ಶೂ ಪಾಲಿಶ್ ಮಾಡುವ ಕಿಟ್ ತರಹದ ಕೆಲವು ಕಿಟ್‌ಗಳು ತುರ್ತು ಸಂದರ್ಭಗಳಲ್ಲಿ ಉಪಯುಕ್ತವಾಗಿವೆ. ನೀವು ಇವುಗಳನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಬಹುದು.
ಆದರೆ ಹೋಟೆಲ್‌ನಲ್ಲಿರುವ ಹೇರ್ ಡ್ರೈಯರ್, ಡ್ರೆಸ್ಸಿಂಗ್ ಗೌನ್, ದಿಂಬುಗಳು, ಕರ್ಟನ್‌ಗಳು, ವರ್ಣಚಿತ್ರಗಳು, ದೀಪಗಳು ಇತ್ಯಾದಿಗಳು ಹೋಟೆಲ್‌ನ ಪರ್ಮನೆಂಟ್ ಪ್ರಾಪರ್ಟಿ. ಒಂದು ವೇಳೆ ನೀವು ಇವುಗಳನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದೇ ಆದಲ್ಲಿ ಕಳ್ಳತನವೆಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲ, ಇದಕ್ಕಾಗಿ ದಂಡ ವಿಧಿಸಬಹುದು. ಅಲ್ಲದೆ, ಮಿನಿ ಬಾರ್‌ನಲ್ಲಿ ಇರಿಸಲಾಗಿರುವ ಚಾಕೊಲೇಟ್‌ಗಳು ಅಥವಾ ತಿಂಡಿಗಳಿಗೆ ಬಿಲ್ ವಿಧಿಸಲಾಗುತ್ತದೆ. ಕೇಳದೆ ಅವುಗಳನ್ನು ತಿನ್ನುವುದರಿಂದ ನಿಮ್ಮ ಬಿಲ್‌ಗೆ ಸೇರಿಸಲಾಗುತ್ತದೆ.