ವೀಕೆಂಡ್‌ನಲ್ಲಿ ಪೋಷಕರನ್ನು ಖುಷಿಯಾಗಿಸಲು BMTCಯಿಂದ ಸುಂದರವಾದ ಅದ್ಭುತ ಪ್ಯಾಕೇಜ್

Published : Jun 20, 2025, 03:15 PM ISTUpdated : Jun 20, 2025, 03:16 PM IST

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಾರಾಂತ್ಯದಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ವಿಶೇಷ ಪ್ರವಾಸಿ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ.  ಶ್ರೀ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಸೇರಿದಂತೆ ಹಲವು ಕ್ಷೇತ್ರಗಳಿಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ www.ksrtc.in ಗೆ ಭೇಟಿ ನೀಡಿ.

PREV
15

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಾರ್ವಜನಿಕರಿಗಾಗಿ ವಿಶೇಷ ಪ್ರವಾಸಿ ಪ್ಯಾಕೇಜ್ ನೀಡುತ್ತಿದೆ. ಈ ಪ್ಯಾಕೇಜ್ ಶನಿವಾರ ಮತ್ತು ಭಾನುವಾರ ಮಾತ್ರ ಲಭ್ಯವಿರಲಿದೆ. ಈ ಪ್ರವಾಸಿ ಪ್ಯಾಕೇಜ್‌ನಲ್ಲಿ ಬೆಂಗಳೂರಿನ ಸುತ್ತಮುತ್ತಲಿನ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಲಾಗುತ್ತದೆ.

25

ಬೆಂಗಳೂರಿನ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ಬೆಂ.ಮ.ಸಾ.ಸಂಸ್ಥೆಯು “ಘಾಟಿ ಈಶ ಫೌಂಡೇಷನ್" ಎಂಬ ಹೆಸರಿನಡಿಯಲ್ಲಿ ಈ ಪ್ಯಾಕೇಜ್ ಆರಂಭಿಸಲಾಗಿದೆ. ವೀಕೆಂಡ್‌ನಲ್ಲಿ ಪೋಷಕರು ಹೊರಗಡೆ ಕರೆದುಕೊಂಡು ಹೋಗಲು ಇದು ಸುಂದರ ಮತ್ತು ಅದ್ಭುತವಾದ ಪ್ಯಾಕೇಜ್ ಆಗಿದೆ.

35

ಸಮಯ ಮತ್ತು ದಿನಾಂಕ

ವಾರಾಂತ್ಯ ದಿನಗಳಾದ ಶನಿವಾರ, ಭಾನುವಾರ ಹಾಗೂ ಸಾರ್ವತ್ರಿಕ ರಜೆ ದಿನಗಳಂದು ಹವಾನಿಯಂತ್ರಿತ ಬಸ್ಸಿನೊಂದಿಗೆ ಪ್ರವಾಸಿ ಸಾರಿಗೆ ಸೌಲಭ್ಯವನ್ನು ಪ್ರಾರಂಭಿಸಲಾಗುತ್ತಿದೆ. ಈ ಪ್ರವಾಸಿ ಪ್ಯಾಕೇಜ್ ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗುತ್ತದೆ. ಸಂಜೆ 7 ಗಂಟೆಗೆ ಹಿಂದಿರುಗಲಾಗುತ್ತದೆ

45

ಯಾವೆಲ್ಲಾ ದೇವಸ್ಥಾನಗಳಿಗೆ ಭೇಟಿ?

1.ಶ್ರೀ ನೆಲದಾಂಜನೇಯ ಸ್ವಾಮಿ ದೇವಸ್ಥಾನ

2.ಶ್ರೀ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ

3.ಜ್ಞಾನತೀರ್ಥ ಲಿಂಗ (ಮುದ್ದೇನಹಳ್ಳಿ)

4.ಶ್ರೀ ದಕ್ಷಿಣ ಕಾಶಿ ಪಂಚನಂದಿ ಕ್ಷೇತ್ರ ಪಾಪಾಘ್ನಿ ಮಠ (ಸ್ಕಂದಗಿರಿ)

5.ಕಲ್ಯಾಣಿ (ಕಾರಂಜಿ)

6.ಈಶ ಫೌಂಡೇಶನ್

55

ಪ್ರವಾಸಿ ಪ್ಯಾಕೇಜ್ ಬೆಲೆ ಎಷ್ಟು?

ಈ ಪ್ಯಾಕೇಜ್‌ನ ಬೆಲೆ ಕೇವಲ 600 ರೂಪಾಯಿ ಆಗಿದೆ. ಹೆಚ್ಚಿನ ಮಾಹಿತಿಗಾಗಿ ಮುಂಗಡ ಟಿಕೆಟ್ ಕಾಯ್ದಿರಿಸಲು www.ksrtc.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಇದೇ ರೀತಿ ಬಿಎಂಟಿಸಿ ಹಲವು ಪ್ರವಾಸಿ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ.

Read more Photos on
click me!

Recommended Stories