿಗೆ ಫೇಮಸ್ಸು. ಯಾವಾಗಲೂ ಏನಾದರೊಂದು ಕೆಟ್ಟ ಕೃತ್ಯಗಳು ಅಲ್ಲಿ ನಡೆಯೋದು ಕಾಮನ್ ಅಂತಿದಾರೆ. 

ಸೆಂಟ್ ಲೂಯಿಸ್, ಯುಎಸ್ಎ

ಅಮೆರಿಕಾದಲ್ಲೇ ಅತಿ ಡೇಂಜರಸ್ ಸಿಟಿ ಸೆಂಟ್ ಲೂಯಿಸ್. ಇಲ್ಲಿ ಕೊಲೆ, ಹೊಡೆದಾಟದ ಕ್ರೈಮ್‍ಗಳು ಜಾಸ್ತಿ. ಇಲ್ಲಿ ಓಡಾಡುವವರು ಬಹಳಷ್ಟು ಎಚ್ಚರಿಕೆ ವಹಿಸಿದರೂ ಸಾಲದು ಎನ್ನಲಾಗುತ್ತೆ. 

ಸ್ಯಾನ್ ಪೆಡ್ರೊ ಸುಲಾ, ಹೊಂಡುರಾಸ್

ಸ್ಯಾನ್ ಪೆಡ್ರೊ ಸುಲಾ ಉತ್ತರ ಹೊಂಡುರಾಸ್‍ನಲ್ಲಿದೆ. ಇದು ಕ್ಯಾಪಿಟಲ್ ಟೆಗುಸಿಗಲ್ಪಾ ಆದ್ಮೇಲೆ ಹೊಂಡುರಾಸ್‍ನ ಎರಡನೇ ದೊಡ್ಡ ಸಿಟಿ.

ಕಿಂಗ್ಸ್ಟನ್, ಜಮೈಕಾ

ಇಲ್ಲಿ ಹೊಡೆದಾಟ, ಬಡತನದಿಂದ ಕಿಂಗ್ಸ್ಟನ್‍ನಲ್ಲಿ ಕೆರಿಬಿಯನ್‍ನಲ್ಲೇ ಅತಿ ಹೆಚ್ಚು ಕ್ರೈಮ್ ರೇಟ್ ಇದೆ. ಇದು ಡೇಂಜರಸ್ ಜಾಗಗಳಲ್ಲಿ ಒಂದು.

ಕಾಬೂಲ್, ಅಫ್ಘಾನಿಸ್ತಾನ

ವರ್ಷಗಳ ಕಾಳಗದಿಂದ ಕಾಬೂಲ್ ಟೆರರಿಸ್ಟ್ ಅಟ್ಯಾಕ್, ಕಿಡ್ನ್ಯಾಪ್‍ಗೆ ಈಜಿಯಾಗಿ ಸಿಗುತ್ತೆ. ಯಾವುದೇ ಅಥಾರಿಟಿ ಇವುಗಳನ್ನು ಕಂಟ್ರೋಲ್ ಮಾಡಲಾಗದೇ ಸೋತು ಹೋಗಿದೆ ಎನ್ನಲಾಗುತ್ತಿದೆ. 

ಫೋರ್ಟಾಲೆಜಾ, ಬ್ರೆಜಿಲ್

ಕ್ರೈಮ್, ಮರ್ಡರ್ ರೇಟ್‍ನಿಂದ ಇದು ಬ್ರೆಜಿಲ್‍ನ ಅತಿ ಡೇಂಜರಸ್ ಸಿಟಿಗಳಲ್ಲಿ ಒಂದು. ಇಲ್ಲಿ ಓಡಾಡುವವರಿಗೆ ಮೈಯೆಲ್ಲಾ ಕಣ್ಣು ಆಗಿರಬೇಕಂತೆ. 

Latest Videos

vuukle one pixel image
click me!