ಮಲೈಕಾ - ಅರ್ಜುನ್‌ಗೆ ಹಾಟ್ ಫೇವರೇಟ್ ಆದ ಈ ಗೋವಾ ಬೀಚ್ ರೆಸಾರ್ಟ್‌ ಒಳಾಂಗಣ ನೋಡಿ..

First Published | Jan 14, 2024, 5:35 PM IST

ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಸದಾ ಸುದ್ದಿಯಲ್ಲಿರುವ ಬಾಲಿವುಡ್ ಜೋಡಿ. ಇವರು ತಮ್ಮ ಸಮಯವನ್ನು ಜಾಲಿಯಾಗಿ ಕಳೆಯಲು ಆಗಾಗ ಗೋವಾದ! ಈ ಬೀಚ್ ರೆಸಾರ್ಟ್‌ಗೆ ಹೋಗುತ್ತಾರೆ. ಇದರ ದಿನದ ಬಾಡಿಗೆಯೇ ಲಕ್ಷಗಳಲ್ಲಿದೆ!

ಬಾಲಿವುಡ್ ಕಪಲ್ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಅವರು ಪ್ರೀತಿಯ ಬಗ್ಗೆ ಟ್ರೋಲ್‌ಗಳೇನೇ ಹೇಳಲಿ, ಅದಕ್ಕೆ ಕ್ಯಾರೇ ಎನ್ನದೆ ತಮ್ಮದೇ ಲೋಕದಲ್ಲಿ ಹಾಯಾಗಿದ್ದಾರೆ. 
 

ಆಗಾಗ ಈ ಜೋಡಿ ವೆಕೇಶನ್‌ಗೆ ಎಲ್ಲಾದರೂ ಹೋಗಿ ಬರುವುದುಂಟು. ಹೀಗೆ ಇವರು ವೆಕೇಶನ್‌ಗೆ ಹೋಗುವ ಸ್ಥಳಗಳಲ್ಲಿ ಇವರ ಫೇವರೇಟ್ ಸ್ಥಳವೆಂದರೆ ಗೋವಾದ ಈ ಬೀಚ್ ರೆಸಾರ್ಟ್.

Tap to resize

ಗೋವಾದ ಕ್ಯಾಂಡೋಲಿಮ್ ಬಳಿ ಇರುವ ಲಕ್ಷುರಿಯಸ್ ರೆಸಾರ್ಟ್ ಅಝಾರಾ ಬೀಚ್ ಹೌಸ್ ಮಲೈಕಾ ಸೋದರಿ ಅಮೃತ ಅರೋರಾ ಹಾಗೂ ಆಕೆಯ ಪತಿಗೆ ಸೇರಿದೆ.

ಇಲ್ಲಿಗೆ ತೆರಳುವ ಮಲೈಕಾ ಮತ್ತು ಅರ್ಜುನ್ ಈ ಬೀಚ್ ಹೌಸ್ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ. ಅರ್ಜುನ್‌ಗಂತೂ ಇದು ಬಹಳ ಇಷ್ಟದ ಸ್ಥಳವಾಗಿದೆಯಂತೆ. 

5 ಕೋಣೆಗಳುಳ್ಳ ಈ ಮನೆಯಲ್ಲಿ ತೆಗೆಸಿಕೊಂಡ ಫೋಟೋವನ್ನು ಇನ್ಸ್ಟಾಗೆ ಹಾಕಿದ್ದ ಅರ್ಜುನ್, 'ಎಂಥಾ ಅದ್ಬುತ ಮನೆ ಇದು, ಬಿಟ್ಟು ಹೋಗಲು ಮನಸ್ಸೇ ಬಾರದು' ಎಂದು ಕ್ಯಾಪ್ಶನ್ ನೀಡಿದ್ದರು. 

ವಿಂಟೇಜ್ ಮತ್ತು ಮಾಡರ್ನ್ ಟಚ್ ಇರುವ ಈ ಮನೆಯಲ್ಲಿ ಬಹಳ ದೊಡ್ಡದಾದ ಸ್ವಿಮ್ಮಿಂಗ್ ಪೂಲ್ ಇದ್ದು, ಪೂಲ್ ವ್ಯೂ ಹೊಂದಿರುವ ಕೋಣೆಗಳೂ ಇವೆ. 

ಅಜಾರಾ ಬೀಚ್ ಹೌಸ್ ಎತ್ತರದ ಸೀಲಿಂಗ್‌ಗಳು, ಆಧುನಿಕ ದೀಪಗಳು, ಪುರಾತನ ಮರದ ಫಿಟ್ಟಿಂಗ್‌ಗಳ ಜೊತೆ ಟ್ರೋಪಿಕಲ್ ಪ್ಯಾರಡೈಸ್ ರೀತಿ ಕಾಣಿಸುತ್ತದೆ. 

ವೈಭವದ ವಿಲ್ಲಾ ಕ್ಯಾಂಡೆಲಿಮ್ ಕಡಲತೀರದಿಂದ ಕೇವಲ 150 ಮೀಟರ್ ದೂರದಲ್ಲಿದೆ ಮತ್ತು ಸೂರ್ಯಾಸ್ತದ ಅದ್ಭುತ ನೋಟಗಳನ್ನು ನೀಡುತ್ತದೆ. 

ಮಲಗುವ ಕೋಣೆಗಳು ಸುಂದರವಾದ ಬಾಲ್ಕನಿಗಳನ್ನು ಹೊಂದಿದ್ದು, ಬಿಸಿ ಕಾಫಿಯನ್ನು ಆನಂದಿಸುತ್ತಾ ವಿಶ್ರಾಂತಿ ಪಡೆಯಲು ಸೂಕ್ತವಾಗಿವೆ. 

ಊಟದ ಕೊಠಡಿಯು  ಬೃಹತ್ ಡೈನಿಂಗ್ ಟೇಬಲ್‌ನೊಂದಿಗೆ ಅತ್ಯುತ್ತಮವಾಗಿ ಐಷಾರಾಮಿಯಾಗಿದೆ.  ಫರ್ನಿಚರ್‌ಗಳು ಎಲ್ಲ ರೀತಿಯ ಕಂಫರ್ಟ್ ನೀಡುವಂಥ ವೆರೈಟಿಯಲ್ಲಿವೆ.

ಅಬ್ಬಬ್ಬಾ, ಈ ಲಕ್ಷುರಿ ಅನುಭವಿಸಲು ಒಂದು ದಿನದ ಬಾಡಿಗೆ 'ಮೇಕ್ ಮೈ ಟ್ರಿಪ್' ಪ್ರಕಾರ ಸುಮಾರು 1 ಲಕ್ಷದ 56 ಸಾವಿರ ರುಪಾಯಿಗಳು!

Latest Videos

click me!