ದಕ್ಷಿಣ ಮಧ್ಯ ರೈಲ್ವೆ ಇಲಾಖೆಯು ಮಂತ್ರಾಲಯಕ್ಕೆ ಭೇಟಿ ನೀಡುವ ಭಕ್ತರಿಗಾಗಿ ಕಡಿಮೆ ವೆಚ್ಚದಲ್ಲಿ ವಿಶೇಷ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಂಚರಿಸುವ ಈ ರೈಲುಗಳ ಸಂಪೂರ್ಣ ಮಾರ್ಗ, ಸಮಯ ಮತ್ತು ನಿಲ್ದಾಣಗಳ ವಿವರ ಇಲ್ಲಿ ನೀಡಲಾಗಿದೆ.
ಜೀವನದಲ್ಲಿ ಒಮ್ಮೆಯಾದರೂ ಮಂತ್ರಾಲಯಕ್ಕೆ ಹೋಗಿ ಶ್ರೀರಾಘವೇಂದ್ರರ ದರ್ಶನ ಮಾಡಬೇಕು ಎಂದು ಬಯಸುವವರು ಹಲವರು. ರಾಜ್ಯದ ವಿವಿಧ ಭಾಗಗಳಿಂದ ಹಲವಾರು ಬಸ್, ಟ್ರೈನ್ಗಳು ಲಭ್ಯವಿದೆ. ಬಸ್ಸುಗಳಲ್ಲಿ ದರ ಹೆಚ್ಚಳ ಇರುವುದರಿಂದ ಹಲವರಿಗೆ ಇದರಲ್ಲಿ ಪ್ರಯಾಣಿಸುವುದು ಕಷ್ಟವಾದರೆ, ರೈಲಿನ ಸೌಲಭ್ಯಗಳು ಕಡಿಮೆ ಇವೆ ಎನ್ನುವುದು ಬಹುತೇಕ ಮಂದಿಯ ಅಳಲಾಗಿತ್ತು. ಇದನ್ನು ಮನಗಂಡಿರುವ ದಕ್ಷಿಣ ಮಧ್ಯ ರೈಲ್ವೆ ಇಲಾಖೆ (South Central Railway) , ಕಡಿಮೆ ವೆಚ್ಚದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಮಂತ್ರಾಲಯಕ್ಕೆ ವಿಶೇಷ ರೈಲುಗಳನ್ನು ಸಂಚರಿಸಲು ಅವಕಾಶ ಮಾಡಿಕೊಟ್ಟಿದೆ. ಇದರ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.
25
ಆಗಸ್ಟ್ 27 ಮತ್ತು ಸೆಪ್ಟೆಂಬರ್ 1ರಂದು ಸಂಚಾರ
ರೈಲು ಸಂಖ್ಯೆ 09059: ಇದು ಆಂಧ್ರಪ್ರದೇಶದ ಬಾಂದ್ರಾದಿಂದ ವೆಲಂಕಣಿಗೆ ಹೋಗುವ ರೈಲಾಗಿದೆ. ಈ ವಿಶೇಷ ರೈಲು ಆಗಸ್ಟ್ 27 ಮತ್ತು ಸೆಪ್ಟೆಂಬರ್ 1ರಂದು ವಿಶೇಷವಾಗಿ ಸಂಚರಿಸಲಿದೆ. ಈ ವಿಶೇಷ ರೈಲುಗಳು ಆಂಧ್ರ, ಮಹಾರಾಷ್ಟ್ರದ ಕೆಲವೆಡೆ ನಿಲುಗಡೆ ಹೊಂದಲಿವೆ. ಕರ್ನಾಟಕದ ಯಾದಗಿರಿ, ಕೃಷ್ಣಾ, ರಾಯಚೂರು ರೈಲ್ವೆ ನಿಲ್ದಾಣಗಳಲ್ಲಿಯೂ ಈ ರೈಲು ಲಭ್ಯವಿದ್ದು, ಬಳಿಕ ಇದು ಮಂತ್ರಾಲಯ ರಸ್ತೆಗೆ ಹೋಗಲಿದೆ.
35
ಕಾಕಿನಾಡ-ಮೈಸೂರು ಎಕ್ಸ್ಪ್ರೆಸ್
ಕಾಕಿನಾಡ-ಮೈಸೂರು ಎಕ್ಸ್ಪ್ರೆಸ್ (Kakinada Town - Mysuru Express) ಇದಾಗಿದೆ. ರೈಲಿನ ಸಂಖ್ಯೆ 17289/17290. ಇದು ಮೈಸೂರು, ಮಂಡ್ಯ ಹಾಗೂ ಬೆಂಗಳೂರಿನ ಆಸುಪಾಸು ಜನರಿಗೆ ಇದು ತುಂಬಾ ಅನುಕೂಲ ಕಲ್ಪಿಸಲಿದೆ. ಮೈಸೂರಿನಿಂದ ಸಂಜೆ 5:05ಕ್ಕೆ ಹೊರಡುವ ಈ ರೈಲು, ಬೆಂಗಳೂರು ಸಿಟಿಯಿಂದ ರಾತ್ರಿ 8:25ಕ್ಕೆ ಹೊರಡಲಿದೆ. ಇದು ಮರುದಿನ ನಸುಕಿನ 3:28ಕ್ಕೆ ಮಂತ್ರಾಲಯ ರಸ್ತೆ (Mantralayam Road) ನಿಲ್ದಾಣವನ್ನು ತಲುಪಲಿದೆ. ಇದರಿಂದಾಗಿ ಬೆಳಗ್ಗೆ ತುಂಗಭದ್ರೆಯಲ್ಲಿ ಸ್ನಾನಮಾಡಿ, ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಬಹುದಾಗಿದೆ.
ಇದರ ಜೊತೆಗೆ, ಉತ್ತರ ಕರ್ನಾಟಕದ ಜನತೆಗೂ ತುಂಬಾ ಅನುಕೂಲ ಆಗಿದೆ. ರಾಯಚೂರು, ಕೃಷ್ಣ, ಯಾದಗಿರಿ ಮತ್ತು ಸೇಡಂ ಭಾಗದ ಪ್ರಯಾಣಿಕರು ಬೆಂಗಳೂರು ಅಥವಾ ಮೈಸೂರಿಗೆ ಬರಲು ಇದು ಅನುಕೂಲ ಕಲ್ಪಿಸಿದೆ. ಕಾಕಿನಾಡದಿಂದ ಸೋಮವಾರ ಮತ್ತು ಶುಕ್ರವಾರ ಹಾಗೂ ಮೈಸೂರಿನಿಂದ ಮಂಗಳವಾರ ಮತ್ತು ಶನಿವಾರ ಈ ರೈಲು ಸಂಚರಿಸಲಿದೆ.
ಕಾಕಿನಾಡದಿಂದ ಬರುವ ರೈಲು ನಸುಕಿನ 2:30ಕ್ಕೆ ಯಾದಗಿರಿ, 3:48ಕ್ಕೆ ರಾಯಚೂರು ಮೂಲಕ ಮಧ್ಯಾಹ್ನ 12:20ಕ್ಕೆ ಕೆ.ಎಸ್.ಆರ್ ಬೆಂಗಳೂರು ಸಿಟಿ ತಲುಪುತ್ತದೆ. ಮೈಸೂರಿನಿಂದ ಸಂಜೆ ಹೊರಡುವ ರೈಲು ನಸುಕಿನ 4:43ಕ್ಕೆ ರಾಯಚೂರು ಹಾಗೂ 5:58ಕ್ಕೆ ಯಾದಗಿರಿಯನ್ನು ತಲುಪುತ್ತದೆ.
ಆಂಧ್ರಪ್ರದೇಶ: ಗುಂಟೂರು, ವಿಜಯವಾಡ, ರಾಜಮಂಡ್ರಿ, ಸಮಲ್ಕೋಟ್, ಕಾಕಿನಾಡ ಪಟ್ಟಣ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.