ಯಶ್ವಂತಪುರ ವಿಜಯಪುರ ಯಶ್ವಂತಪುರ (16 547/48) ಹಾಗೂ ಯಶ್ವಂತಪುರ ಸಿಂಧನೂರು ಯಶ್ವಂತಪುರ (16 545/46) ಪ್ರಯಾಣಿಕರಿಗೆ ಸಂತಸದ ಸುದ್ದಿಯನ್ನು ನೀಡಿದೆ. ಆಧುನಿಕ ಮೂಲ ಸೌಲಭ್ಯ ನೀಡುತ್ತಿರುವ ಕುರಿತು ಅಧಿಕಾರಿಗಳು ನೀಡಿದ ಮಾಹಿತಿ ಇಲ್ಲಿದೆ.
ಯಶ್ವಂತಪುರ ವಿಜಯಪುರ, ಯಶ್ವಂತಪುರ ಹಾಗೂ ಯಶ್ವಂತಪುರ ಸಿಂಧನೂರು
ಯಶ್ವಂತಪುರ ವಿಜಯಪುರ, ಯಶ್ವಂತಪುರ ಹಾಗೂ ಯಶ್ವಂತಪುರ ಸಿಂಧನೂರು ಯಶ್ವಂತಪುರ ರೈಲಿಗೆ ರೈಲ್ವೆ ಇಲಾಖೆ (ನೈಋತ್ಯ ವಲಯ) ಆಧುನಿಕ ತಂತ್ರಜ್ಞಾನದ ಎಲ್‌ಎಚ್‌ಪಿ ಕೋಚ್‌ಗಳನ್ನು ಅಳವಡಿಸಿ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಿದೆ.
25
ಐಸಿಎಫ್ ಬೋಗಿಗಳ ಬದಲಾವಣೆ
ಯಶ್ವಂತಪುರ ವಿಜಯಪುರ ಯಶ್ವಂತಪುರ (16 547/48) ಹಾಗೂ ಯಶ್ವಂತಪುರ ಸಿಂಧನೂರು ಯಶ್ವಂತಪುರ (16 545/46) ಈ ಎರಡು ರೈಲುಗಳ ಸಾಂಪ್ರದಾಯಿಕ ಐಸಿಎಫ್ ಬೋಗಿಗಳನ್ನು ಬದಲಿಸಿ, ಆಧುನಿಕ ತಂತ್ರಜ್ಞಾನದ ಎಲ್‌ಎಚ್‌ಪಿ ಕೋಚ್‌ಗಳನ್ನು ಅಳವಡಿಸಿ ಮೇಲ್ದರ್ಜೆಗೇರಿಸಿ ಮೇ 9ರಿಂದ ಅನ್ವಯವಾಗುವಂತೆ ಆದೇಶ ಹೊರಡಿಸಿದೆ. ಪ್ರತಿಯೊಂದು ರೈಲಿಗೆ ಎರಡು ಮೂರನೇ ದರ್ಜೆ ಎಸಿ ಏಳು ಸ್ಲೀಪರ್ ಬೋಗಿ ಹಾಗೂ ಒಂಬತ್ತು ಸಾಮಾನ್ಯ ದರ್ಜೆಯ ಬೋಗಿಗಳನ್ನು ಅಳವಡಿಸಲಾಗಿದೆ.
35
ಎಲ್‌ಎಚ್‌ಪಿ ಕೋಚ್
ಜರ್ಮನ್ ದೇಶದ ಯಂತ್ರಶಿಲ್ಪಿ ಲಿಂಕ್‌ಹೋಫ್‌ಮೆನ್ ಬೋಷ್ಚ್ ಅವರು ಸಂಶೋಧಿಸಿ ಅವಿಷ್ಕಾರಗೊಳಿಸಿದ ಅವರ ಹೆಸರಿನ ಎಲ್‌ಎಚ್‌ಪಿ ಕೋಚ್‌ಗಳು ಹೆಚ್ಚು ಸುರಕ್ಷತೆ, ಆರಾಮದಾಯಕ ಹಾಗೂ ವೇಗದ ಸಾಮರ್ಥ್ಯವನ್ನು ಹೊಂದಿವೆ. ಅಪಘಾತದ ವೇಳೆ ಒಂದು ಬೋಗಿಯು ಮತ್ತೊಂದು ಬೋಗಿಯ ಮೇಲೆ ಏರುವ ಅಥವಾ ಬೀಳುವ ಕಡಿಮೆ ಅಪಾಯವಿರುವುದರಿಂದ ಜೀವಹಾನಿಯ ಪ್ರಮಾಣವೂ ಕಡಿಮೆ ಇರುತ್ತದೆ.
ಈ ಬೋಗಿಗಳು ಹೆಚ್ಚು ಆರಾಮದಾಯಕವಾಗಿದ್ದು, ಕಂಪನ ಮತ್ತು ಜರ್ಕ್ ಕಡಿಮೆಯಾಗಿರುವುದರಿಂದ ಮೃದುವಾದ ಪ್ರಯಾಣದ ಅನುಭವವಾಗುತ್ತದೆ. ಸಂಚಾರದ ವೇಳೆಯಲ್ಲಿ ಕಡಿಮೆ ಶಬ್ದ, ಬೋಗಿಯ ಒಳಗಡೆ ಉತ್ತಮ ಬೆಳಕು, ಒಳಾಂಗಣ ವಿನ್ಯಾಸ ಹೆಚ್ಚು ಸುಧಾರಿತವಾಗಿದೆ. ಈ ಕೋಚುಗಳು ಗಂಟೆಗೆ 100 ಕಿ.ಮೀ.ಗಿಂತ ಹೆಚ್ಚಿನ ವೇಗ ಸಾಮರ್ಥ್ಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದ್ದು, ರೈಲಿನ ವೇಗ ನಿಯಂತ್ರಣ ವ್ಯವಸ್ಥೆ ಅತ್ಯುತ್ತಮವಾಗಿದೆ. ಬೋಗಿಗಳ ತೂಕ ಕಡಿಮೆ ಇರುವುದರಿಂದ ಎಂಜಿನ್ ಮೇಲಿನ ಒತ್ತಡ ಕಡಿಮೆಯಾಗಿ ಇಲಾಖೆಯ ನಿರ್ವಹಣೆ ವೆಚ್ಚ ಕಡಿಮೆ ಇರುತ್ತದೆ.
ಪ್ರಯಾಣಿಕರಿಗೆ ಆಧುನಿಕ ಮಾದರಿಯ ಮೂಲಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿರುವ ರೈಲ್ವೆ ಇಲಾಖೆ ಕ್ರಮವನ್ನು ವಿಜಯನಗರ ರೈಲ್ವೆ ಬಳಕೆದಾರರ ಸಂಘ ಹಾಗೂ ಸಲಹಾ ಸಮಿತಿಯ ಹಿರಿಯ ಸದಸ್ಯ ಬಾಬುಬಾಲ್ ಜೈನ್, ವಿಜಯನಗರ ರೈಲ್ವೆ ಬಳಿಕೆದಾರರ ಸಂಘದ ಅಧ್ಯಕ್ಷ ವೈ. ಯಮುನೇಶ್, ಕಾರ್ಯದರ್ಶಿ ಮಹೇಶ್ ಕುಡುತಿನಿ ಸ್ವಾಗತಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.