ಶಿವ ಇದರಿಂದ ಕೋಪಗೊಂಡು ಮೂರನೇ ಕಣ್ಣು ಬಿಡುತ್ತಾನೆ, ಆವಾಗ ಬಂದ ಜ್ಯೋತಿಯಿಂದ ಒಬ್ಬ ಐದು ವರ್ಷದ ಬಾಲಕ ಹುಟ್ಟುತ್ತಾನೆ, ಆತನೆ ಬಟುಕ್ ಭೈರವ್.(Batuk Bhairav) ಈತನೂ ಬ್ರಹ್ಮನನ್ನು ಆ ಪುಸ್ತಕ ಬರೆಯದಂತೆ ತಡೆಯುತ್ತಾನೆ, ಆದರೆ ಬ್ರಹ್ಮ ಕಡೆಗಣಿಸಿದಾಗ, ಕೋಪಗೊಂಡ ಬಟುಕ್ ಬ್ರಹ್ಮನ ಐದನೇ ಮುಖವನ್ನು ನಾಶ ಮಾಡುತ್ತಾರೆ. ಅಲ್ಲದೇ ಕೋಪದಿಂದಾಗಿ ತನ್ನ ಐದನೇ ವಯಸ್ಸಿನಲ್ಲಿ ಕುಡಿಯಲು ಆರಂಭಿಸುತ್ತಾನೆ. ಮುಂದೇ ಆತನೇ ಕಾಲಭೈರವನಾಗಿ, ತನ್ನ ಬ್ರಹ್ಮ ಹತ್ಯ ಧೋಷ ನಿವಾರಿಸಲು ಉಜ್ಜಯಿನಿ ಅವಂತಿಕಾ ನಗರದಲ್ಲಿ ಶಿಪ್ರಾ ನದಿಯಲ್ಲಿ ಸ್ನಾನ ಮಾಡಿ ಮಹಾಕಾಲ್ ಕಾಡಿಗೆ ಭೇಟಿ ನೀಡಿ ಪರ್ವತದ ಮೇಲೆ ತಪಸ್ಸು ಮಾಡುತ್ತಾನೆ. ಈ ಸ್ಥಳವನ್ನು ಭೈರವ ಪರ್ವತ ಎಂದು ಕರೆಯಲಾಗುತ್ತದೆ, ಮತ್ತು ಇಲ್ಲಿ ತಪಸ್ಸಿನ ಸಮಯದಲ್ಲಿ, ಭೈರವನು ಬ್ರಹ್ಮನನ್ನು ಕೊಂದ ಅಪರಾಧವನ್ನು ತೊಡೆದುಹಾಕಿದನು ಎನ್ನಲಾಗುತ್ತೆ.