ಗರ್ಲ್ ಫ್ರೆಂಡ್ ಜೊತೆ ಹೊಟೇಲ್ ಬುಕ್ ಮಾಡೋದಾದ್ರೆ ಇರಲಿ ಈ ಕಡೆ ಧ್ಯಾನ, ಇಲ್ಲವಾದ್ರೆ ಎಣಿಸಬೇಕಾಗುತ್ತೆ ಕಂಬಿ!

First Published | Oct 7, 2023, 3:28 PM IST

ನೀವು ಮದುವೆಯಾಗದಿದ್ದರೆ ಮತ್ತು ನಿಮ್ಮ ಪ್ರೇಮಿ, ಫ್ರೆಂಡ್  ಜೊತೆ ಟೂರ್ ಹೋಗಿದ್ದು, ಹೋಟೆಲ್‌ನಲ್ಲಿ ಉಳಿಯಲು ನೀವು ಪ್ಲ್ಯಾನ್ ಮಾಡ್ತಿದ್ರೆ, ಈ ನಿಯಮಗಳನ್ನು ನೀವು ಪಾಲಿಸಿ. ಇಲ್ಲಾಂದ್ರೆ ಜೈಲಿಗೆ ಹೋಗಬೇಕಾಗಿ ಬರಬಹುದು. 
 

ಇಂದಿನ ಕಾಲದಲ್ಲಿ, ಕಪಲ್ಸ್ ಜೊತೆಯಾಗಿ ತಿರುಗಾಡುವುದು ಮತ್ತು ಒಟ್ಟಿಗೆ ವಾಸಿಸುವುದು (live in relationship) ದೊಡ್ಡ ವಿಷಯವಲ್ಲ. ಆದರೆ ಇನ್ನೂ ಭಾರತದಲ್ಲಿ ಇದನ್ನು ಹೆಚ್ಚಿನ ಜನರು ಒಪ್ಪೋದಿಲ್ಲ. ಅದರಲ್ಲೂ ಕಪಲ್ಸ್ ಎಲ್ಲಾದರೂ ಪ್ರಯಾಣಿಸಲು ಯೋಚಿಸುತ್ತಿದ್ದರೆ, ದೂರದೂರಿಗೆ ಟೂರ್ ಪ್ಲ್ಯಾನ್ ಮಾಡಿದ್ರೆ, ಹೊಟೇಲ್ ನಲ್ಲಿ ಉಳಿಯಲೇ ಬೇಕಾಗುತ್ತೆ. 
 

ಹೋಟೆಲ್‌ನಲ್ಲಿ ರಾತ್ರಿ ಕಳೆಯುವ (staying in hotel) ಮೊದಲು ಕಪಲ್ಸ್ ಹೊಟೇಲ್‌ನಲ್ಲಿ ಉಳಿಯುವ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಕೊಂಡಿರಬೇಕು. ಇಲ್ಲಾಂದ್ರೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತೆ. ಉದಾಹರಣೆಗೆ ಪೊಲೀಸರಿಂದ ದಾಳಿ ನಡೆಸುವ ಅಥವಾ ಪೊಲೀಸರಿಂದ ಬಂಧಿಸಲ್ಪಡುವ ಸಾಧ್ಯತೆ ತುಂಬಾನೆ ಇದೆ. ಅಂತಹ ಘಟನೆ ಅಪರೂಪವಾಗಿ ಸಂಭವಿಸಿದರೂ, ಅಂತಹ ಆತಂಕವು ಇನ್ನೂ ಅನೇಕ ಕಪಲ್ಸ್ ಮನಸ್ಸಿನಲ್ಲಿ ಉಳಿದಿದೆ.
 

Tap to resize

ನೀವು ಮದುವೆಯಾಗದಿದ್ದರೆ ಮತ್ತು ಹೋಟೆಲಿನಲ್ಲಿ ಉಳಿಯಲು ಯೋಜಿಸುತ್ತಿದ್ದರೆ, ನೀವು ಯಾವ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಇಲ್ಲಾಂದ್ರೆ ಮುಂದೆ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು. 

ಈ ವಿಷಯ ನೆನಪಿನಲ್ಲಿಡಿ
ನೀವು ನಿಮ್ಮ ಸಂಗಾತಿಯೊಂದಿಗೆ ಹೋಟೆಲಿನಲ್ಲಿ ಉಳಿಯಲು ಹೊರಟರೆ, ನೀವು 18+ ವಯಸ್ಸಿನವರಾಗಿರಬೇಕು. ಏಕೆಂದರೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜೋಡಿಗಳಿಗೆ ಹೋಟೆಲಿನಲ್ಲಿ ಉಳಿಯಲು ಅನುಮತಿ ಇಲ್ಲ. 

ನೀವಿಬ್ಬರೂ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ನಂತಹ ಗುರುತಿನ ಪುರಾವೆಗಳನ್ನು ಹೊಂದಿರಬೇಕು. ಏಕೆಂದರೆ ಅದರ ಫೋಟೋಕಾಪಿಯನ್ನು ಹೋಟೆಲ್ ಇಡುತ್ತದೆ. 
ಆಧಾರ್ ಕಾರ್ಡಿನ (Adhar Card) ಫೋಟೋಕಾಪಿ ನೀಡುವಾಗ ನೀವು ಚಿಂತಿಸಬೇಕಾಗಿಲ್ಲ, ಏಕೆಂದರೆ ಈ ಮಾಹಿತಿಯನ್ನು ಬೇರೆ ಯಾರಿಗೂ ನೀಡಲಾಗುವುದಿಲ್ಲ.
 

ಗುಪ್ತ ಕ್ಯಾಮೆರಾಗಳು (Hidden Camera)
ಇತ್ತೀಚಿನ ದಿನಗಳಲ್ಲಿ, ಅನೇಕ ಹೋಟೆಲ್‌ಗಳಲ್ಲಿ, ಜನರು ಜೋಡಿಗಳ ಖಾಸಗಿ ವೀಡಿಯೊಗಳನ್ನು ರೆಕಾರ್ಡ್ ಮಾಡಲು ಗುಪ್ತ ಕ್ಯಾಮೆರಾಗಳನ್ನು ಇಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಗೆಳತಿ ನಂತರ ಇದಕ್ಕೆ ನಿಮ್ಮನ್ನು ದೂಷಿಸಬಹುದು. ಆದ್ದರಿಂದ ನೀವು ಹೋಟೆಲ್ ಅನ್ನು ಸಂಪೂರ್ಣವಾಗಿ ಪರಿಶೀಲಿಸಬೇಕಾದ್ದು ಮುಖ್ಯ. 
 

ಗುಪ್ತ ಕ್ಯಾಮೆರಾದ ಬಗ್ಗೆ ಕಂಡುಹಿಡಿಯಲು, ಕೋಣೆಯ ಎಲ್ಲ ದೀಪಗಳನ್ನು ಆಫ್ ಮಾಡಿ ಮತ್ತು ಕೋಣೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ. ಕೋಣೆಯಲ್ಲಿ ಗುಪ್ತ ಕ್ಯಾಮೆರಾ ಇದ್ದರೆ, ಕ್ಯಾಮೆರಾ ಲೆನ್ಸ್ ಕತ್ತಲೆಯಲ್ಲಿ ಹೊಳೆಯುವುದನ್ನು ನೀವು ಕಾಣಬಹುದು. ಈ ಬಗ್ಗೆ ಎಚ್ಚರ ಇರೋದು ತುಂಬಾನೆ ಮುಖ್ಯ..
 

ಪೊಲೀಸರು ಹೋಟೆಲ್ ಗೆ ಬರುವ ಬಗ್ಗೆ ನೀವು ಚಿಂತಿತರಾಗಿದ್ದಲ್ಲಿ, ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ನೀವು ವಯಸ್ಕರಾಗಿದ್ದರೆ, ಪೊಲೀಸರು ನಿಮಗೆ ಕಿರುಕುಳ ನೀಡಲು ಸಾಧ್ಯವಿಲ್ಲ. 
ಹೋಟೆಲಿನಲ್ಲಿ ಜೋಡಿಗಳಿಗೆ ಪೊಲೀಸರು ಯಾವುದೇ ರೀತಿಯಲ್ಲಿ ಕಿರುಕುಳ ನೀಡಿದರೆ, ಅವರು ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ನೇರವಾಗಿ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಬಹುದು ಅಥವಾ ಅನುಚ್ಛೇದ 226 ರ ಅಡಿಯಲ್ಲಿ ನೇರವಾಗಿ ಹೈಕೋರ್ಟ್‌ಗೇ ಹೋಗಬಹುದು.

Latest Videos

click me!