ಪ್ರೀತಿ ಮತ್ತು ತ್ಯಾಗದ ಸಂಕೇತವಾದ ತಾಜ್ ಮಹಲ್(Taj mahal) ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ತಾಜ್ ಮಹಲ್ ನೋಡಲು ದೇಶ ಮತ್ತು ವಿಶ್ವದಾದ್ಯಂತದ ಪ್ರವಾಸಿಗರು ಆಗ್ರಾಕ್ಕೆ ಬರುತ್ತಾರೆ. ವಿಶೇಷವಾಗಿ, ತಾಜ್ ಉತ್ಸವದ ಬಗ್ಗೆ ಪ್ರವಾಸಿಗರಲ್ಲಿ ಹೆಚ್ಚಿನ ಕ್ರೇಜ್ ಇದೆ. ತಾಜ್ ಮಹೋತ್ಸವವನ್ನು ಪ್ರತಿವರ್ಷ ಫೆಬ್ರವರಿ ತಿಂಗಳಲ್ಲಿ ಆಚರಿಸಲಾಗುತ್ತದೆ.
ಈ ವರ್ಷವೂ ಫೆಬ್ರವರಿ 18 ರಿಂದ ಫೆಬ್ರವರಿ 27 ರವರೆಗೆ ತಾಜ್ ಮಹೋತ್ಸವವನ್ನು(Taj mahotsav) ಆಯೋಜಿಸಲಾಗಿದೆ. ಇದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿವೆ. ನೀವು ಕೂಡ ತಾಜ್ ಮಹಲ್ ನೋಡಲು ಆಗ್ರಾಕ್ಕೆ ಹೋಗಲು ಯೋಜಿಸುತ್ತಿದ್ದರೆ, ಫೆಬ್ರವರಿ ತಿಂಗಳಲ್ಲಿ ನೀವು ಆಗ್ರಾಕ್ಕೆ ಹೋಗಬಹುದು
ತಾಜ್ ಮಹಲ್ ಮತ್ತು ತಾಜ್ ಉತ್ಸವದ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳೋಣ-
ಮುಮ್ತಾಜ್ ಮಹಲ್ ನ(Mumtaz mahal) ನೆನಪಿಗಾಗಿ ನಿರ್ಮಿಸಲಾದ ಅರಮನೆಯ ಸಮಾಧಿ
ಪ್ರೀತಿಯ ಸಂಕೇತವಾದ ತಾಜ್ ಮಹಲ್ ಉತ್ತರ ಪ್ರದೇಶದ ಆಗ್ರಾ ನಗರದಲ್ಲಿದೆ. ಈ ಸಮಾಧಿಯನ್ನು ಶಹಜಹಾನ್ ತನ್ನ ಬೇಗಂನ ನೆನಪಿಗಾಗಿ ನಿರ್ಮಿಸಿದನು. ಇದು ವಾಸ್ತುಶಿಲ್ಪದ ಒಂದು ವಿಶಿಷ್ಟ ಉದಾಹರಣೆಯಾಗಿದೆ. 1983 ರಲ್ಲಿ, ಯುನೆಸ್ಕೋ ತಾಜ್ ಮಹಲ್ ಅನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಿಸಿತು.
ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ತಾಜ್ ಮಹಲ್ ಗೆ ಭೇಟಿ ನೀಡಲು ಬರುತ್ತಾರೆ. ತಾಜ್ ಮಹಲ್ ಅನ್ನು ದೇಶದ ವಿವಿಧ ನಗರಗಳಲ್ಲಿ ನಕಲು ಮಾಡಲಾಗಿದೆ. ಆದರೆ, ಆಗ್ರಾದ ತಾಜ್ ಮಹಲ್ ನ ಸೌಂದರ್ಯವು(Beauty) ಅತ್ಯಂತ ವಿಶಿಷ್ಟವಾಗಿದೆ. ಇದರಂತೆ ಮತ್ತೊಂದು ಅದ್ಭುತವನ್ನು ಸೃಷ್ಟಿಸಲು ಸಾಧ್ಯವೇ ಇಲ್ಲ ಎನ್ನುವಷ್ಟು ಸುಂದರವಾಗಿದೆ.
ಉತ್ಸವದ ಮುಖ್ಯಾಂಶಗಳು ಹೀಗಿದೆ:
ಆಗ್ರಾದಲ್ಲಿ ತಾಜ್ ಉತ್ಸವ ನಡೆಯಲಿದೆ. ತಾಜ್ ಮಹಲ್ ನ ಈಶಾನ್ಯ ದ್ವಾರದ ಬಳಿ ಉತ್ಸವ ನಡೆಯಲಿದೆ. ಈ ಉತ್ಸವದಲ್ಲಿ, ನೀವು ನೃತ್ಯ(Dance), ಹಾಡುಗಾರಿಕೆ ಮತ್ತು ಸಂಗೀತವನ್ನು ಆನಂದಿಸಬಹುದು. ದೇಶಾದ್ಯಂತದ ಕಲಾವಿದರು ತಾಜ್ ಉತ್ಸವದಲ್ಲಿ ಭಾಗವಹಿಸುತ್ತಾರೆ.
ಫೆಬ್ರವರಿ 18 ರಿಂದ ಫೆಬ್ರವರಿ 27 ರವರೆಗೆ ತಾಜ್ ಮಹೋತ್ಸವವನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ, ನೀವು ಕರಕುಶಲತೆಯ ಬಗ್ಗೆ ತಿಳಿದುಕೊಳ್ಳಬಹುದು. ನೀವು ಸ್ಥಳೀಯ ರುಚಿಗಳನ್ನು(Taste) ಸಹ ಆನಂದಿಸಬಹುದು.
ಪ್ರತಿ ವ್ಯಕ್ತಿಯ ಪ್ರವೇಶವು 50 ರೂ. ಇರಲಿದೆ. ಹಾಗೆಯೇ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮತ್ತು ವಿದೇಶಿ ಪ್ರವಾಸಿಗರಿಗೆ ಪ್ರವೇಶ ಉಚಿತವಾಗಿದೆ. ಅದೇ ಸಮಯದಲ್ಲಿ, 100 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಗುಂಪಿಗೆ ಪ್ರವೇಶ ಶುಲ್ಕವು (Entrance fee) 500 ರೂ ಇರಲಿದೆ. ನೀವು ಈ ಸಂದರ್ಭದಲ್ಲಿ ತಾಜ್ ಮಹಲ್ಗೆ ಭೇಟಿ ನೀಡಿ ಒಳ್ಳೇ ಸಮಯ ಕಳೆಯಬಹುದು.