Travel Tips : ಟ್ರಾವೆಲ್ ಮಾಡೋವಾಗ ಈ ಟ್ರಿಕ್ಸ್ ಉಪಯೋಗಿಸಿ ಹಣ ಉಳಿಸಿ

First Published Jan 7, 2023, 5:09 PM IST

ನೀವು ಸಹ ಟ್ರಾವೆಲ್ ಮಾಡೋದನ್ನು ಇಷ್ಟಪಡುತ್ತೀರಾ? ಆದರೆ ಅದೇ ಸಮಯದಲ್ಲಿ ನೀವು ನಿಮ್ಮ ಹಣವನ್ನು ಉಳಿಸಲು ಬಯಸುತ್ತೀರಿ ಅಂತಾದರೆ ಈ ಸಲಹೆಗಳನ್ನು ಅನುಸರಿಸಿ. ಇಲ್ಲಿ ಟ್ರಾವೆಲ್ ಮಾಡೋ ಸಮಯದಲ್ಲಿ ನಿಮ್ಮ ಹಣವನ್ನು ಉಳಿಸೋದು ಹೇಗೆ ಅನ್ನೋದರ ಬಗ್ಗೆ ಮಾಹಿತಿ ನೀಡಲಾಗಿದೆ. 

ಕೆಲವೊಮ್ಮೆ ನಾವು ಬ್ಯಾಕ್ ಟು ಬ್ಯಾಕ್ ಟ್ರಾವೆಲ್ ಮಾಡುತ್ತೇವೆ. ಹೀಗಿರೋವಾಗ ನಾವು ಕಡಿಮೆ ಹಣದಲ್ಲಿ ಪ್ರಯಾಣ ಮಾಡಲು ಟ್ರೈ ಮಾಡಬೇಕು. ಪ್ರಯಾಣದ ಸಮಯದಲ್ಲಿ ಹಣ ಉಳಿಸುವುದು ಬಹಳ ಮುಖ್ಯ. ಮನೆಯಿಂದ ಹೊರಬಂದ ನಂತರ, ಹಣವನ್ನು ಹೇಗೆ ಖರ್ಚು ಮಾಡಲಾಗುತ್ತಿದೆ ಎಂದು ನಮಗೆ ತಿಳಿದಿರೋದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ಹೆಚ್ಚು ಚಿಂತಿಸಬೇಕಾಗಿಲ್ಲ. ಇಲ್ಲಿ ನಿಮಗೆ ಕೆಲವು ಸಲಹೆಗಳನ್ನು (budget friendly travel tips) ಹೇಳಲಿದ್ದೇವೆ, ಇದರ ಸಹಾಯದಿಂದ, ಪ್ರಯಾಣದ ಸಮಯದಲ್ಲಿ ನೀವು ಹಣ ಉಳಿಸಬಹುದು.

ಸಾರ್ವಜನಿಕ ವಾಹನ ಬಳಸಿ (public transport)

ನಿಮ್ಮ ಪ್ರಯಾಣವನ್ನು ಬಜೆಟ್ ಫ್ರೆಂಡ್ಲಿಯಾಗಿ ಮಾಡಲು ನೀವು ಸಾರ್ವಜನಿಕ ವಾಹನಗಳನ್ನು ಸಹ ಬಳಸಬಹುದು, ಆದ್ದರಿಂದ ನೀವು ಬಯಸಿದರೆ, ಶೇರಿಂಗ್ ಕ್ಯಾಬ್ (sharing cab) ಅಥವಾ ಸ್ಥಳೀಯ ಕಾರನ್ನು ಬಳಸಿ. ಇದನ್ನು ಮಾಡುವ ಮೂಲಕ, ನೀವು ಸಾಕಷ್ಟು ಹಣವನ್ನು ಸಹ ಉಳಿಸಬಹುದು. 

ಪಬ್ಲಿಕ್ ಟ್ರಾನ್ಸ್ ಪೋರ್ಟ್ ಬಳಸೋದರಿಂದ  ನೀವು ಅನೇಕ ಬಾರಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಆದರೆ ಸಾರ್ವಜನಿಕ ಪ್ರಯಾಣಕ್ಕೆ ತುಂಬಾ ಕಡಿಮೆ ವೆಚ್ಚವಾಗುತ್ತದೆ. ಟ್ರಾವೆಲ್ ಮಾಡೋವಾಗ ಹೆಚ್ಚು ಖರ್ಚಾಗೋದು ವಾಹನಗಳಿಗೆ, ಹಾಗಾಗಿ ನೀವು ಜನಪ್ರಿಯ ಜನರಿಂದ ತುಂಬಿರುವ ಪ್ರದೇಶಗಳಲ್ಲಿ ಟ್ರಾವೆಲ್ ಮಾಡೋದಾದರೆ ಸಾರ್ವಜನಿಕ ವಾಹನಗಳನ್ನೇ (public vehicle)ಬಳಸಿ. 

ಹೋಟೆಲ್ ಬದಲು ಹಾಸ್ಟೆಲ್ ಬುಕ್ ಮಾಡಿ

ನೀವು ಬಯಸಿದರೆ, ಹೋಟೆಲಿನಲ್ಲಿ ಕೋಣೆಯನ್ನು ಕಾಯ್ದಿರಿಸುವ ಬದಲು ಹಾಸ್ಟೆಲಿನಲ್ಲಿ ಡಾರ್ಮಿಟರಿ (hostel dormitory) ಹಾಸಿಗೆ ಕಾಯ್ದಿರಿಸಿ. ಈ ಸಂದರ್ಭದಲ್ಲಿ, ನೀವು ಸಾಕಷ್ಟು ಹಣ ಉಳಿಸಲು ಸಾಧ್ಯವಾಗುತ್ತದೆ. ನೀವು ಟ್ರಾವೆಲ್ ಮಾಡೋವಾಗ ನೀವು ನೋಡುವ ಜಾಗ ತುಂಬಾ ಮುಖ್ಯವಾಗಿರುತ್ತೆ. ನೀವು ಉಳಿದುಕೊಳ್ಳುವ ಜಾಗ ಅಲ್ಲ. 
 

ಅಲ್ಲದೇ ಹೋಟೆಲ್ ತುಂಬಾ ದುಬಾರಿ. ನೀವು ಏಕಾಂಗಿಯಾಗಿ ಪ್ರಯಾಣಿಸಿದರೆ, ನೀವು ಡಾರ್ಮೆಟರಿಗಳನ್ನು ಮಾತ್ರ ಕಾಯ್ದಿರಿಸಬೇಕು. ಆದರೆ ಅದಕ್ಕೂ ಮುನ್ನ ಸೆಕ್ಯುರಿಟಿ, ಕ್ಲೀನ್ ನೆಸ್ ಬಗ್ಗೆ ಚೆಕ್ ಮಾಡಿಕೊಂಡರೆ ಉತ್ತಮ. ಪ್ರಯಾಣದ ಸಮಯದಲ್ಲಿ, ನೀವು ಈ ರೀತಿಗಳಲ್ಲಿ ಸಾಕಷ್ಟು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ.

ಬಜೆಟ್ ನಿರ್ಧರಿಸಿ

ಎಲ್ಲಿಗಾದರೂ ಹೋಗುವ ಮೊದಲು ನೀವು ಬಜೆಟ್ ಅನ್ನು ನಿರ್ಧರಿಸಬೇಕು (plan your budget). ಇದನ್ನು ಮಾಡುವುದರಿಂದ, ನೀವು ಸಾಕಷ್ಟು ಹಣವನ್ನು ಉಳಿಸಲು ಸಾಧ್ಯ. ಅನೇಕ ಬಾರಿ ನಾವು ಬಜೆಟ್ ಇಲ್ಲದೆ ಮತ್ತು ಯಾವುದೇ ಯೋಜನೆಯಿಲ್ಲದೆ ಪ್ರಯಾಣ ಮಾಡುತ್ತೇವೆ, ಈ ಕಾರಣದಿಂದಾಗಿ ನಾವು ಸಾಕಷ್ಟು ಖರ್ಚು ಮಾಡುತ್ತೇವೆ. ನೀವು ಅದನ್ನು ಮಾಡಬೇಕಾಗಿಲ್ಲ.

ಫೈವ್ ಸ್ಟಾರ್ ರೆಸ್ಟೋರೆಂಟ್ ಬದಲು ಲೋಕಲ್ ಆಹಾರ ತಿನ್ನಿ

ನೀವು ಹೋದ ಜಾಗದಲ್ಲೆಲ್ಲಾ ಫೈವ್ ಸ್ಟಾರ್ ಹೊಟೇಲ್ ಗಳಿಗೆ (5 star restaurant) ಹೋಗಿ ತಿಂಡಿ ತಿನ್ನಬೇಕೆಂದೇನೂ ಇಲ್ಲ. ಆ ಜಾಗದ ನಿಜವಾದ ಸ್ವಾದ ಸವಿಯಬೇಕು ಅನ್ನೋದಾದ್ರೆ ನೀವು ಅಲ್ಲಿನ ಸ್ಥಳೀಯ ಹೊಟೇಲ್ ಗಳಲ್ಲಿ ಆಹಾರ ಸೇವಿಸಬೇಕು. ಇವು ಹಣವನ್ನು ಉಳಿಸುತ್ತದೆ, ಜೊತೆಗೆ ಸ್ಥಳೀಯ ಆಹಾರದ ಬಗ್ಗೆಯೂ ತಿಳಿಸುತ್ತೆ. 

ನಾವು ನೀಡಿದ ಸಲಹೆಗಳನ್ನು ನೀವು ಅನುಸರಿಸಿದರೆ, ನೀವು ಸಾಕಷ್ಟು ಹಣ ಉಳಿಸಬಹುದು. ಅಲ್ಲದೆ, ಪ್ರಯಾಣದ ಸಮಯದಲ್ಲಿ, ನೀವೆ ತಯಾರಿಸಿದ ಕೆಲವು ಆಹಾರ ಪದಾರ್ಥಗಳನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಬೇಕು, ಹೊರಗಿನ ಆಹಾರವನ್ನು ಹೆಚ್ಚು ತಿನ್ನಬೇಡಿ. 

click me!