Secret spots in Goa: ಗೋವಾ ಅಂದಾಕ್ಷಣ ನಮಗೆ ನೆನಪಾಗೋದು ಬೀಚ್, ಪಬ್, ಪಾರ್ಟಿ. ಆದ್ರೆ ಗೋವಾದ ಅಸಲಿ ಸೌಂದರ್ಯ ಇರೋದು ಅಲ್ಲಿ ಮಾತ್ರ ಅಲ್ಲ. ಪ್ರಶಾಂತವಾದ ಪ್ರಕೃತಿ, ನೂರಾರು ವರ್ಷಗಳ ಇತಿಹಾಸ, ಹಳೆಯ ಕಟ್ಟಡಗಳು ಇಲ್ಲಿವೆ. ಮುಂದಿನ ಬಾರಿ ಗೋವಾ ಟ್ರಿಪ್ ಹೋದಾಗ ಈ ಜಾಗಗಳನ್ನು ಮಿಸ್ ಮಾಡ್ಕೋಬೇಡಿ.
ಗೋವಾ ಅಂದ್ರೆ ಬರೀ ಬೀಚ್, ಪಾರ್ಟಿ ಅಂತಾನೇ ಎಲ್ಲರೂ ಅಂದುಕೊಳ್ತಾರೆ. ಆದ್ರೆ ಗೋವಾದಲ್ಲಿ ನೋಡೋಕೆ ಇನ್ನೂ ಸಾಕಷ್ಟು ಜಾಗಗಳಿವೆ. ಪ್ರಶಾಂತವಾದ ಪ್ರಕೃತಿ, ನೂರಾರು ವರ್ಷಗಳ ಇತಿಹಾಸ, ಹಳೆಯ ಕಟ್ಟಡಗಳು, ಸಾಂಬಾರ ಬೆಳೆಗಳ ತೋಟಗಳು, ಪಕ್ಷಿಧಾಮಗಳು ಇಲ್ಲಿವೆ. ಮುಂದಿನ ಬಾರಿ ಗೋವಾ ಟ್ರಿಪ್ ಪ್ಲಾನ್ ಮಾಡಿದಾಗ ಈ ಜಾಗಗಳನ್ನು ನೋಡೋದನ್ನ ಮರೆಯಬೇಡಿ. ಆ ಜಾಗಗಳು ಯಾವುವು ಅಂತ ಇಲ್ಲಿ ನೋಡೋಣ.
28
ದೂಧ್ ಸಾಗರ್ ಜಲಪಾತ
ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ಮಧ್ಯೆ ಇರುವ ದೂಧ್ ಸಾಗರ್ ಜಲಪಾತ ಗೋವಾದ ಪ್ರಮುಖ ಪ್ರವಾಸಿ ತಾಣ. ಎತ್ತರದ ಬೆಟ್ಟದಿಂದ ಹಾಲು ಸುರಿದಂತೆ ನೀರು ಧುಮುಕುವುದನ್ನು ನೋಡೋದೇ ಒಂದು ಅದ್ಭುತ. ಪ್ರಕೃತಿ ಪ್ರಿಯರಿಗೆ ಈ ಜಾಗ ತುಂಬಾನೇ ಇಷ್ಟವಾಗುತ್ತೆ. ಇಲ್ಲಿ ನೀವು ಜೀಪ್ ಸಫಾರಿ ಮತ್ತು ಟ್ರೆಕ್ಕಿಂಗ್ ಕೂಡ ಎಂಜಾಯ್ ಮಾಡಬಹುದು.
38
ಓಲ್ಡ್ ಗೋವಾದ ಐತಿಹಾಸಿಕ ಕಟ್ಟಡಗಳು
ಇತಿಹಾಸ ಮತ್ತು ವಾಸ್ತುಶಿಲ್ಪದ ಬಗ್ಗೆ ಆಸಕ್ತಿ ಇರುವವರಿಗೆ ಓಲ್ಡ್ ಗೋವಾ ಹೇಳಿ ಮಾಡಿಸಿದ ಜಾಗ. ಇಲ್ಲಿನ ಚರ್ಚ್‌ಗಳು ಮತ್ತು ಕಾನ್ವೆಂಟ್‌ಗಳು ಗೋವಾದ ಪೋರ್ಚುಗೀಸ್ ಪರಂಪರೆಯನ್ನು ನೆನಪಿಸುತ್ತವೆ. ಬೆಸಿಲಿಕಾ ಆಫ್ ಬಾಮ್ ಜೀಸಸ್, ಸೇ ಕ್ಯಾಥೆಡ್ರಲ್‌ನಂತಹ ಪ್ರಸಿದ್ಧ ಕಟ್ಟಡಗಳು ಇಲ್ಲಿವೆ. ಯುನೆಸ್ಕೋ ಕೂಡ ಈ ಐತಿಹಾಸಿಕ ತಾಣಗಳಿಗೆ ಮಾನ್ಯತೆ ನೀಡಿದೆ.
ಪಣಜಿಯ ಫಾಂಟೈನ್ಹಾಸ್ ಪ್ರದೇಶಕ್ಕೆ ಕಾಲಿಟ್ಟರೆ ಗೋವಾದಲ್ಲೇ ಬೇರೊಂದು ಪ್ರಪಂಚಕ್ಕೆ ಹೋದಂತೆ ಅನಿಸುತ್ತೆ. ಪೋರ್ಚುಗೀಸ್ ಶೈಲಿಯ ಹಳೆಯ ಮನೆಗಳು, ಬಣ್ಣ ಬಣ್ಣದ ಗೋಡೆಗಳು, ಸಣ್ಣ ಬೀದಿಗಳು ಈ ಜಾಗಕ್ಕೆ ವಿಶೇಷ ಕಳೆ ತಂದುಕೊಟ್ಟಿವೆ. ಇಲ್ಲಿನ ಬೀದಿಗಳಲ್ಲಿ ನಡೆದಾಡುತ್ತಾ ಫೋಟೋ ಕ್ಲಿಕ್ಕಿಸಿಕೊಳ್ಳಲು ಇದು ಬೆಸ್ಟ್ ಪ್ಲೇಸ್.
58
ಸಾಂಬಾರ ಬೆಳೆಗಳ ತೋಟ
ಗೋವಾದ ಹಸಿರನ್ನು ಬೇರೆಯದೇ ಕೋನದಲ್ಲಿ ನೋಡಬೇಕೆಂದರೆ ನೀವು ಸ್ಪೈಸ್ ಪ್ಲಾಂಟೇಶನ್‌ಗಳಿಗೆ ಭೇಟಿ ನೀಡಬೇಕು. ವಿಶೇಷವಾಗಿ ಪೋಂಡಾ ಭಾಗದ ತೋಟಗಳಲ್ಲಿ ಕಾಳುಮೆಣಸು, ವೆನಿಲ್ಲಾ, ದಾಲ್ಚಿನ್ನಿಯಂತಹ ಸಾಂಬಾರ ಪದಾರ್ಥಗಳನ್ನು ಹೇಗೆ ಬೆಳೆಯುತ್ತಾರೆ ಅಂತ ನೀವು ನೋಡಬಹುದು. ಗೋವಾದ ಕೃಷಿ ಪದ್ಧತಿ ಮತ್ತು ಆಹಾರ ಸಂಸ್ಕೃತಿಯನ್ನು ತಿಳಿಯಲು ಇದು ಸಹಾಯ ಮಾಡುತ್ತೆ.
68
ಚೋರಾವ್ ದ್ವೀಪ.. ಪಕ್ಷಿಗಳ ನಡುವೆ ಬೋಟ್ ರೈಡ್
ಮಾಂಡೋವಿ ನದಿಯಲ್ಲಿರುವ ಚೋರಾವ್ ದ್ವೀಪ ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ. ಇಲ್ಲಿನ ಸಲೀಂ ಅಲಿ ಪಕ್ಷಿಧಾಮದ ಸುತ್ತಮುತ್ತ ಮ್ಯಾಂಗ್ರೋವ್ ಕಾಡುಗಳು ಮತ್ತು ವಿವಿಧ ಜಾತಿಯ ಪಕ್ಷಿಗಳನ್ನು ನೀವು ನೋಡಬಹುದು. ಬೋಟ್ ರೈಡ್ ಮಾಡುತ್ತಾ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುವುದೇ ಒಂದು ವಿಶೇಷ ಅನುಭವ.
78
ಅಗುಡಾ ಮತ್ತು ಚಪೋರಾ ಕೋಟೆಗಳು
ಗೋವಾದ ಇತಿಹಾಸವನ್ನು ತಿಳಿಯಲು ಅಲ್ಲಿನ ಕೋಟೆಗಳನ್ನು ನೋಡಲೇಬೇಕು. ಸಮುದ್ರದ ಪಕ್ಕದಲ್ಲೇ ಇರುವ ಅಗುಡಾ ಕೋಟೆ ಗೋವಾದ ಐತಿಹಾಸಿಕ ಪರಂಪರೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. 'ದಿಲ್ ಚಾಹ್ತಾ ಹೈ' ಸಿನಿಮಾದಿಂದ ಚಪೋರಾ ಕೋಟೆ ಇನ್ನಷ್ಟು ಫೇಮಸ್ ಆಯ್ತು. ಬೆಟ್ಟದ ಮೇಲಿಂದ ಕಾಣುವ ಸಮುದ್ರ ತೀರ ಮತ್ತು ಸೂರ್ಯಾಸ್ತದ ದೃಶ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತೆ.
88
ಗೋವಾ ರಾಜ್ಯ ವಸ್ತುಸಂಗ್ರಹಾಲಯ
ಗೋವಾದ ಇತಿಹಾಸ, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪಣಜಿಯಲ್ಲಿರುವ ಗೋವಾ ಸ್ಟೇಟ್ ಮ್ಯೂಸಿಯಂಗೆ ಭೇಟಿ ನೀಡಿ. ಇಲ್ಲಿರುವ ಪುರಾತತ್ವ ವಸ್ತುಗಳು, ಕಲಾಕೃತಿಗಳು ಮತ್ತು ಐತಿಹಾಸಿಕ ಅವಶೇಷಗಳ ಮೂಲಕ ಗೋವಾದ ಪರಂಪರೆಯನ್ನು ನೀವು ಅರಿಯಬಹುದು. ಗೋವಾ ಟ್ರಿಪ್ ಅಂದ್ರೆ ಬರೀ ಬೀಚ್ ಅಲ್ಲ, ಈ ಹೊಸ ಅನುಭವಗಳನ್ನು ಪಡೆಯೋದನ್ನ ಮಿಸ್ ಮಾಡ್ಬೇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.