ಭಾರತದ ವಿಶಿಷ್ಟ ಗ್ರಾಮಗಳ ಬಗ್ಗೆ ತಿಳಿದ್ರೆ ಹೀಗೂ ಉಂಟೆ ಅನ್ನೋದು ಖಚಿತ

First Published | Apr 26, 2023, 6:13 PM IST

ಭಾರತದಲ್ಲಿ ಅನೇಕ ವಿಚಿತ್ರ ಹಳ್ಳಿಗಳಿವೆ, ಅವುಗಳ ಬಗ್ಗೆ ತಿಳಿದ ನಂತರ, ನೀವು ಸ್ವಲ್ಪ ಸಮಯ ಯೋಚಿಸಬೇಕಾಗಿ ಬರುತ್ತೆ. ಒಂದು ಗ್ರಾಮ ಸದ್ಯ ಭೂತದ ಊರಾಗಿದ್ದರೆ, ಮತ್ತೊಂದು ಗ್ರಾಮ ಪೂರ್ತಿಯಾಗಿ ಮರಳಿನಿಂದ ತುಂಬಿದೆ. ಇನ್ನೊಂದೆಡೆ ಹಾವುಗಳು ಜನರೊಂದಿಗೆ ವಾಸಿಸುತ್ತೆ. ಬನ್ನಿ ಈ ಗ್ರಾಮಗಳ ಬಗ್ಗೆ ತಿಳಿಯೋಣ. 

ಬರ್ವಾನಾ ಕಲಾ ಗ್ರಾಮ (Barwan Village)
ಇದು ಬಿಹಾರದ ಒಂದು ಹಳ್ಳಿ. ಈ ಹಳ್ಳಿಯ ಬಗ್ಗೆ ಹೇಳೋದಾದ್ರೆ, ಅನೇಕ ವರ್ಷಗಳಿಂದ ಇಲ್ಲಿ ಯಾವುದೇ ಮನುಷ್ಯನು ಮದುವೆಯಾಗಿಲ್ಲ. ಸುಮಾರು 50 ವರ್ಷಗಳ ನಂತರ ಒಬ್ಬರು ಇಲ್ಲಿ ವಿವಾಹವಾದರು ಎಂದು ಹೇಳಲಾಗುತ್ತದೆ. ಮದುವೆಯಾದಗ ಶಾಪಗ್ರಸ್ತ ಗ್ರಾಮ ಇದಾಗಿದೆ.      

ಕುಲಧಾರಾ ಗ್ರಾಮ (Kuldhara Village)
ಇದು ರಾಜಸ್ಥಾನದ ಒಂದು ಹಳ್ಳಿ. ಇಲ್ಲಿನ ಜನರು ರಾತ್ರೋರಾತ್ರಿ ಈ ಗ್ರಾಮವನ್ನು ಖಾಲಿ ಮಾಡಿದ್ದರು ಎಂದು ಈ ಗ್ರಾಮದ ಬಗ್ಗೆ ಹೇಳಲಾಗುತ್ತದೆ. ಇಂದು ಈ ಗ್ರಾಮವು ಶಿಥಿಲಾವಸ್ಥೆಯಲ್ಲಿದೆ. ಇದನ್ನು ಭಯಾನಕ ಸ್ಥಳ ಎಂದೂ ಕರೆಯಲಾಗುತ್ತದೆ. ಇಲ್ಲಿ ಇಂದಿಗೂ ರಾತ್ರಿ ಹೊತ್ತು ಜನರು ಹೋಗಲು ಭಯಪಡುತ್ತಾರೆ.
 

Tap to resize

ಮತ್ತೂರು ಗ್ರಾಮ (Mattur Sanskrit Village)
ಇದು ಕರ್ನಾಟಕದ ಒಂದು ಹಳ್ಳಿ. ಈ ಹಳ್ಳಿಯ ಬಗ್ಗೆ ಒಂದು ಜಾನಪದ ದಂತಕಥೆಯಿದೆ, ಇಲ್ಲಿನ ಜನರು ಸಂಸ್ಕೃತದಲ್ಲಿ ಮಾತ್ರ ಮಾತನಾಡುತ್ತಾರೆ. ಆದಾಗ್ಯೂ, ಇಲ್ಲಿನ ಸ್ಥಳೀಯ ಭಾಷೆಯನ್ನು ಕನ್ನಡವೆಂದು ಪರಿಗಣಿಸಲಾಗಿದೆ. ಇಂದಿಗೂ ನೀವು ಅಲ್ಲಿ ಭೇಟಿ ನೀಡಿದರೆ ಸಂಸ್ಕೃತ ಮಾತನಾಡುವ ಜನರನ್ನು ನೋಡಬಹುದು.

ಲೋಂಗ್ವಾ ಗ್ರಾಮ (Longwo Village)
ಲೋಂಗ್ವಾ ಗ್ರಾಮವು ನಾಗಾಲ್ಯಾಂಡ್ನಲ್ಲಿದೆ. ಇಲ್ಲಿನ ಅನೇಕ ಜನರು ದ್ವಿ ಪೌರತ್ವವನ್ನು ಹೊಂದಿದ್ದಾರೆ. ಒಂದು ಭಾಗ ಭಾರತದಲ್ಲಿದೆ ಮತ್ತು ಇನ್ನೊಂದು ಭಾಗವು ಮ್ಯಾನ್ಮಾರ್ನಲ್ಲಿರುವಂತಹ ಅನೇಕ ಮನೆಗಳು ಇಲ್ಲಿವೆ,  ಚೆನ್ನಾಗಿದೆ ಅಲ್ವ?
 

ಖೊನೋಮಾ ಗ್ರಾಮ (Khonomo Village)
ಈ ಗ್ರಾಮವು ಕೊಹಿಮಾದಲ್ಲಿದೆ. ಖೊನೋಮಾವನ್ನು ಭಾರತದಲ್ಲಿ ಮಾತ್ರವಲ್ಲದೆ ಏಷ್ಯಾದ ಮೊದಲ ಹಸಿರು ಗ್ರಾಮವೆಂದು ಪರಿಗಣಿಸಲಾಗಿದೆ. ಇಲ್ಲಿನ ಜನರು ಮಾರ್ಷಲ್ ಆರ್ಟ್ ನಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಇದರಿಂದಲೇ ಇಲ್ಲಿನ ಜನರನ್ನು ಗುರುತಿಸಲಾಗುತ್ತೆ.        

ಶೆತ್ಪಾಲ್ ಗ್ರಾಮ (Shetpal maharashtra)
ಶೆತ್ಪಾಲ್ ಮಹಾರಾಷ್ಟ್ರದ ಒಂದು ಹಳ್ಳಿ. ಇಲ್ಲಿ ಅಪಾಯಕಾರಿ ನಾಗರಹಾವು ಮತ್ತು ಗ್ರಾಮದ ಜನರು ಒಂದೇ ಸೂರಿನಡಿಯಲ್ಲಿ ಶಾಂತಿಯುತವಾಗಿ ವಾಸಿಸುತ್ತಿದ್ದಾರೆ ಎಂಬುದು ಈ ಗ್ರಾಮದ ವಿಶೇಷತೆಯಾಗಿದೆ. ಇಲ್ಲಿ ಸಣ್ಣ ಮಕ್ಕಳು ಸಹ ಹಾವುಗಳೊಂದಿಗೆ ಆಟವಾಡುತ್ತಾರೆ. 

Image: Getty Images

ಧೋರ್ಡೊ ಗ್ರಾಮ (Dhordo Village)
ಈ ಗ್ರಾಮವು ಗುಜರಾತ್ ನಲ್ಲಿದೆ. ಧೋರ್ಡೊ ರನ್ ಆಫ್ ಕಚ್ ನಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದೆ. ಈ ಗ್ರಾಮವು ಬಿಳಿ ಉಪ್ಪಿನ ಮರುಭೂಮಿ ಮತ್ತು ಲಖಪತ್ ನ ಪ್ರಾಚೀನ ಮಣ್ಣಿನ ಕೋಟೆಗೆ ಹೆಸರುವಾಸಿಯಾಗಿದೆ.

Latest Videos

click me!